Jadeja wife 
ದೇಶ

ಭಾರತದ ಕೆಲ ಕ್ರಿಕೆಟಿಗರಿಗೆ ದುಶ್ಚಟ! ಗಂಡನನ್ನು ಹೊಗಳುವಾಗ ಜಡೇಜಾ ಪತ್ನಿ ಆರೋಪ

ನವದೆಹಲಿ: ಟೀಮ್ ಇಂಡಿಯಾದ ಕೆಲ ಆಟಗಾರರು ದುಶ್ಚಟಗಳನ್ನು ಹೊಂದಿದ್ದಾರೆ ಎಂದು ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಆರೋಪ ಮಾಡಿದ್ದಾರೆ. ತನ್ನ ಗಂಡನನ್ನು ಹೊಗಳುವ ವೇಳೆ ಅವರು ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
‘ನನ್ನ ಗಂಡ ಕ್ರಿಕೆಟ್ ಆಡುವ ಸಲುವಾಗಿ ಲಂಡನ್, ದುಬೈ, ಆಸ್ಟ್ರೇಲಿಯಾ ಮುಂತಾದೆಡೆಗಳಿಗೆ ಹೋಗುತ್ತಿರುತ್ತಾರೆ. ವಿವಿಧ ವಾತಾವರಣಗಳಿಗೆ ಹೋದರೂ ಅವರಿಗೆ ಯಾವುದೇ ರೀತಿಯ ದುರಭ್ಯಾಸ ಅಥವಾ ದುರ್ಗಣಗಳಿಲ್ಲ. ಆದರೆ ತಂಡದ ಇತರ ಕೆಲ ಆಟಗಾರರು ವ್ಯಸನ ಮತ್ತು ದುಶ್ಚಟಗಳನ್ನು ಹೊಂದಿದ್ದಾರೆ. ನನ್ನ ಗಂಡನೂ ಅದೇ ರೀತಿ ಮಾಡಬಹುದಾಗಿತ್ತು. 12ನೇ ವಯಸ್ಸಿನಿಂದಲೇ ಅವರು ನಿರಂತರವಾಗಿ ಮನೆಯಿಂದ ಹೊರಗಿದ್ದಾರೆ ಮತ್ತು ಏನು ಬೇಕಾದರೂ ಮಾಡಬಹುದಾಗಿತ್ತು. ಆದರೆ ಅವರಿಗೆ ತಮ್ಮ ನೈತಿಕ ಕರ್ತವ್ಯ ಮತ್ತು
ಜವಾಬ್ದಾರಿಯ ಬಗ್ಗೆ ಅರಿವು ಇದೆ’ ಎಂದು ಗುಜರಾತ್ ಸರ್ಕಾರದ ಶಿಕ್ಷಣ ಸಚಿವೆಯೂ ಆಗಿರುವ ರಿವಾಬಾ, ರಾಜಕೀಯ ಸಮಾರಂಭವೊಂದರ ಭಾಷಣದಲ್ಲಿ ವಿವರಿಸಿದ್ದಾರೆ. ಅವರ ಈ ಮಾತಿನಿಂದಾಗಿ ಇದೀಗ, ಟೀಮ್ ಇಂಡಿಯಾದಲ್ಲಿ ದುಶ್ಚಟಗಳನ್ನು ಹೊಂದಿರುವ ಆ ಕೆಲ ಕ್ರಿಕೆಟಿಗರು ಯಾರು ಎಂಬ ಪ್ರಶ್ನೆ ಎದ್ದಿದೆ.