Pranit More Biryani Row 
ದೇಶ

Pranit More Biryani Row:​​ 'ಸ್ಟ್ಯಾಂಡ್-ಅಪ್ ಕಾಮಿಡಿ ಶೋಗಳನ್ನು ಬ್ಯಾನ್​ ಮಾಡ್ಬೇಕು ಎಂದ ಮುಂಬೈ ಮೇಯರ್ ರೀತು ತಾವ್ಡೆ

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಸಂಸ್ಕೃತಿಗೆ ಸ್ಟ್ಯಾಂಡ್-ಅಪ್ ಕಾಮಿಡಿ ಶೋ ಧಕ್ಕೆ ತರುತ್ತಿವೆ ಬ್ಯಾನ್ ಮಾಡ್ಬೇಕು ಎಂದ ಮುಂಬೈ ಮೇಯರ್
  • ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪತ್ರ ಬರೆಯುತ್ತೇನೆ ಎಂದ ರೀತು ತಾವ್ಡೆ
  • ಪ್ರಣೀತ್ ಮೋರೆ ಸೇರಿದಂತೆ ಹಲವರ ವಿರುದ್ಧ ಮಹಾರಾಷ್ಟ್ರ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್
Pranit More Biryani Row: ಗುರುಗ್ರಾಮದಲ್ಲಿ ನಡೆದ ಸ್ಟ್ಯಾಂಡ್-ಅಪ್ ಕಾಮಿಡಿ ಶೋನ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಟೀಕೆಗೆ ಒಳಗಾಗಿದ್ದ ಬೆನ್ನಲ್ಲೇ ಮುನ್ಸಿಪಲ್ ಕಾರ್ಪೊರೇಷನ್ ನ ನೂತನ ಮೇಯರ್ ಆಗಿ ಬಿಜೆಪಿ ಕಾರ್ಪೊರೇಟರ್ ರೀತು ತಾವ್ಡೆ ಅವರು ಇಂತಹ ಶೋಗಳ ಮೇಲೆ ಸಂಪೂರ್ಣ ನಿಷೇಧ ಹೇರಬೇಕೆಂದು ಆಗ್ರಹಿಸಿದ್ದಾರೆ.

ಕಾಮಿಡಿ ಶೋ ಬ್ಯಾನ್ ಮಾಡ್ಬೇಕು

ಸ್ಟ್ಯಾಂಡ್-ಅಪ್ ಕಾಮಿಡಿ ಶೋಗಳನ್ನು ಬ್ಯಾನ್​ ಮಾಡ್ಬೇಕು ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆಯಲು ಮುಂದಾಗಿದ್ದಾರೆ ಎನ್ನುವುದಾಗಿ ಎಎನ್​ಐ ವರದಿ ಮಾಡಿದೆ
ಪ್ರಣೀತ್ ಮೋರೆ ಅವರ ಕಾಮಿಡಿ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್​ಗಳು ಹರಿದಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಮಹಿಳಾ ಆಯೋಗ ಮತ್ತು ಮಹಾರಾಷ್ಟ್ರ ಸೈಬರ್ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಮೇಯರ್​ ರಿತು ಹೇಳಿದ್ದೇನು?

ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಮೇಯರ್ ರಿತು ತಾವ್ಡೆ, 'ವೈರಲ್ ಆಗಿರುವ ವೀಡಿಯೊದಲ್ಲಿರುವ ಕಾಮೆಂಟ್‌ಗಳು ಭಾರತೀಯ ಸಾಂಸ್ಕೃತಿಕ ಮೌಲ್ಯಗಳಿಗೆ ತಕ್ಕುದಾದದ್ದಲ್ಲ. ಇಂತಹ ಹೇಳಿಕೆಗಳು ಭಾರತೀಯ ಸಂಸ್ಕೃತಿಗೆ ಶೋಭೆ ತರುವುದಿಲ್ಲ. ಸ್ಟ್ಯಾಂಡ್-ಅಪ್ ಕಾಮಿಡಿ ಶೋಗಳನ್ನು ನಿಷೇಧಿಸಬೇಕು. ಈ ಬಗ್ಗೆ ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಿದ್ದೇನೆ'ಎಂದು ರಿತು ತಾವ್ಡೆ ಹೇಳಿದ್ದಾರೆ.

ಸಿಎಂ ಹೀಗಂದ್ರು

ಸಿಎಂ ದೇವೇಂದ್ರ ಫಡ್ನವಿಸ್ ಈ ವಿವಾದದ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಪ್ರತಿಕ್ರಿಯಿಸಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಬೇಕು ನಿಜ, ಆದರೆಸಭ್ಯತೆಯ ಗಡಿ ದಾಟಬಾರದು. ಗಡಿ ಮೀರಿದಾಗ ಸಮಾಜದಲ್ಲಿನ ವ್ಯಕ್ತಿಗಳ ಘನತೆಯಿಂದ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತದೆ," ಎಂದು ಫಡ್ನವಿಸ್ ಅಭಿಪ್ರಾಯಪಟ್ಟಿದ್ದಾರೆ.

ವೀಡಿಯೊದಲ್ಲೇನಿದೆ?

ವೈದ್ಯಕೀಯ ಶಿಕ್ಷಣಕ್ಕಾಗಿ ಬಳಸಲಾಗುವ ಮೃತದೇಹಗಳು ಮತ್ತು ಪುರುಷರ ಖಾಸಗಿ ಅಂಗಾಗದ ಬಗ್ಗೆ ಡಾ. ಸೆಜಲ್ ಪವಾರ್ ಅವರು ಅತ್ಯಂತ ಅಶ್ಲೀಲ ಹಾಗೂ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿರುವುದು ಕಂಡುಬಂದಿದೆ. ಇದು ಮೃತರ ಘನತೆಗೆ ಧಕ್ಕೆ ತರುವಂತಹದ್ದು ಮತ್ತು ಸಾರ್ವಜನಿಕ ಸಭ್ಯತೆಯ ಮಾನದಂಡಗಳಿಗೆ ವಿರುದ್ಧವಾದದ್ದು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ, (ಏಜೆನ್ಸೀಸ್).