ಕೇಂದ್ರ ಸಚಿವ ಸಂಪುಟ ಸಭೆ  
ದೇಶ

ಯುವಕರ ಜೊತೆ ಸಂಪರ್ಕ ಸಾಧಿಸಲು ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯರಾಗಿರಿ; ರೀಲ್ಸ್ ಪೋಸ್ಟ್ ಮಾಡಿ: ಕೇಂದ್ರ ಸಚಿವರಿಗೆ ಪ್ರಧಾನಿ ಮೋದಿ ಸಲಹೆ | PM Modi

ನವದೆಹಲಿ: ಸಿಜೆಪಿ ಪ್ರತಿಭಟನೆಯಿಂದ ಪ್ರಭಾವಿತರಾಗಿರುವ ಪ್ರಧಾನಿ ಮೋದಿ(PM Modi) ಶುಕ್ರವಾರ(ಜು. 24) ನಡೆದ ತಮ್ಮ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಯುವಕರ ಜೊತೆ ಸಂಪರ್ಕ ಸಾಧಿಸಲು ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯರಾಗಿರಿ, ರೀಲ್ಸ್​ ಪೋಸ್ಟ್ ಮಾಡಿ ಎಂದು ಸಚಿವರಿಗೆ ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ.
ಸಭೆಯಲ್ಲಿ ಪ್ರಧಾನಿ ಮೋದಿ, ಎಷ್ಟು ಮಂದಿ ಇನ್‌ಸ್ಟಾಗ್ರಾಮ್‌ನಂತಹ ವೇದಿಕೆಗಳನ್ನು ಸಕ್ರಿಯವಾಗಿ ಬಳಸುತ್ತಿದ್ದೀರಿ ಎಂದು ಸಚಿವರನ್ನು ಕೇಳಿದ್ದು, ದೇಶದ ಹೆಚ್ಚಿನ ಯುವಕರು ಅಂತಹ ವೇದಿಕೆಗಳಲ್ಲಿ ಸಮಯ ಕಳೆಯುತ್ತಿದ್ದಾರೆ. ಮತ್ತು ಸರ್ಕಾರವು ಅವರೊಂದಿಗೆ ತನ್ನ ಸಂಬಂಧವನ್ನು ಬಲಪಡಿಸಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಕೇವಲ ಸರ್ಕಾರದ ಸಾಧನೆಗಳನ್ನು ಮತ್ತು ಅದರ ಕುರಿತಾದ ಕೇವಲ ನವೀಕರಣಗಳನ್ನು ಪೋಸ್ಟ್ ಮಾಡುವುದು ಸಾಕಾಗುವುದಿಲ್ಲ. ಬದಲಾಗಿ, ಯುವಜನರೊಂದಿಗೆ ನೇರವಾಗಿ ಸಂವಹನ ನಡೆಸಲು ಮತ್ತು ಆಕರ್ಷಕವಾಗಿ, ಸುಲಭವಾಗಿ ಸಂವಹನ ನಡೆಸಲು ಇನ್​ಸ್ಟಾಗ್ರಾಂ ಬಳಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಬಹಳಷ್ಟು ಯುವಕರು ಇನ್‌ಸ್ಟಾಗ್ರಾಮ್‌ನಲ್ಲಿದ್ದಾರೆ. ನಾವೆಲ್ಲರೂ ಸಂಪರ್ಕದಲ್ಲಿರಬೇಕಾದ ನಾಗರಿಕರ ದೊಡ್ಡ ವಿಭಾಗವಿದು. ಅಲ್ಲಿ ಅವರನ್ನು ಸಂಪರ್ಕಿಸಲು ಮತ್ತು ನಮ್ಮತ್ತ ಸೆಳೆಯಲು ಸಂವಾದಾತ್ಮಕ ವಿಷಯಗಳ ರೀಲ್‌ಗಳನ್ನು ಪೋಸ್ಟ್ ಮಾಡಲು ಸಚಿವರಿಗೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನೂ ಇಂದಿನ ಸಂಪುಟ ಸಭೆಯಲ್ಲಿ ಮುಖ್ಯವಾಗಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಂಚನೆಯ ವಿರುದ್ಧ 3 ತಿಂಗಳೊಳಗೆ ಕ್ರಮ, 10 ಕೋಟಿ ರೂ. ದಂಡ, 10 ವರ್ಷ ಜೈಲು ಶಿಕ್ಷೆ ವಿಧಿಸುವ ಮಸೂದೆಗೆ ಅನುಮೋದನೆ ನೀಡಿದೆ (ಏಜೆನ್ಸೀಸ್).