ಮುಂಬೈ: ಟೀಮ್ ಇಂಡಿಯಾದ ಆಟಗಾರ್ತಿ ಸ್ಮೃತಿ ಮಂಧಾನ ( Smriti Mandhana ) ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜೋಡಿಯ ಮದುವೆ ನ.23ರಂದು ನಡೆಯಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಮದುವೆಯನ್ನು ಮುಂದೂಡಲಾಯಿತ್ತು. ಸ್ಮೃತಿ ( Smriti Mandhana ) ಮತ್ತು ಪಲಾಶ್ ಅವರ ವಿವಾಹವು ಈಗ ಡಿಸೆಂಬರ್ 7 ರಂದು ನಡೆಯುತ್ತದೆ? ಎನ್ನುವ ಸುದ್ದಿ ಇದೆ. ಈ ಕುರಿತಾಗಿ ಸ್ಮೃತಿಯ ಸಹೋದರ ಸ್ವತಃ ಈ ಪ್ರಶ್ನೆಗೆ ಉತ್ತರಿಸಿದ್ದಾರೆ.
ಸ್ಮೃತಿ ಮತ್ತು ಪಲಾಶ್ ಡಿಸೆಂಬರ್ 7 ರಂದು ಮದುವೆಯಾಗುತ್ತಾರಾ?
ಸಾಮಾಜಿಕ ಮಾಧ್ಯಮ ವರದಿಗಳ ಪ್ರಕಾರ ಪಲಾಶ್ ಮತ್ತು ಮಂಧಾನ ಅವರ ವಿವಾಹ ಡಿಸೆಂಬರ್ 7 ರಂದು ನಡೆಯಲಿದೆ. ಆದರೆ, ಸ್ಮೃತಿ ಅವರ ಸಹೋದರ ಶ್ರವಣ್ ಮಂಧಾನ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಈ ಸುದ್ದಿಯನ್ನು ಕೇವಲ ವದಂತಿ ಎಂದು ತಳ್ಳಿಹಾಕಿದ ಅವರು, "ಈ ವದಂತಿಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸದ್ಯಕ್ಕೆ, ಮದುವೆ ಇನ್ನೂ ಸ್ಥಗಿತಗೊಂಡಿದೆ" ಎಂದು ಹೇಳಿದರು.
ನವೆಂಬರ್ 23 ರಂದು ಸ್ಮೃತಿ ಮತ್ತು ಪಲಾಶ್ ಮದುವೆ ನಿಗದಿಯಾಗಿತ್ತು. ಆದಾಗ್ಯೂ, ವಿವಾಹ ಸಮಾರಂಭಕ್ಕೆ ಸ್ವಲ್ಪ ಮೊದಲು, ಸ್ಮೃತಿಯ ತಂದೆ ಅನಾರೋಗ್ಯಕ್ಕೆ ಒಳಗಾದರು ಮತ್ತು ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದಾಗಿ, ಮದುವೆಯನ್ನು ಮುಂದೂಡಲಾಯಿತು. ಸ್ವಲ್ಪ ಸಮಯದ ನಂತರ, ಪಲಾಶ್ ಕೂಡ ಅನಾರೋಗ್ಯಕ್ಕೆ ಒಳಗಾದರು ಮತ್ತು ಆಸ್ಪತ್ರೆಗೆ ದಾಖಲಾಗಿದ್ದರು. ಆದಾಗ್ಯೂ, ಕೆಲವು ವರದಿಗಳು ಮದುವೆಯನ್ನು ಮುಂದೂಡಲು ಕಾರಣ ಸ್ಮೃತಿಯ ತಂದೆಯ ಅನಾರೋಗ್ಯವಲ್ಲ ಎಂದು ಹೇಳಿವೆ. ನಿಜವಾದ ಕಾರಣವೆಂದರೆ ಪಲಾಶ್ ಸ್ಮೃತಿಗೆ ಮೋಸ ಮಾಡಿದ ಆರೋಪ ಹೊರಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ.
