Siya Goyal Father Clarification on Middle finger gesture
- ಸಿಯಾ ಗೋಯೆಲ್ ಕೈಗೆ ಕಾರಿನ ಬಾಗಿಲು ಬಡಿದು ಗಾಯವಾಗಿತ್ತು, ಅಶ್ಲೀಲ ಸನ್ನೆ ಮಾಡಿಲ್ಲ
- ಸಿಯಾ ವಿರುದ್ಧ ಕೇಳಿ ಬಂದಿದ್ದ ಅಶ್ಲೀಲ ಸನ್ನೆ ವಿವಾದಕ್ಕೆ ಕ್ಲಾರಿಟಿ ಕೊಟ್ಟ ತಂದೆ ಪ್ರವೀಣ್ ಗೋಯಲ್
- ತಪ್ಪು ಮಾಹಿತಿ ಕೊಡಬೇಡಿ ಎಂದು ಮಾಧ್ಯಮದ ಮುಂದೆ ಮನವಿ ಮಾಡಿಕೊಂಡ ಪ್ರವೀಣ್ ಗೋಯಲ್
ಪುಣೆ: 'ಮಗಳ ಕೈಗೆ ಗಾಯವಾಗಿತ್ತು. ಆಕೆ ಅಶ್ಲೀಲ ಕೈ ಸನ್ನೆ ಮಾಡಿಲ್ಲ. ಇದು ಉದ್ದೇಶ ಪೂರ್ವಕವಲ್ಲ. ತಪ್ಪಾಗಿ ಮಾಹಿತಿ ಕೊಡ್ಬೇಡಿ' ಹೀಗೆಂದು ಮಗಳು ಸಿಯಾ ಗೋಯಲ್ ವಿರುದ್ಧ ಹರಿದಾಡುತ್ತಿದ್ದ ಅಶ್ಲೀಲ ಸನ್ನೆ ವಿವಾದಕ್ಕೆ ಪೂರ್ಣ ವಿರಾಮವಿಟ್ಟಿದ್ದು, ಸಮರ್ಥಿಸಿಕೊಂಡಿದ್ದು ಆಕೆಯ ತಂದೆ ಪ್ರವೀಣ್ ಗೋಯಲ್
ಹೌದು, ಯುವ ಉದ್ಯಮಿ ಕೇತನ್ ಅಗರ್ವಾಲ್ರನ್ನು ಕೊಂದಿರುವ ಆರೋಪದ ಮೇಲೆ ವಿಚಾರಣೆಗೆ ಒಳಪಟ್ಟಿರುವ ಆರೋಪಿ ಸಿಯಾ ಕ್ಯಾಮೆರಾ ಮುಂದೆ ಅಶ್ಲೀಲ ಸನ್ನೆ (ಮಧ್ಯದ ಬೆರಳು ತೋರಿಸಿ) ಮಾಡಿದ್ದರು ಎಂದು ಆರೋಪಿಸಿ ವಿಡಿಯೋಗಳು ಹರಿದಾಡಿದ್ದವು. ಈ ಬಗ್ಗೆ ಅವರ ತಂದೆ ಪ್ರವೀಣ್ ಗೋಯಲ್ ಮಾತನಾಡಿದ್ದಾರೆ.
ಅಶ್ಲೀಲ ಸನ್ನೆ ಮಾಡಿದ್ರ ಸಿಯಾ?
ಗುರುವಾರ ಪುಣೆ ಗ್ರಾಮೀಣ ಪೊಲೀಸರು, ಸಾಕ್ಷಿಗಳನ್ನು ಸಂಗ್ರಹ ಮಾಡುವ ಸಲುವಾಗಿ ಮಾರ್ಕೆಟ್ ಯಾರ್ಡ್ನಲ್ಲಿರುವ ಸಿಯಾ ಗೋಯಲ್ ನಿವಾಸಕ್ಕೆ ಕರೆತಂದಿದ್ದರು. ಮನೆಯಿಂದ ಅವರನ್ನು ಮನೆಯಿಂದ ಹೊರಗೆ ಕರೆತಂದು ಪೊಲೀಸರ ಜೀಪನ್ನು ಹತ್ತಿಕೊಳ್ಳುವಾಗ ಅವರು ಮಧ್ಯದ ಬೆರಳನ್ನು ಕ್ಯಾಮೆರಾ ಮುಂದೆ ತೋರಿಸಿದ್ದಾರೆ ಎಂದು ವಿಡಿಯೋಗಳು ಹರಿದಾಡಿದ್ದವು. ಆಕೆಯ ಅತಿರೇಕದ ನಡೆ ವಿರುದ್ಧ ಹಲವರು ಕಿಡಿಕಾರಿದ್ದರು.
