Smriti Mandhana  
ದೇಶ

ಸ್ಮೃತಿ ಮಂಧಾನಗೂ ಮೊದಲು ಮಾಜಿ ಗೆಳತಿಗೆ ಪ್ರಪೋಸ್ ಮಾಡಿದ್ದ ಪಲಾಶ್ ಮುಚ್ಚಲ್! ​ಫೋಟೋಗಳು ವೈರಲ್...

ಪ್ರಮುಖ ಮುಖ್ಯಾಂಶಗಳು

  • ಮಾಜಿ ಗೆಳತಿಗೆ ಪ್ರಪೋಸ್ ಮಾಡಿದ್ದ ಪಲಾಶ್ ಮುಚ್ಚಲ್!
  • ಮಾಜಿ ಗೆಳತಿಯನ್ನು ಪ್ಲಾಸ್ಟಿಕ್ ಸರ್ಜನ್ ಬಿರ್ವಾ ಶಾ ಎಂದು ನೆಟ್ಟಿಗರು ಗುರುತಿಸಿದ್ದಾರೆ
ಮುಂಬೈ: ನವೆಂಬರ್ 23 ರಂದು ನಡೆಯಬೇಕಿದ್ದ ಟೀಮ್​ ಇಂಡಿಯಾದ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ ( Smriti Mandhana ​) ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ಮದುವೆ ಸದ್ಯಕ್ಕೆ ಮುಂದೂಡಲಾಗಿದೆ. ಅದಕ್ಕೆ ಕಾರಣ,ಅದೇ ದಿನ ಇದ್ದಕ್ಕಿದ್ದಂತೆ ಸ್ಮೃತಿ ಅವರ ತಂದೆ ಶ್ರೀನಿವಾಸ್​​ ಮಂಧಾನ ಅವರಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಹೊರಬಿತ್ತು. ಈ ಹಿನ್ನೆಲೆ ಮದುವೆ ನಿಂತು ಹೋಯಿತ್ತು. ಆದರೆ, ಮದುವೆ ನಿಂತಿರುವುದಕ್ಕೆ ಬೇರೆಯದೇ ಕಾರಣಗಳು ಸೋಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಹೌದು, ಒಂದು ವರದಿಯ ಪ್ರಕಾರ, ಮದುವೆಗೂ ಮೊದಲೇ ಪಲಾಶ್ ಮುಚ್ಚಲ್ ಅವರು ಸ್ಮೃತಿ ಅವರಿಗೆ ಮೋಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ತನ್ನ ಎಕ್ಸ್ ಲವರ್​ಗೆ ಪ್ರಪೋಸ್​ ಮಾಡಿದ ಕೆಲವಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ಯಕ್ಕೆ ಹರಿದಾಡುತ್ತಿದೆ. ಇನ್ನು ವೈರಲ್​ ಆಗಿರುವ ಫೋಟೋಗಳಲ್ಲಿ ಪ್ರಪೋಸಲ್ ಸೆಟಪ್ ಕಾಣುತ್ತಿದೆ. ಪಲಾಶ್ ತನ್ನ ಆಗಿನ ಸಂಗಾತಿಯ ಮುಂದೆ ಮಂಡಿಯೂರಿ ಕುಳಿತಿದ್ದಾನೆ. ಪಲಾಶ್​, ಸ್ಮೃತಿ ಮಂಧಾನಾಳನ್ನು ನೋಡುವ ಮೊದಲು ತನ್ನ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರಬಹುದು ಎಂದು ನೆಟ್ಟಿಗರನ್ನು ಊಹಿಸುತ್ತಿದ್ದಾರೆ. ಮಾಜಿ ಗೆಳತಿಯನ್ನು ಪ್ಲಾಸ್ಟಿಕ್ ಸರ್ಜನ್ ಬಿರ್ವಾ ಶಾ ಎಂದು ನೆಟ್ಟಿಗರು ಗುರುತಿಸಿದ್ದಾರೆ ಮತ್ತು ಪ್ರಪೋಸಲ್ ಫೋಟೋ 2017 ರದ್ದಾಗಿದೆ ಎಂದು ಹೇಳಿಕೊಂಡಿದ್ದಾರೆ.
ವಿಡಿಯೋ ಡಿಲೀಟ್​
ಇನ್ನು ಈ ಘಟನೆ ಬೆನ್ನಲ್ಲೇ ಅವರ ಭಾವಿ ಪತಿ ಪಲಾಶ್ ಕೂಡ ದಿಢೀರ್​ ಆಸ್ಪತ್ರೆಗೆ ದಾಖಲಾಗಿದ್ದು, ವೈರಲ್ ಸೋಂಕು ಮತ್ತು ಗ್ಯಾಸ್ಟ್ರಿಕ್​ ಸಮಸ್ಯೆಯಿಂದ ಆಸ್ಪತ್ರೆ ಸೇರಿದರು. ಈ ಬೆಳವಣಿಗೆಗಳಿಂದ ತೀರ ಬೇಸರಕ್ಕೆ ಒಳಗಾಗಿರುವ ಸ್ಮೃತಿ, ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದ ವಿವಾಹಪೂರ್ವ ಕ್ಷಣಗಳನ್ನು ತೆಗೆದುಹಾಕಿದ್ದಾರೆ. ಪ್ರಸ್ತುತ, ಮಂಧಾನ ಅವರ ತಂದೆ ಮತ್ತು ಪಲಾಶ್​​ರನ್ನು ಡಿಸ್ಚಾರ್ಜ್​ ಮಾಡಲಾಗಿದೆ.
ಇನ್ನು ಈ ಇಬ್ಬರ ಬಗ್ಗೆ ಅವರ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದು, ಇದರ ನಡುವೆ ಪಲಾಶ್ ಮತ್ತು ಆ ನಿಗೂಢ ಯುವತಿ ಚಾಟ್ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್​ ಶಾಟ್​ಗಳು ಕೂಡ ಜಾಲತಾಣದಲ್ಲಿ ಸೋರಿಕೆ ಮಾಡಲಾಗಿದೆ. ಸದ್ಯ, ಸ್ಮೃತಿ ಮತ್ತು ಪಲಾಶ್​ ಮದುವೆ ನಡೆಯುತ್ತೋ? ಇಲ್ಲವೋ? ಅನ್ನೋ ಪ್ರಶ್ನೆ ಮಾತ್ರ ಹಾಗೇ ಉಳಿದಿದೆ. ಈ ಪ್ರಕರಣದಲ್ಲಿ ಮುಂದೆ ಏನೆಲ್ಲ ಬೆಳವಣಿಗೆಗಳು ಆಗುತ್ತೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್​).