ನವದೆಹಲಿ: ಅಯೋಧ್ಯೆಯ ರಾಮಮಂದಿರ ದೇಣಿಗೆ ಅಕ್ರಮ ಆರೋಪವನ್ನು ಖಂಡಿಸಿ ಸಂಸತ್ತಿನ ಆವರಣದಲ್ಲಿ ನಡೆಸಿದ ಅಣಕು ಪ್ರದರ್ಶನ ಸಂಬಂಧ ಬಿಹಾರದ ಪಕ್ಷೇತರ ಸಂಸದ ಪಪ್ಪು ಯಾದವ್ ಮೇಲೆ ಕೆಲವರು ಶೂ ಎಸೆಯಲು ಯತ್ನಿಸಿದ್ದು, ದೆಹಲಿಯ ಅವರ ನಿವಾಸದ ಬಳಿ ಸುದ್ದಿಗೋಷ್ಠಿ ನಡೆಸುವ ವೇಳೆ ಭಾರಿ ಮಾರಾಮಾರಿ ನಡೆದಿದೆ. ಮತ್ತು ಯಾದವ್ ಬೆಂಬಲಿಗರು ಅವರನ್ನು ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.
ಪಪ್ಪು ಯಾದವ್ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ. ಮೂರು ಅಥವಾ ನಾಲ್ಕು ಜನರು ಇದ್ದಕ್ಕಿದ್ದಂತೆ ಸಂಸದರ ಬಳಿಗೆ ಬಂದು ದಿಕ್ಕಾರ ಕೂಗಿ ಸಂಸದರ ಮೇಳೆ ಶೂ ಎಸೆಯಲು ಯತ್ನಿಸಿದ್ದಾರೆ. ಈ ವೇಳೆ ಯಾದವ್ ಬೆಂಬಲಿಗರು ಮತ್ತು ದಾಳಿ ಮಾಡಲು ಬಂದ ವ್ಯಕ್ತಿಗಳ ನಡುವೆ ಮಾರಾಮಾರಿ ನಡೆದಿದೆ. ಓರ್ವ ವ್ಯಕ್ತಿ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ ಎಂದು ಯಾದವ್ ಬೆಂಬಲಿಗರು ಆರೋಪಿಸಿದ್ದಾರೆ.
ಇನ್ನೂ ಸ್ಥಳಕ್ಕೆ ನುಗ್ಗಿ ಯಾದವ್ ಮೇಲೆ ಶೂ ಎಸೆಯಲು ಯತ್ನಿಸಿದ ವ್ಯಕ್ತಿ ತನ್ನನ್ನು ಉತ್ತರ ಪ್ರದೇಶದ ಬುಲಂದ್‌ಶಹರ್ ನಿವಾಸಿ ಸುಮಿತ್ ಎಂದು ಕರೆದುಕೊಂಡಿದ್ದಾನೆ. ಘಟನೆ ನಡೆದ ತಕ್ಷಣ ಆತನನ್ನು ಬಂಧಿಸಲಾಗಿದೆ. ಆರೋಪಿಯೂ ಸಂತರಿಗೆ ಮಾಡಿದ ಅವಮಾನದಿಂದ ತಾನು ಅಸಮಾಧಾನಗೊಂಡಿದ್ದೇನೆ. ಆಗಾಗಿ ಈ ದಾಳಿ ಮಾಡಲು ಕಾರಣ ಎಂದು ಪೊಲೀಸರ ಮುಂದೆ ಹೇಳಿದ್ದಾನೆ ಎನ್ನಲಾಗಿದೆ.
ಇನ್ನೂ ಪತ್ರಿಕಾಗೋಷ್ಠಿಯಲ್ಲಿ ನಡೆದ ಘಟನೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳು ಚಾಕುವಿನಿಂದ ಬಂದಿದ್ದಾರೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಪಪ್ಪು ಯಾದವ್ ಅವರ ಬೆಂಬಲಿಗರು ಸುಮಿತ್ ಅವರನ್ನು ಹಸ್ತಾಂತರಿಸಿದಾಗ, ಅವರ ಜೊತೆಗೆ ಒಂದು ಚಾಕುವನ್ನು ಹಸ್ತಾಂತರಿಸಿದ್ದಾರೆ.
ಇನ್ನೂ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಪ್ಪು ಯಾದವ್, ಆರೋಪಿಗಳು ತನ್ನನ್ನು ಕೊಲ್ಲಲು ಬಂದಿದ್ದಾರೆ ಎಂದು ಆರೋಪಿಸಿದ್ದು, ತನ್ನನ್ನು ಕೊಲ್ಲಲು ಪಿತೂರಿ ನಡೆದಿದೆ. ಪ್ರತಿದಿನ ಕೆಲವು ಧಾರ್ಮಿಕ ವ್ಯಕ್ತಿಗಳು, ಅವನನ್ನು ಸುಟ್ಟುಹಾಕಿ, ನಾವು 51 ಲಕ್ಷ ರೂ. ನೀಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ (ಏಜೆನ್ಸೀಸ್).