ಪ್ರವೀಣ್ ಗೋಯಲ್ ಏನಂದ್ರು
ಸೋಶಿಯಲ್ ಮೀಡಿಯಾದಲ್ಲಿ ಸಿಯಾ ಗೋಯಲ್ ಅಶ್ಲೀಲ ಸನ್ನೆ ಮಾಡಿದ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸುತ್ತಲೇ ಪ್ರವೀಣ್ ಗೋಯಲ್ ಮಾತನಾಡಿ, ಸಿಯಾ ಅಶ್ಲೀಲ ಸನ್ನೆ ಮಾಡಿಲ್ಲ. ಆಕೆ ಪೊಲೀಸ್ ವಾಹನ ಹತ್ತುವಾಗ ಕಾರಿನ ಬಾಗಿಲು ಆಕೆಯ ಬೆರಳಿಗೆ ಬಡಿದು ಗಾಯವಾಗಿತ್ತು, ರಕ್ತ ಹೆಪ್ಪುಗಟ್ಟಿ ಹಸಿರು ಬಣ್ಣಕ್ಕೆ ತಿರುಗಿತ್ತು. ಸಿಯಾ ಬೆರಳಿಗೆ ಬ್ಯಾಂಡೇಜ್ ಹಾಕಲಾಗಿತ್ತು. ಒಂದು ಬೆಳು ಊದಿಕೊಂಡಿದೆ. ಆಕೆ ಉದ್ದೇಶಪೂರ್ವಕವಾಗಿ ಹಾಗೆ ನಡೆದುಕೊಂಡಿಲ್ಲ. ಆದರೆ,ಇದನ್ನೇ ತಪ್ಪಾಗಿ ಪ್ರಚಾರ ಮಾಡುತ್ತಿರುವುದು ದುರದೃಷ್ಟಕರ ಎಂದು ಅವರು ಹೇಳಿದರು.
ಏನಿದು ಘಟನೆ?
ಜೂ.18ರಂದು ಯುವ ಉದ್ಯಮಿ ಕೇತನ್ ಅಗರ್ವಾಲ್ರನ್ನು ಲೋಹಗಡ ಕೋಟೆಯಿಂದ ಭಾವಿ ಪತ್ನಿ ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರ ಚೇತನ್ ಚೌಧರಿ ತಳ್ಳಿ ಕೊಲೆ ಮಾಡಿದ್ದರು. ನಂತರ, ಸೆಲ್ಫಿ ತೆಗೆದುಕೊಳ್ಳುವಾಗ ಮೇಲಿನಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಕೇತನ್ ಕುಟುಂಬಸ್ಥರನ್ನು ನಂಬಿಸಿದ್ದಳು. ಭಾವಿ ಪತಿ ಮೃತದೇಹ ಮನೆಗೆ ಬಂದಾಗ ಆಕೆಯ ಮುಖದಲ್ಲಿ ಕಾಣದ ದುಃಖ, ಪ್ರಕರಣದ ಬಗ್ಗೆ ಆಕೆ ಹೇಳುತ್ತಿದ್ದ ವಿಚಾರದಲ್ಲಿ ಸಂದೇಹ ಕಾಣಿಸಿಕೊಂಡ ಹಿನ್ನೆಲೆ ಪೊಲೀಸರಿಗೆ ಮರು ತನಿಖೆಗೆ ಕುಟುಂಬ ಮನವಿ ಮಾಡಿಕೊಂಡಿತ್ತು.
ಕೇತನ್ ಕುಟುಂಬಸ್ಥರ ದೂರಿನ ಮೇರೆಗೆ, ಕೋಟೆ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ, ಕಾಲ್ ಡಿಟೇಲ್ಸ್, ಕೋಟೆ ಭಾಗದಲ್ಲಿ ಅನುಮಾನಸ್ಪದ ಓಡಾಟದ ಬಗ್ಗೆ ತೀವ್ರ ತನಿಖೆ ನಡೆಸಿದ ಪೊಲೀಸರು ಸಿಯಾರನ್ನು ಬಂಧಿಸಿದರು. ಅತಿಯಾದ ಶಾಖದ ನಡುವೆಯೂ ಜಾಕೆಟ್ ಹಾಕಿದ್ದ ಯುವಕನನ್ನು ಹುಡುಕಿ ಹೊರಟಾಗ ಆತ ಸಿಯಾಳ ಪ್ರಿಯಕರ ಎನ್ನುವುದು ತಿಳಿದುಬಂದಿದೆ. ಸದ್ಯ ಈ ಕೇಸ್ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪೊಲೀಸರ ವಿಚಾರಣೆ ಮುಂದುವರೆದಿದೆ, (ಏಜೆನ್ಸೀಸ್).