608 students flee hostel amid ghost rumours in Maharashtra 
ದೇಶ

ನಗು, ಗೆಜ್ಜೆ ಹಾಗೂ ಅಳುವಿನ ವಿಚಿತ್ರ ಶಬ್ಧ; ದೆವ್ವದ ಭಯಕ್ಕೆ ಸರ್ಕಾರಿ ಹಾಸ್ಟೆಲ್​​ ತೊರೆದ 608 ವಿದ್ಯಾರ್ಥಿಗಳು..Maharashtra

ಪ್ರಮುಖ ಮುಖ್ಯಾಂಶಗಳು

  • ಗೆಜ್ಜೆ ಹಾಗೂ ನಗು, ಅಳುವಿನ ವಿಚಿತ್ರ ಶಬ್ಧ ಕೇಳಿಬಂದ ಹಿನ್ನೆಲೆ ಹಾಸ್ಟೆಲ್ ತೊರೆದ ವಿದ್ಯಾರ್ಥಿಗಳು
  • ದೆವ್ವದ ಸುದ್ದಿ ಹಬ್ಬುತ್ತಲೇ ಹಾಸ್ಟೆಲ್​ನಲ್ಲಿದ್ದ 263 ಬಾಲಕರು ಹಾಗೂ 345 ವಿದ್ಯಾರ್ಥಿನಿಯರು ಖಾಲಿ
  • ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ಕರೆದೊಯ್ದು ಮನೋವೈದ್ಯರಿಂದ ತಪಾಸಣೆ ನಡೆಸಲಾಗಿದೆ.

ಅಮರಾವತಿ:  ಭೂತ-ಪ್ರೇತ ಎಲ್ಲ ಇಲ್ಲ..ಅದೆಲ್ಲ  ಮೂಢ ನಂಬಿಕೆಯಷ್ಟೆ ಎನ್ನುವುದನ್ನು ಸಾಕಷ್ಟು ಬಾರಿ ಹೇಳಿದರೂ ಸಹ.. ಚಿಕ್ಕಂದಿನಿಂದ ಕತೆ ಕೇಳಿ ಬೆಳೆದ ಎಂಥವರಿಗೂ ಗೆಜ್ಜೆ ಶಬ್ಧ ಹಾಗೂ ವಿಕೃತ ನಗು, ನೆರಳು ಕಂಡರೆ ಭಯ ಕಾಡೋದು ಸಹಜ..ಅದರಂತೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಸರ್ಕಾರಿ ಹಾಸ್ಟೆಲ್​ನಲ್ಲಿದ್ದ ವಿದ್ಯಾರ್ಥಿಗಳಿಗೆ ಕಾಡುತ್ತಿದ್ದ ಭಯದಿಂದಾಗಿ ಹಾಸ್ಟೆಲ್‌ ತೊರೆದು ಮನೆಗೆ ತೆರಳಿದ್ದಾರೆ ಎನ್ನಲಾಗಿದೆ.

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಸರ್ಕಾರಿ ಹಾಸ್ಟೆಲ್​ನಲ್ಲಿದ್ದ

 608 ವಿದ್ಯಾರ್ಥಿಗಳಿಂದ ಜಾಗ ಖಾಲಿ

 ಹಾಸ್ಟೆಲ್​ ವಾರ್ಡನ್​ ಪ್ರಕಾರ, ವಸತಿ ಕೊಠಡಿಲ್ಲಿದ್ದ 263 ವಿದ್ಯಾರ್ಥಿಗಳು ಹಾಗೂ 345 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 608 ವಿದ್ಯಾರ್ಥಿಗಳು  ಹಾಸ್ಟೆಲ್​ ತೊರೆದಿದ್ದಾರೆ. ಸದ್ಯ ಅವರಿಗೆ ಶಾಲೆಯ ಆಡಳಿತ ಮಂಡಳಿಯ ಮುಖೇನ ಮನೋವೈದ್ಯರ ಬಳಿ ಪರೀಕ್ಷೆಗೆ ಪ್ರೇರೆಪಿಸಲಾಗಿದೆ ಎಂದು ಮುಖ್ಯೋಪಾಧ್ಯಾಯ ಸಂಜಯ್ ಚೌಧರಿ ಹೇಳಿದರು.
"ಕೆಲವು ವಿದ್ಯಾರ್ಥಿನಿಯರು ಗೆಜ್ಜೆ ಶಬ್ದ ಮತ್ತು ನಗು ಮತ್ತು ಅಳುವಿನ ಶಬ್ಧ ಕೇಳುತ್ತಿದೆ ಎಂದು ದೂರು ಕೊಟ್ಟರು. ನಾವು ಆ ಹುಡುಗಿಯರನ್ನು ಆಸ್ಪತ್ರೆಗೆ ಕರೆದೊಯ್ದು ಮನೋವೈದ್ಯರಿಂದ ಪರೀಕ್ಷೆ ಮಾಡಿಸಿದೆವು. ಪರೀಕ್ಷೆಯ ನಂತರ ವೈದ್ಯರು ರೋಗಲಕ್ಷಣಗಳು ತೀವ್ರ ಹಿಸ್ಟೀರಿಯಾದಂತಹ ಸ್ಥಿತಿಗೆ ಸಂಬಂಧಿಸಿರಬಹುದು ಎಂದು ಹೇಳಿದರು.

ಇದು ಯಾವುದೇ ಭೂತ ಅಥವಾ ಅಲೌಕಿಕ ಸಮಸ್ಯೆಯಲ್ಲ. ಬದಲಾಗಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಸ್ಥಿತಿಯಾಗಿದೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿ ಅಭಿಷೇಕ್ ನಾಯ್ಡು ತಿಳಿಸಿದ್ದಾರೆ.  

ನಿರಂತರ ಕೌನ್ಸಲಿಂಗ್

ಭಯಭೀತರಾದ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ಮತ್ತು ಮೂಢನಂಬಿಕೆ ಹೋಗಲಾಡಿಸಲು ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ ಸಮಿತಿಯು ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಭಾಗಿಯಾಗಿದೆ.  "ಇದು ಸಂಪೂರ್ಣವಾಗಿ ಮಾನಸಿಕ ಆರೋಗ್ಯದ ಸ್ಥಿತಿಗೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ಬೇರೆ ಯಾವುದೇ ಅಲೌಕಿಕ ಅಂಶಗಳಿಲ್ಲ. ಸಾರ್ವಜನಿಕರು ವದಂತಿಗಳನ್ನು ಹಬ್ಬಿಸಬಾರದು, ಪೋಷಕರು ಅಥವಾ ಮಕ್ಕಳು ಆತಂಕಗೊಳ್ಳುವ ಅಗತ್ಯವಿಲ್ಲ" ಎಂದು ಸ್ಥಳೀಯ ಆರೋಗ್ಯ ಅಧಿಕಾರಿ ಅಭಿಷೇಕ್ ನಾಯ್ಡು ಮನವಿ ಮಾಡಿದ್ದಾರೆ.
 ವಿದ್ಯಾರ್ಥಿಗಳಲ್ಲಿನ ಭಯವನ್ನು ಹೋಗಲಾಡಿಸಲು ಮತ್ತು ಅವರ ಶಿಕ್ಷಣಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ನಿರಂತರ ಕೌನ್ಸಲಿಂಗ್​​​​​ ನೀಡಲಾಗುತ್ತಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ, (ಏಜೆನ್ಸೀಸ್)