Smriti Mandhana 
ದೇಶ

ಮದುವೆಯನ್ನು ರದ್ದುಗೊಳಿಸಿದ ನಂತರ ಮೈದಾನಕ್ಕೆ ಮರಳಿದ ಸ್ಮೃತಿ ಮಂಧಾನಾ! Smriti Mandhana

ನವದೆಹಲಿ: ( Smriti Mandhana) ಪಲಾಶ್ ಜೊತೆಗಿನ ಮದುವೆಯನ್ನು ರದ್ದುಗೊಳಿಸಿದ ನಂತರ ಸ್ಮೃತಿ ಮಂಧಾನ ಮತ್ತೆ ಕ್ಷೇತ್ರಕ್ಕೆ ಮರಳಿದ್ದಾರೆ. ಕ್ರಿಕೆಟ್​​ ಅಭ್ಯಾಸ ಮಾಡುತ್ತಿರುವ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.
ಸ್ಮೃತಿ ಖಾಸಗಿ ಮೈದಾನದಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದು. ಈ ಚಿತ್ರವನ್ನು ಸ್ಮೃತಿ ಸಹೋದರ ಶ್ರವಣ್ ಮಂಧಾನ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕ ಜನರು ಸ್ಮೃತಿ ಅವರ ಸಮರ್ಪಣೆಯನ್ನು ಹಲವರು
ಶ್ಲಾಘಿಸುತ್ತಿದ್ದಾರೆ.
ನಡೆದಿದ್ದೇನು?:
ನವೆಂಬರ್ 23 ರಂದು ಸ್ಮೃತಿ ಮತ್ತು ಪಲಾಶ್ ಮದುವೆ ನಿಗದಿಯಾಗಿತ್ತು. ಆದಾಗ್ಯೂ, ವಿವಾಹ ಸಮಾರಂಭಕ್ಕೆ ಸ್ವಲ್ಪ ಮೊದಲು, ಸ್ಮೃತಿಯ ತಂದೆ ಅನಾರೋಗ್ಯಕ್ಕೆ ಒಳಗಾದರು ಮತ್ತು ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದಾಗಿ, ಮದುವೆಯನ್ನು ಮುಂದೂಡಲಾಯಿತು. ಸ್ವಲ್ಪ ಸಮಯದ ನಂತರ, ಪಲಾಶ್ ಕೂಡ ಅನಾರೋಗ್ಯಕ್ಕೆ ಒಳಗಾದರು ಮತ್ತು ಆಸ್ಪತ್ರೆಗೆ ದಾಖಲಾಗಿದ್ದರು. ಆದಾಗ್ಯೂ, ಕೆಲವು ವರದಿಗಳು ಮದುವೆಯನ್ನು ಮುಂದೂಡಲು ಕಾರಣ ಸ್ಮೃತಿಯ ತಂದೆಯ ಅನಾರೋಗ್ಯವಲ್ಲ ಎಂದು ಹೇಳಿವೆ. ನಿಜವಾದ ಕಾರಣವೆಂದರೆ ಪಲಾಶ್ ಸ್ಮೃತಿಗೆ ಮೋಸ ಮಾಡಿದ ಆರೋಪ ಹೊರಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ.
