Siya Goyal Lohagad fort murder update
- ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಕೇತನ್
- ಚೇತನ್ ಜೊತೆಗೆ ಸ್ನೇಹ ಸಂಬಂಧ ಕಡಿದುಕೊಂಡಿದ್ದೇನೆ ಎಂದು ಸುಳ್ಳು ಹೇಳಿದ್ದ ಸಿಯಾ
- ಕೋಟೆಯ ಮೇಲಿಂದ ತಳ್ಳಲು ಸಿಯಾ ಕೆಳಗೆ ಕುಳಿತುಕೊಳ್ಳುವ ಕೋರ್ಡ್ ವರ್ಡ್ ಬಳಕೆ
ಪುಣೆ: ಸಿಯಾ ಮತ್ತು ಚೇತನ್ ಸ್ನೇಹಿತರು ಎಂದು ತಿಳಿದಿತ್ತು. ಆದರೆ, ಕೇತನ್ ಅಗರ್ವಾಲ್ ಜೊತೆಗೆ ಸಿಯಾ ಎಂಗೇಜ್ಮೆಂಟ್ ಮಾಡಿಕೊಂಡ ನಂತರ ಆ ಬ್ರೇಕಪ್ ಮಾಡಿಕೊಂಡ ಬಗ್ಗೆ ಆಕೆ ನನ್ನ ಬಳಿ ಮಾತು ಕೊಟ್ಟಿದ್ದಳು. ಆದರೆ ಅವರಿಬ್ಬರು ಪ್ರೀತಿ ಮಾಡುತ್ತಿದ್ದರು ಎನ್ನುವುದು ನನಗೆ ಗೊತ್ತಿರಲಿಲ್ಲ ಎಂದು ಸಿಯಾಳ ಸಹೋದರ ಸಾಯಿಲ್ ಗೋಯಲ್ ಹೇಳಿದ್ದಾರೆ.
ಸಿಯಾ ತನಗೆ ಚೇತನ್ ಕೇವಲ ಸ್ನೇಹಿತ ಮಾತ್ರ, ತಾನು ಕೇತನ್‌ನನ್ನೇ ಮದುವೆಯಾಗುವುದಾಗಿ ಪ್ರಮಾಣ ಮಾಡಿದ್ದಳು ಎಂದು ಆಕೆಯ ಸಹೋದರ ಸಾಹಿಲ್ ಗೋಯಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಇಡೀ ಮಹಾರಾಷ್ಟ್ರವನ್ನು ಬೆಚ್ಚಿಬೀಳಿಸಿರುವ ಈ ಹತ್ಯೆ ಪ್ರಕರಣದ ತನಿಖೆ ತೀವ್ರಗತಿಯಲ್ಲಿ ಸಾಗುತ್ತಿದೆ.
ಮೊದಲೇ ಅನುಮಾನವಿತ್ತು
ಕೇತನ್ ಅಗರವಾಲ್ ಟ್ರೆಕ್ಕಿಂಗ್ ತೆರಳುವ ಮುನ್ನ ಸಿಯಾಳೊಂದಿಗೆ ಮಾತನಾಡುವ ಮುನ್ನವೇ ಆತನಿಗೆ ಆಕೆ ಮೇಲೆ ಅನುಮಾನವಿತ್ತು ಎನ್ನಲಾಗಿದೆ. ಆಕೆ ಸಣ್ಣಪುಟ್ಟ ವಿಚಾರಕ್ಕೂ ಜಗಳವಾಡೋದು. ಪದೇ ಪದೇ ಚೇತನ್ ವಿಚಾರವನ್ನು ಮುನ್ನೆಲೆಗೆ ತಂದು ಮಾತನಾಡುವ ಬಗ್ಗೆ ತಂದೆಗೆ ಹೇಳಿದ್ದನಂತೆ. ಜೊತೆಗೆ ಆಕೆಯ ಹಿನ್ನಲೆಯನ್ನು ಪರಿಶೀಲಿಸಲು ತಿಳಿಸಿದ್ದನಂತೆ. ಆಗ ಕೇತನ್ ತಂದೆ ವಿಶಾಲ್ ಅವರು ಆಕೆ ಚಿಕ್ಕ ಹುಡುಗಿ ನಾನು ಬುದ್ಧಿ ಹೇಳುತ್ತೇನೆ ಎಂದು ಹೇಳಿದ್ದಾಗಿ ಪೊಲೀಸರ ಮುಂದೆ ಮಾಹಿತಿ ಹಂಚಿಕೊಂಡಿದ್ದಾರೆ.
