Stock Market 
ದೇಶ

ಷೇರುಪೇಟೆಲಿ ಭರ್ಜರಿ ಗೂಳಿ ಓಟ: ಸೆನ್ಸೆಕ್ಸ್ 450, ನಿಫ್ಟಿ 148 ಅಂಕ ಏರಿಕೆ | Stock Market

ಮುಂಬೈ: ದೇಶೀಯ ಷೇರು(Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶುಕ್ರವಾರ(ಡಿ.11) ಭರ್ಜರಿ ಏರಿಕೆ ಕಂಡಿದೆ.
ಸೆನ್ಸೆಕ್ಸ್ 450 ಪಾಯಿಂಟ್‌ಗಳು ಏರಿಕೆಯಾಗಿ 85,267.66 ಕ್ಕೆ ತಲುಪಿದ್ದರೆ, ನಿಫ್ಟಿ 50 148 ಪಾಯಿಂಟ್‌ಗಳು ಹೆಚ್ಚಳವಾಗಿ 26,046.95 ಕ್ಕೆ ಕೊನೆಗೊಂಡಿತು. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ 1.14% ಮತ್ತು 0.65% ರಷ್ಟು ಏರಿಕೆಯಾಗಿವೆ.
ಬಿಎಸ್‌ಇ(ಬಾಂಬೆ ಸ್ಟಾಕ್​​ ಎಕ್ಸ್​ಚೆಂಚ್​​) ಪಟ್ಟಿಮಾಡಿದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ವಹಿವಾಟಿನಲ್ಲಿ 466.6 ಲಕ್ಷ ಕೋಟಿ ರೂ.ಗಳಿಂದ 470 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಇದರಿಂದಾಗಿ ಹೂಡಿಕೆದಾರರು ಒಂದೇ ವಹಿವಾಟಿನಲ್ಲಿ 3 ಲಕ್ಷ ಕೋಟಿಗಳಿಗಿಂತ ಹೆಚ್ಚು ಶ್ರೀಮಂತರಾಗಿದ್ದಾರೆ.