ತಂದೆ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾದ ನಂತರ, ಸ್ಮೃತಿ ಅವರು ತನ್ನ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಕೇಳಿಕೊಂಡಿದ್ದಾರೆ. ಹೀಗಾಗಿ ಮದುವೆಯನ್ನು ಮುಂದೂಡಲಾಗಿದೆ ಎಂದು ಅವರ ಮ್ಯಾನೇಜರ್ ಬಹಿರಂಗಪಡಿಸಿದ್ದಾರೆ. ಅದಾದ ನಂತರ, ಪಲಾಶ್ ಕೂಡ ಅನಿರೀಕ್ಷಿತವಾಗಿ ಆಸ್ಪತ್ರೆಗೆ ದಾಖಲಾಗಿದರು. ಈ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಪಲಾಶ್ ಅವರು ಮೇರಿ ಡಿ'ಕೋಸ್ಟಾ ಎಂಬ ನೃತ್ಯ ನಿರ್ದೇಶಕಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹರಿಬಿಡಲಾಯಿತು. ಅಲ್ಲದೆ, ಪಲಾಶ್ ಮತ್ತು ಮುಚ್ಚಲ್ ಚಾಟ್ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್‌ಶಾಟ್‌ಗಳನ್ನು ಸಹ ಹರಿಬಿಡಲಾಯಿತು. ಇದರಲ್ಲಿ ಪಲಾಶ್ ಅವರು ಸ್ಮೃತಿಯ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆಕೆ ತನಗೆ ಸರಿಯಾಗಿ ಟೈಂ ಕೊಡುತ್ತಿಲ್ಲ ಎಂದು ಪಲಾಶ್ ಹೇಳಿಕೊಂಡಿದ್ದಾರೆ. ಅಲ್ಲದೆ, ತನ್ನೊಂದಿಗೆ ಡೇಟ್ ಮಾಡುವಂತೆ ಪಲಾಶ್ ಕೇಳಿಕೊಂಡಿದ್ದಾರೆ. ಆದರೆ, ವೈರಲ್ ಆಗಿರುವ ಸ್ಕ್ರೀನ್ಶಾಟ್ಗಳ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಅದೊಂದು ವದಂತಿಯಾಗಿದೆ.
ಪಲಾಶ್ ಬಗ್ಗೆ ತಿಳಿದ ಸ್ಮೃತಿಯ ತಂದೆ ಶ್ರೀನಿವಾಸ್ ನವೆಂಬರ್ 22ರ ರಾತ್ರಿಯೇ ಪಲಾಶ್ ಅವರನ್ನು ಎದುರಿಸಿ, ಪ್ರಶ್ನಿಸಿದ್ದಾರೆ ಎನ್ನಲಾಗುತ್ತಿದೆ. ಈ ವೇಳೆ ದೊಡ್ಡದಾಗಿ ಜಗಳ ಜಡೆದಿದೆ. ಎರಡೂ ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಶ್ರೀನಿವಾಸ್ ಅವರಿಗೆ ಹೃದಯಾಘಾತವಾಗಿದೆ ಎಂದು ಗಾಸಿಪ್ ಹರಡುತ್ತಿದ್ದಾರೆ.
ಮದುವೆ ಮುಂದೂಡಿಕೆಯ ಸ್ವಲ್ಪ ಸಮಯದ ನಂತರ, ಸ್ಮೃತಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ಅಳಿಸಿಹಾಕಿರುವುದನ್ನು ಅಭಿಮಾನಿಗಳು ಗಮನಿಸಿದರು, ಅದರಲ್ಲಿ ಅವರ ನಿಶ್ಚಿತಾರ್ಥ ಮತ್ತು ಪ್ರಪೋಸಲ್ ಫೋಟೋಗಳು ಸೇರಿವೆ. ಆದರೆ ಈ ಎಲ್ಲ ಸುದ್ದಿಗಳ ನಡಿವೆ ಮತ್ತೆ ಇಬ್ಬರು ಮದುವೆ ಆಗುತ್ತಾರೆ ಎನ್ನಲಾಗುತ್ತಿದೆ. ಆದರೆ ಈ ಕುರಿತಾಗಿ ಯಾವುದೇ ಖಚಿತ ಮಾಹಿತಿ ಇಲ್ಲ.