ಅಣ್ಣ ಸಾಹಿಲ್ಗೆ ಗೊತ್ತಿತ್ತು ಸ್ನೇಹ ಸಂಬಂಧ
ಸಿಯಾಳ ಸಹೋದ ಸಾಹಿಲ್ ಗೋಯಲ್ಗೆ ಸಿಯಾ ಹಾಗೂ ಕ್ರಿಕೆಟ್ ಸ್ನೇಹಿತ್ ಚೇತನ್ ಚೌಧರಿ ಮಧ್ಯೆ ಸ್ನೇಹ ಸಂಬಂಧ ಇತ್ತು ಎನ್ನುವುದು ಗೊತ್ತಿತ್ತು ಎನ್ನುವುದನ್ನು ಪೊಲೀಸರ ಮುಂದೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಆದರೆ, ಕೇತನ್ ಜೊತೆಗೆ ಮದುವೆಯಾದಾಗ ನಾನು ಕೇಳಿದ್ದೆ ಈ ಬಗ್ಗೆ ಆಗ ಆಕೆ ಆತನೊಂದಿಗೆ ಸಂಪೂರ್ಣವಾಗಿ ಸಂಬಂಧ ಕಡಿದುಕೊಂಡಿದ್ದೇನೆ. ಸಂಪರ್ಕವೂ ಇಲ್ಲ ಎಂದು ಹೇಳಿದ್ದಳಂತೆ. ಇದಾದನಂತರ ಮದುವೆ ಮಾಡಿಕೊಳ್ಳೋದು ಬೇಡ ಎಂದು ನಿರ್ಧರಿಸಿ, ಮುಂದೇನು ಮಾಡುವುದು ಎನ್ನುವುದಕ್ಕೆ ಕೊಲೆ ವಿಚಾರಗಳನ್ನು ಆಲೋಚಿಸಿದ್ದಾಳೆ ಎಂದು ಹೇಳಲಾಗಿದೆ.
ಕೋಡ್ ವರ್ಡ್ ಮುಖಾಂತರ ಕೊಲೆ
ಪೊಲೀಸರು ಇತ್ತೀಚೆಗಷ್ಟೇ ಆರೋಪಿಗಳನ್ನು ಲೋಹಗಢ್ ಕೋಟೆಗೆ ಕರೆದೊಯ್ದು ಕ್ರೈಮ್ ಸೀನ್ ರಿಕನ್ಸ್ಟ್ರಕ್ಷನ್ (ಸ್ಥಳ ಮಹಜರು) ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಸ್ಕೆಚ್ ಹಾಕಿದ ಭೀಕರ ವಿಧಾನ ಬೆಳಕಿಗೆ ಬಂದಿದೆ. ಜೂನ್ 18 ರಂದು ಪ್ಲಾನ್ ಪ್ರಕಾರ ಸಿಯಾ, ಕೇತನ್‌ನನ್ನು ಕೋಟೆಯ ತುದಿಗೆ ಕರೆದೊಯ್ದಿದ್ದಾಳೆ. ಅಲ್ಲಿ ನೀರು ಕುಡಿಯುವ ನೆಪದಲ್ಲಿ ಅಥವಾ ಶೂ ಲೇಸ್ ಕಟ್ಟುವ ನೆಪದಲ್ಲಿ ಕೆಳಗೆ ಕುಳಿತುಕೊಳ್ಳುವುದು ಇವರಿಬ್ಬರ ಕೋಡ್ ವರ್ಡ್ ಆಗಿತ್ತು. ಸಿಯಾ ಕೆಳಗೆ ಕುಳಿತುಕೊಳ್ಳುತ್ತಿದ್ದಂತೆ ಹಿಂದಿನಿಂದ ಬಂದ ಚೇತನ್, ಕೇತನ್‌ನನ್ನು ಕಂದಕಕ್ಕೆ ತಳ್ಳಿದ್ದಾನೆ. ಸಿಯಾ ಕೆಳಗೆ ಕುಳಿತುಕೊಂಡಿದ್ದಕ್ಕೆ ಮುಖ್ಯ ಕಾರಣವೆಂದರೆ, ಕೇತನ್ ಬೀಳುವಾಗ ಆಕೆಯನ್ನು ಹಿಡಿದುಕೊಂಡರೆ ಆಕೆಯೂ ಜೊತೆಗೆ ಬೀಳಬಹುದು ಎಂಬ ಭಯದಿಂದ ಆಕೆಯ ಸುರಕ್ಷತೆಗಾಗಿ ಈ ರೀತಿ ಪ್ಲಾನ್ ಮಾಡಲಾಗಿತ್ತು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ, (ಏಜೆನ್ಸೀಸ್)