Southwest monsoon over Kerala likely on May 26
- ಮೇ.26ರಿಂದ ಕೇರಳದಲ್ಲಿ ಮುಂಗಾರು ಆರಂಭ
- ಮುಂಗಾರು ಆರಂಭಕ್ಕೂ 6 ದಿನ ಮುನ್ನವೇ ಮಳೆಯಾಗುವ ಮುನ್ಸೂಚನೆ
- ಜುಲೈ ವೇಳೆಗೆ ದೇಶದ ಹಲವು ಪ್ರದೇಶದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ
ನವದೆಹಲಿ: ಬಿಸಿಲಿಗೆ ಬಳಲಿ ಬೆಂಡಾಗಿದ್ದ ಜನರಿಗೆ ಹವಾಮಾನ ಇಲಾಖೆ (The India Meteorological Department (IMD))ಗುಡ್ನ್ಯೂಸ್ವೊಂದನ್ನು ಕೊಟ್ಟಿದೆ. ಜೊತೆಗೆ ಕೃಷಿ ಚಟುವಟಿಕೆಗಾಗಿ ಕಾದು ಕುಳಿತಿದ್ದ ರೈತರಿಗೆ ಸಿಹಿಸುದ್ದಿ ಕೊಟ್ಟಿದೆ. ಅದೇನೆಂದರೆ, ಈ ಬಾರಿ ಮುಂಗಾರು ಆರಂಭವಾಗುವ ಆರು ದಿನಕ್ಕೂ ಮುನ್ನವೇ ವರುಣಾರ್ಭಟ ಇರಲಿದೆ. ಅಂದರೆ, ಮೇ.26ರಿಂದ ಕೇರಳದಲ್ಲಿ ಮಳೆ ಬೀಳಲಿದೆ ಎಂದು ಪ್ರಕಟಣೆಯನ್ನು ಹೊರಡಿಸಿದೆ.
ಎಂದಿನಿಂದ ಮುಂಗಾರು ಆರಂಭ
ಸಾಮಾನ್ಯವಾಗಿ ದೇವರನಾಡು ಕೇರಳದಲ್ಲಿ ಮುಂಗಾರು ಆರಂಭವಾಗೋದು ಜೂನ್ನಿಂದ ಮೊದಲ ದಿನದಿಂದ. ಆದರೆ, ಈ ಬಾರಿ ಆರು ದಿನಕ್ಕೂ ಮುನ್ನವೇ ಮಳೆ ಬೀಳಲಿದೆ. ಇಲ್ಲದಿದ್ದರೇ ಮೇ.31ರಿಂದ ವರುಣಾರ್ಭಟ ಶುರುವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮುಂಗಾರು ಎದುರಿಸುವ ಮೊದಲ ರಾಜ್ಯ
ಕೇರಳ ಸಾಮಾನ್ಯವಾಗಿ ನೈಋತ್ಯ ಮುಂಗಾರು ಎದುರಿಸುವ ಭಾರತದ ಮೊದಲ ರಾಜ್ಯ. ಈ ಬಾರಿ ನೈಋತ್ಯ ಮುಂಗಾರು ನಾಲ್ಕು ದಿನಕ್ಕೂ ಮೊದಲು ಆರಂಭವಾಗುತ್ತದೆ. ಈ ಬಾರಿ ಮೇ.26ರಂದೇ ಕೇರಳವನ್ನು ಪ್ರವೇಶಿಸುವ ಸಾಧ್ಯತೆ ಇದೆ. ಕಳೆದ ವರ್ಷ ಮೇ.24ರಂದು ಕೇರಳವನ್ನು ಮುಂಗಾರು ಪ್ರವೇಶಿಸಿತ್ತು. ಜುಲೈ ವೇಳೆಗ ಇಡೀ ಭಾರತವನ್ನು ಮುಂಗಾರು ಆವರಿಸುವ ಸಾಧ್ಯತೆ ಇದೆ ಎನ್ನಲಾಗಿದೆ ಎಂದು ಐಎಂಡಿ ಇಲಾಖೆ ಮಳೆ ಮುನ್ಸೂಚನೆ ಕೊಟ್ಟಿದೆ.
2020ರಿಂದ 25ವರೆಗೂ ಕೇರಳದಲ್ಲಿ ಮುಂಗಾರು ಆರಂಭವಾದ ದಿನಗಳಿವು
| ವರ್ಷ | ಪ್ರಾರಂಭದ ದಿನಾಂಕ | ಊಹಿಸಲಾದ ದಿನಾಂ |
|---|
| 2020 | ಜೂನ್ 1 | ಜೂನ್ 5 |
2021
| ಜೂನ್ 3 | ಮೇ 31 |
| 2022 | 29 ಮೇ | 27 ಮೇ |
| 2023 | ಜೂನ್ 8 | ಜೂನ್ 4 |
| 2024 | ಮೇ. 30 | ಮೇ. 31 |
| 2025 | ಮೇ. 24 | ಮೇ. 27 |
ಮೇ.25ರಂದು ಮಳೆಯಾಗಲಿದೆ ಎಂದು 2025ರಲ್ಲಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ, ಅದಕ್ಕೂ ನಾಲ್ಕು ದಿನ ವಿಳಂಬವಾಗಿ ಮಳೆ ಬಂದಿತ್ತು. ಇನ್ನು 2024ರಲ್ಲಿ ಮೇ.30ರಿಂದ ಮುಂಗಾರು ಆರಂಭ ಎಂದಿತ್ತು. ಆದರೆ, ಅದರ ಆಸುಪಾಸಿನಲ್ಲೇ ಮೇ.31ರಂದು ಮಳೆಯಾಗಿದೆ.
ನಾಲ್ಕು ತಿಂಗಳು ಬರುವ ಮುಂಗಾರು ದೇಶದ ಬೆಳೆ, ಬದುಕಿಗೆ ಶೇ.70ರಷ್ಟು ನೀರನ್ನು ಕೊಡುತ್ತದೆ. ಈ ಬಾರಿ ಮಾನ್ಸೂನ್ನಲ್ಲಿ 80 ಸೆಂ.ಮೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮುಂದಿನ 24 ಗಂಟೆಯಲ್ಲಿ ಬಂಗಾಳಕೊಲ್ಲಿ, ಅಂಡಮಾನ್ ನತ್ತು ನಿಕೋರ್ ದ್ವೀಪಗಳ ಭಾಗದಲ್ಲಿ ಮುಂಗಾರು ಪ್ರವೇಶಿಸುವ ಪರಿಸ್ಥಿತಿ ಇದೆ ಎನ್ನಲಾಗುತ್ತಿದೆ.
ಎಲ್ಲಿ ಎಷ್ಟಿದೆ ತಾಪಮಾನ?
ರಾಜಸ್ಥಾನದಲ್ಲಿ ಮೇ 11 ರ ಹೊತ್ತಿಗೆ 47.3°C ತಾಪಮಾನ ದಾಖಲಾಗಿತ್ತು. ಇನ್ನು ಗುಜರಾತ್, ಮಧ್ಯಪ್ರದೇಶ ಮತ್ತು ದಕ್ಷಿಣ ಭಾರತದ ಕೆಲವು ಜಿಲ್ಲೆಗಳಲ್ಲಿ ಶಾಖದ ಅಲೆ ಬೀಸಲಿರುವ ಬಗ್ಗೆ ಎಚ್ಚೆರಿಕೆ ಕೊಡಲಾಗಿದೆ, (ಏಜೆನ್ಸೀಸ್).