"ಸೋನಮ್ ಬ್ರೋ ಉಪವಾಸ ಸಾಕು, ನನ್ನ ಮನೆಯಿಂದ ಊಟ ಕಳುಹಿಸುತ್ತೇನೆ!" - ನಟ ಸಲ್ಮಾನ್ ಖಾನ್ 
ದೇಶ

ಸೋನಮ್ ಬ್ರೋ ಉಪವಾಸ ಸಾಕು, ನನ್ನ ಮನೆಯಿಂದ ಊಟ ಕಳುಹಿಸುತ್ತೇನೆ: ಸಲ್ಮಾನ್​ ಖಾನ್​ ಮನವಿಗೆ ಮಣಿದರಾ ಸೋನಮ್​ ವಾಂಗ್​ಚುಕ್​? Salman Khan on Sonam Wangchuk

ಪ್ರಮುಖ ಮುಖ್ಯಾಂಶಗಳು

  • "ಸೋನಮ್ ಬ್ರೋ ಉಪವಾಸ ಸಾಕು, ನನ್ನ ಮನೆಯಿಂದ ಊಟ ಕಳುಹಿಸುತ್ತೇನೆ!" - ನಟ ಸಲ್ಮಾನ್ ಖಾನ್
  • 26 ದಿನಗಳ ನೀಟ್ (NEET) ವಿರುದ್ಧದ ಉಪವಾಸ ಸತ್ಯಾಗ್ರಹ ಹಿಂಪಡೆದ ಸೋನಮ್ ವಾಂಗ್‌ಚುಕ್
  • ಸಲ್ಮಾನ್ ಖಾನ್ ಮಾಡಿದ ವಿಶೇಷ ಮನವಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಮುಂಬೈ: ನೀಟ್​ ಪರೀಕ್ಷೆಯಲ್ಲಾದ ಅಕ್ರಮವನ್ನು ವಿರೋಧಿಸಿ ಪರಿಸರವಾದಿ ಸೋನಮ್​ ವಾಂಗ್​ಚುಕ್​ 26 ದಿನಗಳ ನಡೆಸಿದ್ದ ತಮ್ಮ ಉಪವಾಸ ಸತ್ಯಾಗ್ರಹವನ್ನು ಹಿಂತೆಗೆದುಕೊಂಡಿದ್ದಾರೆ. ಸೋನಮ್​ ವಾಂಗ್​​ಚುಕ್​ ಅವರನ್ನು ಆಸ್ಪತ್ರೆಯಲ್ಲಿ ಬೇಟಿ ಮಾಡಿದ ಬಿಜೆಪಿ ನಾಯಕರು ಸೂಪ್​​ ಕುಡಿಸುವ ಮೂಲಕ ಉಪವಾಸವನ್ನು ನಿಲ್ಲಿಸುವಂತೆ ಮಾಡಿದ್ದಾರೆ.
ಆದರೆ, ಸೋಷಿಯಲ್​ ಮೀಡಿಯಾನಲ್ಲಿ ಸೋನಮ್​ ವಾಂಗ್​ಚುಕ್​ ತಮ್ಮ ಉಪವಾಸವನ್ನು ಹಿಂಪಡೆಯಲು ಬಾಲಿವುಡ್​ನ ಬ್ಯಾಡ್​ ಬಾಯ್​ ಖ್ಯಾತಿಯ ಸಲ್ಮಾನ್​ ಖಾನ್ (Salman Khan on Sonam Wangchuk)​ ಅವರೇ ಕಾರಣ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.

ಸೋನಮ್​ ಬ್ರೋ ಸಾಕು; ಹೋರಾಟಗಾರರೆ ಮನೆಗೆ ತೆರಳಿ!

ದೆಹಲಿಯ ಜಂತರ್​ ಮಂತರ್​ನಲ್ಲಿ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸಿ ಬಾಲಿವುಡ್​ ನಟ ಸಲ್ಮಾನ್​ ಖಾನ್​, ವಿದ್ಯಾರ್ಥಿಗಳು ದೇಶ ಪ್ರೇಮದ ಸಂಕೇತ ದಯವಿಟ್ಟು ಇದಕ್ಕೆ ರಾಜಕೀಯ ಬಣ್ಣ ಬಳಿಯಬೇಡಿ, ಪೇಪರ್​ ಲೀಕ್​ ಇದು ಗಂಭೀರವಾದ ಸಮಸ್ಯೆಯಾಗಿದೆ. ಆದರೆ ಸರ್ಕಾರ ಇದನ್ನು ಖಂಡಿತವಾಗಿ ಸರಿ ಪಡಿಸಲಿದೆ ಎಂದು ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದರು.
ಈ ಪೋಸ್ಟ್​ನ ನಂತರ ಇನ್ನೊಂದು ಪೋಸ್ಟ್​ನ್ನು ಹಂಚಿಕೊಂಡಿದ್ದ ಸಲ್ಮಾನ್​​, ಈಗಾಗಲೇ ಮಾನ್ಯ ಪ್ರಧಾನಿಗಳು ಈ ಸಮಸ್ಯೆಗೆ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಆರೋಪಿಗಳಿಗೆ ಶಿಕ್ಷೆ ಕೊಡಿಸುವುದಾಗು ಟ್ವಿಟ್​ ಮಾಡಿದ್ದಾರೆ, ಹಾಗೂ ನನಗೆ ಈ ಬಗ್ಗೆ ನಂಬಿಕೆಯಿದೆ. ಹೀಗಾಗಿ ಪ್ರತಿಭಟನಾ ಸ್ಥಳದಿಂದ ಹೋರಾಟಗಾರರು ತಮ್ಮ ಮನೆಗೆ ಹಿಂತಿರುಗಿ, ವಿದ್ಯಾರ್ಥಿಗಳೇ ನಿಮ್ಮ ಮನೆಯಲ್ಲಿರುವ ಪಾಲಕರನ್ನು ನೀವು ಸೇರಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಹಾಗೆಯೇ, ಪ್ರೀತಿಯ ಸೋನಮ್​ ಬ್ರೋ, ಇಲ್ಲಿಗೆ ನಿನ್ನ ಉಪವಾಸ ಸಾಕು, ಇದನ್ನು ಮುಂದುವರಿಸಬೇಡ, ಮುಂದಿನ ದಿನಗಳಲ್ಲಿ ನಿನ್ನ ಅಗತ್ಯವಿದೆ, ಏನಾದರೂ ತಿನ್ನು, ನೀನು ಬಯಸಿದರೆ ನನ್ನ ಮನೆಯಿಂದಲೇ ಅಡುಗೆ ಕಳಿಸುತ್ತೇನೆ ಎಂದು ಬರೆದುಕೊಂಡಿದ್ದರು, (ಏಜನ್ಸೀಸ್​).