- ಕೇರಳ ಮೂಲದ ನರ್ಸ್ಗಳ ಕಾರ್ಯ ವೈಖರಿಯನ್ನು ಹಾಡಿ ಹೊಗಳಿದ ರಾಹುಲ್ ಗಾಂಧಿ
- ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ಸೋನಿಯಾ ಗಾಂಧಿ ದಾಖಲು
- ಗಂಟೆಗೊಮ್ಮೆ ಸೋನಿಯಾಗಾಂಧಿಯವರ ಆರೋಗ್ಯ ವಿಚಾರಿಸುತ್ತಿದ್ದ ನರ್ಸ್ನನ್ನು ಪ್ರಶಂಸಿಸಿದ ರಾಹುಲ್ ಗಾಂಧಿ
ತಿರುವನಂತಪುರಂ:`ನನ್ನ ತಾಯಿ ಕೋಣೆಯಲ್ಲಿ ನಾನು ಒಬ್ಬಂಟಿಯಾಗಿ ಸೋಫಾದ ಮೇಲೆ ಕುಳಿತಿದ್ದೆ.ಎಲ್ಲ ಮಕ್ಕಳಂತೆ ನಾನು ಸಹ ನನ್ನ ತಾಯಿಯ ಆರೋಗ್ಯದ ಬಗ್ಗೆ ಚಿಂತಾಕ್ರಾಂತನಾಗಿದ್ದೆ. ಹೀಗಿದ್ದಾಗಲೂ ನನಗೆ ಇಡೀ ರಾತ್ರಿ ನನಗೆ ಚೈತನ್ಯ ಕೊಟ್ಟಿದ್ದು ಒಂದು ವಿಚಾರ. ಅದು ಕೇರಳದ ನರ್ಸ್(Keralam Nurse). ಆಕೆ ರಾತ್ರಿಯಿಡೀ ನನ್ನ ತಾಯಿಯ ಆರೈಕೆ ಮಾಡುವ ಮೂಲಕ, ಪರೋಕ್ಷವಾಗಿ ನನ್ನಲ್ಲಿ ಧೈರ್ಯ ತುಂಬಿದರು' ಹೀಗೆ ರಾಹುಲ್ ಗಾಂಧಿಯವರು ಭಾವುಕರಾಗಿ ಮಾತನಾಡಿದ್ದು, ಕಾರಣಾಂತರದಿಂದ ಚುನಾವಣಾ ರ‍್ಯಾಲಿಗೆ ಹಾಜರಾಗದೆ ಕೇರಳದ ಜನತೆಗೆ ಕಳುಹಿಸಿದ್ದ ಸಂದೇಶದಲ್ಲಿ.
ಏಪ್ರಿಲ್ನಲ್ಲಿ ಕೇರಳ ವಿಧಾನಸಭೆ ಚುನಾವಣೆ ಹಿನ್ನೆಲೆ, ಮಾ.25ರ ಬುಧವಾರ ಕಾಂಗ್ರೆಸ್ ತನ್ನ ಚುನಾವಣಾ ರ‍್ಯಾಲಿಯನ್ನು ಆಯೋಜಿಸಿತ್ತು. ಆದರೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಭಾಗವಹಿಸಲು ಸಾಧ್ಯವಾಗಲಿಲ್ಲ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆರೋಗ್ಯ ತೀರ ಹದಗೆಟ್ಟಿದ್ದ ಹಿನ್ನೆಲೆ, ಅವರನ್ನು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಹುಲ್ ಗಾಂಧಿಯವರು ಅವರ ಆರೈಕೆಯಲ್ಲಿದ್ದರು. ಹೀಗಾಗಿ, ಕೇರಳದ ಜನತೆಗೆ ವಿಡಿಯೋ ಮೂಲಕ ಕೊಟ್ಟ ಸಂದೇಶದಲ್ಲಿ ಕೇರಳದ ನರ್ಸ್ವೊಬ್ಬರ ಸಹಾನುಭೂತಿಯನ್ನು ಹಾಡಿಹೊಗಳಿದ್ದಾರೆ.
