Stock Market 
ದೇಶ

ಷೇರುಪೇಟೆಲಿ ಗೂಳಿ ಭರ್ಜರಿ ಓಟ: ಸೆನ್ಸೆಕ್ಸ್​ 1,022, ನಿಫ್ಟಿ 320 ಅಂಕ ಏರಿಕೆ | Stock Market

ಮುಂಬೈ: ದೇಶೀಯ ಷೇರು(Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರ(ನ.24) ಭಾರೀ ಏರಿಕೆ ಕಂಡಿದೆ.
ಸೆನ್ಸೆಕ್ಸ್ ಬರೋಬ್ಬರಿ 1,022.50 ಪಾಯಿಂಟ್ ಅಥವಾ ಶೇಕಡಾ 1.21 ರಷ್ಟು ಏರಿಕೆ ಆಗುವ ಮೂಲಕ 85,609ಕ್ಕೆ ತಲುಪಿದರೆ, ನಿಫ್ಟಿ 320.50 ಪಾಯಿಂಟ್ ಅಥವಾ ಶೇಕಡಾ 1.24 ರಷ್ಟು ಅಂಶ ಏರಿಕೆ ಆಗುವ ಮೂಲಕ 26,205.30ಕ್ಕೆ ತಲುಪಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್-ಕ್ಯಾಪ್ ಸೂಚ್ಯಂಕಗಳು ತಲಾ 1.2 ಪ್ರತಿಶತ ಏರಿಕೆ ಕಂಡದೆ.
ಸೆನ್ಸೆಕ್ಸ್‌ನಲ್ಲಿ, ಬಜಾಜ್, ರಿಲಯನ್ಸ್ ಇಂಡಸ್ಟ್ರೀಸ್, ಸನ್ ಫಾರ್ಮಾ ಮತ್ತು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಹೆಚ್ಚು ಲಾಭ ಗಳಿಸಿದವುಗಳಲ್ಲಿ ಸೇರಿವೆ, ಆದರೆ ಭಾರ್ತಿ ಏರ್‌ಟೆಲ್ ಮತ್ತು ಏಷ್ಯನ್ ಪೇಂಟ್ಸ್ ಮಾತ್ರ ಕುಸಿತ ಕಂಡ ಷೇರುಗಳಾಗಿವೆ.

ಮಾರುಕಟ್ಟೆ ಏರಿಕೆಗೆ ಕಾರಣ ಏನು?

ಉಕ್ರೇನ್​-ರಷ್ಯಾ ನಡುವೆ ಯುದ್ಧದ ಬಗ್ಗೆ ಶಾಂತಿ ಒಪ್ಪಂದಗಳು ಆಗುತ್ತಿದ್ದು, ಯುದ್ಧ ನಿಲ್ಲುವ ಸಾಧ್ಯತೆ ಇರುವುದರಿಂದ ಕಚ್ಚಾ ತೈಲ ಬೆಲೆಗಳು ಕುಸಿಯುತ್ತಿರುವುದು ಸಹ ಸಕಾರತ್ಮಾಕ ಭಾವನೆಗಳನ್ನು ಮೂಡಿಸಿದೆ,(ಏಜೆನ್ಸೀಸ್​).