‘ಅಪ್ಪ ಹೋಗಬೇಡಿ’ ಎಂದು ಕಣ್ಣೀರಿಟ್ಟ ಪುಟ್ಟ ಮಕ್ಕಳು 
ದೇಶ

ಅಪ್ಪ ಹೋಗಬೇಡಿ... ಕಣ್ಣೀರಿಟ್ಟ ಪುಟ್ಟ ಮಕ್ಕಳು; ಗಡಿ ಕಾಯಲು ಹೊರಟ ಯೋಧ | Children cried for their soldier father

ಪ್ರಮುಖ ಮುಖ್ಯಾಂಶಗಳು

  • ‘ಅಪ್ಪ ಹೋಗಬೇಡಿ’ ಎಂದು ಕಣ್ಣೀರಿಟ್ಟ ಮಕ್ಕಳು ಮನಕಲಕುವ ದೃಶ್ಯ
  • 2 ತಿಂಗಳ ರಜೆ ಬಳಿಕ ದೇಶ ಸೇವೆಗೆ ಮರಳಿದ ಯೋಧ
  • 8 ತಿಂಗಳ ಕಾಲ ಗಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಸೈನಿಕ
Indian Soldier Emotional Video: ಅಪ್ಪ ಹೋಗಬೇಡಿ... ಎಂದು ಕಣ್ಣೀರಿಡುತ್ತಿರುವ ಪುಟ್ಟ ಮಕ್ಕಳು, ಅವರನ್ನು ಬಿಟ್ಟು ಮತ್ತೆ ಗಡಿ ಕಾಯಲು ಹೊರಟು ನಿಂತ ಯೋಧ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಭಾವುಕ ವಿಡಿಯೋ ನೆಟ್ಟಿಗರ ಮನಕಲಕಿದೆ.
ಇನ್ನು, ವೈರಲ್ ಆಗಿರುವ ಪೋಸ್ಟ್‌ಗಳ ವಿಡಿಯೋದಲ್ಲಿ,  ಸೈನಿಕರೊಬ್ಬರು 8 ತಿಂಗಳ ಕಾಲ ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸಿ ಮನೆಗೆ ಬಂದಿದ್ದರು. ಕುಟುಂಬದೊಂದಿಗೆ 2 ತಿಂಗಳ ರಜೆ ಕಳೆದ ಬಳಿಕ ಮತ್ತೆ ಗಡಿ ಕಾಯಲು ತೆರಳಬೇಕಾಯಿತು. ಸೈನಿಕ ಮನೆ ಬಿಟ್ಟು ಹೊರಡುವ ವೇಳೆ ಅವರ ಪುಟ್ಟ ಮಕ್ಕಳು ತಂದೆಯನ್ನು ಹೋಗುವುದಕ್ಕೆ ಬಿಡದೇ, ‘ಅಪ್ಪ ಹೋಗಬೇಡಿ’ ಎಂದು ಹಿಂದೆ ಓಡುವ ದೃಶ್ಯ ನೋಡುಗರ ಕಣ್ಣಲ್ಲೂ ನೀರು ತರಿಸುವಂತಿದೆ.

ಯೋಧರ ಕುಟುಂಬದ ತ್ಯಾಗ

ದೇಶದ ಗಡಿಯಲ್ಲಿ ಸೈನಿಕರು ಸೇವೆ ಮಾಡುವಾಗ ಅವರ ಕುಟುಂಬಗಳು ಎದುರಿಸುವ ನೋವು ಮತ್ತು ತ್ಯಾಗವನ್ನು ಈ ವಿಡಿಯೋ ನೆನಪಿಸಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗಿದ್ದು, ಸೈನಿಕ ಹಾಗೂ ಅವರ ಕುಟುಂಬದ ತ್ಯಾಗಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ದೇಶದ ಗಡಿ ಕಾಯುವ ಸೈನಿಕನ ಧೈರ್ಯದ ಹಿಂದೆ, ಆತನನ್ನು ಪ್ರತಿ ಬಾರಿ ಕಣ್ಣೀರಿನಿಂದ ಬೀಳ್ಕೊಡುವ ಕುಟುಂಬದ ಉದಾರತೆಯೂ ಇದೆ ಎಂಬುದನ್ನು ಈ ದೃಶ್ಯ ಮತ್ತೊಮ್ಮೆ ನೆನಪಿಸಿದೆ.