ಕೇರಳದ ನರ್ಸ್ ಆಗಾಗ ತಾಯಿಯ ಕೋಣೆಗೆ ಬಂದು ಆಕೆಯನ್ನು ಪರೀಕ್ಷಿಸುತ್ತಿದ್ದರು. ಆ ನಂತರ ನನ್ನತ್ತ ಒಂದು ಕಿರುನಗೆ ಬೀರುತ್ತಿದ್ದರು. ಇದು ಇಡೀ ಸಮುದಾಯದ ಬದ್ಧತೆ ಎಂದು ಶ್ಲಾಘಿಸಿದ್ದಾರೆ.
ಕೇರಳದ ನರ್ಸ್ ಕಾರ್ಯಕ್ಕೆ ಪ್ರಶಂಸೆ
ಒಬ್ಬ ನರ್ಸ್ನ ಆರೈಕೆಯನ್ನು ಮಾತ್ರ ಪರಿಗಣಿಸದೇ ಎಲ್ಲರ ಶ್ರಮವನ್ನು ಅವರು ಶ್ಲಾಘಿಸಿದ್ದಾರೆ. ದೇಶದಲ್ಲಿ ಇರುವ ಬಹುತೇಕ ಆಸ್ಪತ್ರೆಯಲ್ಲಿ ಕೇರಳದ ನರ್ಸ್ಗಳು ಇದ್ದಾರೆ. ನನ್ನ ಆಲೋಚನೆಗೆ ಬಂದಿದ್ದು ಏನು ಗೊತ್ತ. ನನ್ನಂತೆಯೇ ಅಕ್ಕ, ತಂಗಿ, ತಮ್ಮ, ಅಣ್ಣ, ಮಕ್ಕಳು ಎಷ್ಟೋ ಜನರಿದ್ದಾರೆ. ಅವರು ಆಸ್ಪತ್ರೆಗಳಲ್ಲಿ ಮಾನಸಿಕವಾಗಿ ನೊಂದಿರುತ್ತಾರೆ. ಕಠಿಣ ಸಂದರ್ಭದಲ್ಲಿ ಎಲ್ಲರಿಗೂ ಒಂದು ಕಂಫರ್ಟ್ ಭಾವನೆ ಕೊಡುವುದು ಈ ಕೇರಳಂನ ನರ್ಸ್ಗಳು ಎಂದು ಹೇಳಿಕೊಂಡಿದ್ದಾರೆ.
ನಿದ್ರೆ ಮಾಡದೆ ಆರೈಕೆ ಮಾಡೋದೆ ಅವರ ಗುಣ
ಮುಂದುವರೆದು, ನಾನು ಮುಂಜಾನೆ ನರ್ಸ್ ಬಳಿ ಕೇಳಿದೆ. ನೀವು ಬೆಳಿಗ್ಗೆ ಮಲಗುತ್ತೀರಾ ಅಥವಾ ರಾತ್ರಿನಾ ಎಂದು. ಅದಕ್ಕೆ ಆಕೆ ನಾನು ರಾತ್ರಿ ಮಲಗೋದಿಲ್ಲ ಕೆಲಸ ಮಾಡ್ತೇನೆ ಎಂದರು. ಜಗತ್ತು ನಿದ್ರಿಸುವಾಗ ಇವರು ತಮ್ಮ ರೋಗಿಗಳಿಗಾಗಿ ಕೆಲಸ ಮಾಡುತ್ತಾರೆ. ಇವರು ಕೇರಳದಲ್ಲಿ ಮಾತ್ರವಲ್ಲದೆ, ದೆಹಲಿ, ಮುಂಬೈ ಸೇರಿದಂತೆ ದೇಶ ಮತ್ತು ಪ್ರಪಂಚದಾದ್ಯಂದ ಜನರ ಆರೈಕೆ ಮಾಡುತ್ತಾ, ನೊಂದ ಮನಸ್ಸಿಗೆ ಸಾಂತ್ವಾನ ಹೇಳುತ್ತಾ ನಿರಾಳತೆ ನೀಡುತ್ತಾರೆ. ಇದು ಕೇರಳದಿಂದ ಸಿಗುವ ಚೇತನ ಎಂದರೆ ಎಂದು ಹಾಡಿ ಹೊಗಳಿದ್ದಾರೆ.
ಏಪ್ರಿಲ್ 9ರಂದು 140 ಸದಸ್ಯ ಬಲದ ಕೇರಳ ವಿಧಾನಸಭೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ 100ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವ ಭರವಸೆ ಹೊಂದಿದೆ,(ಏಜನ್ಸೀಸ್).