Northeast students, locals clash at Andhra college
- ಕಾಕಿನಾಡಿ ಹಾಸ್ಟಲೆ್ವೊಂದರಲ್ಲಿ ಯುವತಿಯರ ನಡುವೆ ಕಿತ್ತಾಟ
- ಮೊಬೈಲ್ ಕಳುವಾದ ವಿಚಾರಕ್ಕೆ ಈಶಾನ್ಯ ಭಾರತೀಯ ಮತ್ತು ಸ್ಥಳೀಯ ಯುವತಿಯರ ನಡುವೆ ಗಲಾಟೆ
- ಬಕೆಟ್, ಚಪ್ಪಲಿ ಎಸೆದು, ಮೈ ಪರಚಿ ಹಾನಿ ಮಾಡಿದ ಸ್ಥಳೀಯ ಯುವತಿಯರು
ಕಾಕಿನಾಡ: ಮೊಬೈಲ್ ಕಳುವಾದ ಸಣ್ಣ ವಿಚಾರಕ್ಕೆ ಲೋಕಲ್ ವಿದ್ಯಾರ್ಥಿಗಳು ಮತ್ತು ಈಶಾನ್ಯ ಭಾರತೀಯ ಯುವತಿಯರ ನಡುವೆ ನಡೆದ ಗಲಾಟೆಯಿಂದಾಗಿ
ಆಂಧ್ರ ಪ್ರದೇಶದ ಕಾಕಿನಾಡಿನಲ್ಲಿನ ವಸತಿ ನಿಲಯ ರಣರಂಗವಾಗಿ ಬದಲಾದ ಘಟನೆ ಬೆಳಕಿಗೆ ಬಂದಿದೆ.
ಎಲ್ಲೆಂದರಲ್ಲಿ ಚಪ್ಪಲಿ, ಈಶಾನ್ಯ ಭಾರತದ ಯುವತಿಯರು ಗೊಳೋ ಎಂದು ಕೂಗಾಡುತ್ತಿರುವುದು, ದೊಣ್ಣೆ, ಚಪ್ಪಲಿ, ನೀರಿನ ಕ್ಯಾನ್ ಹಿಡಿದು ಹೊಡೆದಾಡಿಕೊಳ್ಳುತ್ತಿರುವುದು ಹಾಗೂ ಯಾರ್ಯಾರು ಹೇಗೆ ತಮ್ಮನ್ನು ಒಡೆದರು, ಎಲ್ಲಿ ಹೇಗೆ ಕೈ ತರಚಿಕೊಂಡಿದೆ ಎಂದು ವಿವರಣೆ ಕೊಡುತ್ತಿರುವ ವಿಡಿಯೋಗಳು ಎಕ್ಸ್ನಲ್ಲಿ ವೈರಲ್ ಆಗಿದೆ.
ಕಾಕಿನಾಡಿನಲ್ಲಿರುವ ಎಸ್‌ಕೆ ಕಾಲೇಜ್ ಆಫ್ ನರ್ಸಿಂಗ್‌ನ ವಸತಿ ನಿಲಯದಲ್ಲಿ ಆಗಸ್ಟ್ 21ರಂದು ಉತ್ತರ ಭಾರತದ ಯುವತಿಯೊಬ್ಬರ ಮೊಬೈಲ್ ಕಳುವಾಗಿತ್ತು. ಈ ಬಗ್ಗೆ ಆಕೆ ವಿಚಾರಿಸುವಾಗ, ಸ್ಥಳೀಯ ಮತ್ತು ಉತ್ತರ ಭಾರತದ ವಿದ್ಯಾರ್ಥಿನಿಯರ ಮಧ್ಯೆ ವಾಗ್ವಾದ ಹೆಚ್ಚಾಗಿ ಗಲಾಟೆ ಶುರುವಾಯಿತು. ಘಟನೆಯಲ್ಲಿ ಕೆಲಸವರಿಗೆ ಗಾಯವಾಗಿದೆ ಎನ್ನಲಾಗಿದೆ.
ಡಿಸಿಯಿಂದ ಸಮಸ್ಯೆ ತಹಬದಿಗೆ
ಗಲಾಟೆ ನಡೆದ ಬಗ್ಗೆ ಮಾಹಿತಿ ಹೊರಬರುತ್ತಲೇ ಘಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮವಾಗಿ ಉತ್ತರ ಭಾರತದ ವಿದ್ಯಾರ್ಥಿಗಳನ್ನು ಪ್ರತ್ಯೇಕ ವಸತಿ ನಿಲಯಕ್ಕೆ ವರ್ಗಾಯಿಸಿದೆ. ಜೊತೆಗೆ ಭದ್ರತೆಗಾಗಿ ಮಹಿಳಾ ಸಬ್-ಇನ್ಸ್‌ಪೆಕ್ಟರ್ ಅವರನ್ನು ನಿಯೋಜಿಸಲಾಯಿತು.
ಬೀರೆನ್ ಸಿಂಗ್ ಹೇಳಿದ್ದೇನು?
ಈ ಘಟನೆ ಬಗ್ಗೆ ಮಣಿಪುರದ ಮಾಜಿ ಸಿಎಂ ಎನ್ ಬೀರೇನ್ ಸಿಂಗ್ ಅವರು ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಕಚೇರಿಯೊಂದಿಗೆ ಮಾತನಾಡಿದ ಅವರು ಈ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ಆಡಳಿತವು ತ್ವರಿತವಾಗಿ ಕ್ರಮ ಕೈಗೊಂಡಿದ್ದಕ್ಕೆ ಮಣಿಪುರ ವಿದ್ಯಾರ್ಥಿಗಳು ಹಾಗೂ ಮಾಜಿ ಸಿಎಂ ಸಂತಸ ವ್ಯಕ್ತಪಡಿಸಿದ್ದು, ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಸ್ಪಷ್ಟಪಡಿಸಿದೆ, (ಏಜೆನ್ಸೀಸ್).
, , missing mobile phone dispute, Chandrababu Naidu intervention, N Biren Singh Manipur students, Andhra Pradesh student clash news.