ಅಧಿವೇಶನದಿಂದ ಹೊರಹೋಗುತ್ತಿರುವ ರಾಜ್ಯಪಾಲ ಆರ್.ಎನ್.ರವಿ 
ದೇಶ

ತಮಿಳುನಾಡು ವಿಧಾನಸಭೆ ಅಧಿವೇಶನದ ಮೊದಲ ದಿನವೇ ಸ್ಪೀಕರ್ v/s ಗವರ್ನರ್ ವಾಗ್ವಾದ; ಸದನದಿಂದ ಹೊರ ನಡೆದ ಗವರ್ನರ್ R N Ravi

ಚೆನ್ನೈ: ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್​.ಎನ್​.ರವಿ ನಡುವಿನ ಕಿತ್ತಾಟ ಮುಂದುವರೆದಿದ್ದು, ಇಂದು(ಜ. 20) ವಿಧಾನಸಭೆ ಅಧಿವೇಶನದ ಮೊದಲ ದಿನವೇ ಸ್ಪೀಕರ್ ಅಪ್ಪಾವು ಮತ್ತು ರಾಜ್ಯಪಾಲರ ನಡುವೆ ಶಿಷ್ಟಾಚಾರದ ಕುರಿತು ವಾಗ್ವಾದ ನಡೆದಿದೆ. ಬಳಿಕ ನನಗೆ ಅವಮಾನ ಮಾಡಲಾಗಿದೆ ಎಂದು ರಾಜ್ಯಪಾಲರು ಸದನದಿಂದ ಹೊರ ನಡೆದಿದ್ದಾರೆ.
ಶಿಷ್ಟಾಚಾರ ಪ್ರಕಾರ ಬೆಳಗ್ಗೆ 9.30ಕ್ಕೆ ಸದನ ಆರಂಭವಾಗುತ್ತಿದ್ದಂತೆ ತಮಿಳು ರಾಜ್ಯಗೀತೆಯನ್ನು ಹಾಡಿ ಸದನವನ್ನು ಆರಂಭಿಸಲಾಯಿತು, ಮತ್ತು ರಾಜ್ಯಪಾಲರು ಭಾಷಣವನ್ನು ಮಾಡಬೇಕಿತ್ತು. ಆದರೆ ರಾಜ್ಯಪಾಲರು ಸದನವನ್ನು ಪ್ರವೇಶಿಸಿದ ಕೂಡಲೇ ರಾಷ್ಟ್ರಗೀತೆ ಹಾಡುವ ಸಂಬಂಧ ರಾಷ್ಟ್ರಗೀತೆಗೆ ಸರಿಯಾದ ಗೌರವ ನೀಡಬೇಕು. ಆದರೆ ಸದನದಲ್ಲಿ ನನಗೆ ಈಗ ನಿರಾಶೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಧಾನಸಭೆ ಸ್ಪೀಕರ್ ಅಪ್ಪಾವು, ರಾಜ್ಯ ಸರ್ಕಾರ ಸಿದ್ಧಪಡಿಸಿದ ಸಾಂಪ್ರದಾಯಿಕ ಭಾಷಣವನ್ನು ಓದುವುದಕ್ಕೆ ಮಾತ್ರ ರಾಜ್ಯಪಾಲರು ತಮ್ಮನ್ನು ಸೀಮಿತಗೊಳಿಸಿಕೊಳ್ಳಬೇಕು. ಸದನದ ಸ್ಥಾಪಿತ ನಿಯಮಗಳು ಮತ್ತು ಸಂಪ್ರದಾಯಗಳನ್ನು ಪಾಲಿಸಬೇಕು. ವಿಧಾನಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು ಮಾತ್ರ ಅಭಿಪ್ರಾಯ ವ್ಯಕ್ತಪಡಿಸಲು ಅನುಮತಿ ಇದೆ ಎಂದು ಹೇಳಿದ್ದಾರೆ.
ಮಾತಿಗೆ ಮಾತು ಬೆಳೆದಂತೆ ರಾಜ್ಯಪಾಲರು ತಮ್ಮ ಭಾಷಣೆಕ್ಕೆ ಅಡ್ಡಿಪಡಿಸಿದ್ದು ದುರದೃಷ್ಟಕರ, ಭಾಷಣದ ವೇಳೆ ನಮ್ಮ ಮೈಕ್ ಆಫ್ ಮಾಡಲಾಗಿದೆ. ಇದರಿಂದ ನನಗೆ ಅವಮಾನ ಮಾಡಲಾಗಿದೆ ಎಂದು ಹೇಳಿ ಅರ್ಧಕ್ಕೆ ವಿಧಾನಸಭೆಯಿಂದ ಹೊರಬಂದಿದ್ದಾರೆ.
ಕಳೆದ ವರ್ಷದ ವಿಧಾನಸಭೆ ಅಧಿವೇಶನದ ವೇಳೆಯೂ ರಾಷ್ಟ್ರಗೀತೆ ಅಧಿವೇಶನ ಆರಂಭದಲ್ಲಿ ಹಾಡಬೇಕಾ? ಕೊನೆಯಲ್ಲಿ ಹಾಡಬೇಕಾ? ಎಂಬ ಬಗ್ಗೆ ರಾಜ್ಯಪಾಲ ಮತ್ತು ಡಿಎಂಕೆ ಸರ್ಕಾರದ ನಡುವೆ ವಾಗ್ದಾದ ನಡೆದಿತ್ತು (ಏಜೆನ್ಸೀಸ್).