ತಂದೆ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾದ ನಂತರ, ಸ್ಮೃತಿ ಅವರು ತನ್ನ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಕೇಳಿಕೊಂಡಿದ್ದಾರೆ. ಹೀಗಾಗಿ ಮದುವೆಯನ್ನು ಮುಂದೂಡಲಾಗಿದೆ ಎಂದು ಅವರ ಮ್ಯಾನೇಜರ್ ಬಹಿರಂಗಪಡಿಸಿದ್ದಾರೆ. ಅದಾದ ನಂತರ, ಪಲಾಶ್ ಕೂಡ ಅನಿರೀಕ್ಷಿತವಾಗಿ ಆಸ್ಪತ್ರೆಗೆ ದಾಖಲಾಗಿದರು. ಈ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಪಲಾಶ್ ಅವರು ಮೇರಿ ಡಿ'ಕೋಸ್ಟಾ ಎಂಬ ನೃತ್ಯ ನಿರ್ದೇಶಕಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹರಿಬಿಡಲಾಯಿತು. ಅಲ್ಲದೆ, ಪಲಾಶ್​ ಮತ್ತು ಮುಚ್ಚಲ್​ ಚಾಟ್​ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್‌ಶಾಟ್‌ಗಳನ್ನು ಸಹ ಹರಿಬಿಡಲಾಯಿತು. ಇದರಲ್ಲಿ ಪಲಾಶ್ ಅವರು ಸ್ಮೃತಿಯ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆಕೆ ತನಗೆ ಸರಿಯಾಗಿ ಟೈಂ ಕೊಡುತ್ತಿಲ್ಲ ಎಂದು ಪಲಾಶ್​ ಹೇಳಿಕೊಂಡಿದ್ದಾರೆ. ಅಲ್ಲದೆ, ತನ್ನೊಂದಿಗೆ ಡೇಟ್​ ಮಾಡುವಂತೆ ಪಲಾಶ್​ ಕೇಳಿಕೊಂಡಿದ್ದಾರೆ. ಆದರೆ, ವೈರಲ್​ ಆಗಿರುವ ಸ್ಕ್ರೀನ್​ಶಾಟ್​ಗಳ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಅದೊಂದು ವದಂತಿಯಾಗಿದೆ.
ಪಲಾಶ್​ ಬಗ್ಗೆ ತಿಳಿದ ಸ್ಮೃತಿಯ ತಂದೆ ಶ್ರೀನಿವಾಸ್​ ನವೆಂಬರ್​ 22ರ ರಾತ್ರಿಯೇ ಪಲಾಶ್ ಅವರನ್ನು ಎದುರಿಸಿ, ಪ್ರಶ್ನಿಸಿದ್ದಾರೆ ಎನ್ನಲಾಗುತ್ತಿದೆ. ಈ ವೇಳೆ ದೊಡ್ಡದಾಗಿ ಜಗಳ ಜಡೆದಿದೆ. ಎರಡೂ ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಶ್ರೀನಿವಾಸ್​ ಅವರಿಗೆ ಹೃದಯಾಘಾತವಾಗಿದೆ ಎಂದು ಗಾಸಿಪ್ ಹರಡುತ್ತಿದ್ದಾರೆ.
ಮದುವೆ ಮುಂದೂಡಿಕೆಯ ಸ್ವಲ್ಪ ಸಮಯದ ನಂತರ, ಸ್ಮೃತಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ಅಳಿಸಿಹಾಕಿರುವುದನ್ನು ಅಭಿಮಾನಿಗಳು ಗಮನಿಸಿದರು, ಅದರಲ್ಲಿ ಅವರ ನಿಶ್ಚಿತಾರ್ಥ ಮತ್ತು ಪ್ರಪೋಸಲ್ ಫೋಟೋಗಳು ಸೇರಿವೆ.
ತಮ್ಮ ಇನ್​ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿರುವ ಪಲಾಶ್​, ಸ್ಮೃತಿ ಮಂಧಾನ ಜತೆಗಿನ ಪ್ರೇಮ ಸಂಬಂಧವನ್ನು ಬ್ರೇಕಪ್​ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ತಮ್ಮ ವಿರುದ್ಧ ಇಲ್ಲಸಲ್ಲದ್ದನ್ನು ಹರಡುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.
ಕಳೆದ ಕೆಲ ವಾರಗಳಿಂದ ನನ್ನ ಹಾಗೂ ನನ್ನ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಡುತ್ತಿವೆ. ಈ ಸಮಯದಲ್ಲಿ ಇದರ ಬಗ್ಗೆ ಮಾತನಾಡುವುದು ನನಗೆ ಸೂಕ್ತ ಅನಿಸಿತು. ನಾನು ಜೀವನದಲ್ಲಿ ತುಂಬಾ ಖಾಸಗಿ ವ್ಯಕ್ತಿ ಮತ್ತು ನಾನು ಅದೇ ರೀತಿ ಎಂದಿಗೂ ಇರಲು ಬಯಸುತ್ತೇನೆ. ಆದರೆ, ಈ ಸಂದರ್ಭದಲ್ಲಿ ಮದುವೆ ರದ್ದಾಗಿದೆ ಅನ್ನೋದನ್ನು ಸ್ಪಷ್ಟಪಡಿಸಬೇಕಿದೆ ಎಂದು ಸ್ಮೃತಿ ಬರೆದುಕೊಂಡಿದ್ದಾರೆ.