ಖ್ಯಾತ ನಟ ಮತ್ತು ರಾಜ್ಯಸಭಾ ಸಂಸದ ಕಮಲ್ ಹಾಸನ್
ಚೆನ್ನೈ: ತಮಿಳುನಾಡು ಸೇರಿ ದೇಶಾದ್ಯಂತ ಇತ್ತೀಚೆಗೆ ಬಿಡುಗಡೆಯಾಗಿರುವ ತಮಿಳು ನಟ ಶಿವಕಾರ್ತಿಕೇಯನ್ ಅಭಿನಯದ ಪರಾಶಕ್ತಿ ಸಿನಿಮಾವನ್ನು ಮೆಚ್ಚಿಕೊಂಡು ಅಭಿನಂದಿಸಿರುವ ಖ್ಯಾತ ನಟ ಮತ್ತು ರಾಜ್ಯಸಭಾ ಸಂಸದ ಕಮಲ್ ಹಾಸನ್, ಇದನ್ನೂ ಚುನಾವಣೆಗೂ ಮುನ್ನ ಸಿಕ್ಕ ಡಿಎಂಕೆಯ ವಾರ್ ಡ್ರಮ್ ಎಂದು ಹೊಗಳಿದ್ದಾರೆ.
ತಮಿಳಿನ ಖ್ಯಾತ ನಿರ್ದೇಶಕಿ ಸುಧಾ ಕೊಂಗರ ಬರೆದು ನಿರ್ದೇಶಿಸಿರುವ ಪರಾಶಕ್ತಿ ಸಿನಿಮಾದಲ್ಲಿ ಶಿವಕಾರ್ತಿಕೇಯನ್, ರವಿ ಮೋಹನ್, ಅಥರ್ವ ಮತ್ತು ಶ್ರೀಲೀಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವೂ 1960 ದಶಕದಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಹಿಂದಿ ಹೇರಿಕೆ ವಿರುದ್ಧ ಆರಂಭಿಸಿದ ಹೋರಾಟವನ್ನು ಒಳಗೊಂಡಿದೆ ಎನ್ನಲಾಗಿದೆ.
ಸಿನಿಮಾ ನೋಡಿದ ಬಳಿಕ ಸುದೀರ್ಘವಾಗಿ ಡಿಸಿಎಂ ಉದಯನಿಧಿ ಸ್ಟಾಲಿನ್ ಅವರಿಗೆ ಪತ್ರ ಬರೆದಿರುವ ಕಮಲ್ ಹಾಸನ್, ನಾನು ಪರಾಶಕ್ತಿ ಸಿನಿಮಾ ನೋಡುವ ಮೊದಲು ಇಷ್ಟೊಂದು ರಾಜಕೀಯದ ತೂಕ ಮತ್ತು, ನಮ್ಮ ಮೈತ್ರಿಕೂಟ ಎದುರಿಸಲಿರುವ ಚುನಾವಣೆಯ ಪ್ರಬಲ ಯುದ್ಧ ನಗಾರಿಯಾಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಇದು ಮುಂಬರುವ 2026ರ ಚುನಾವಣೆಯ ಮುನ್ನ ನಮಗೆ ಸಿಕ್ಕ ವಾರ್ ಡ್ರಮ್ ಎಂದು ಬಣ್ಣಿಸಿದ್ದಾರೆ.
ಈ ಸಿನಿಮಾ ಗೆಲ್ಲಬೇಕು.ಇದು ನನ್ನ ಆಶಯ ಮಾತ್ರವಲ್ಲ, ನನ್ನ ಪ್ರಾಮಾಣಿಕ ಆಶೀರ್ವಾದವೂ ಹೌದು. ಈ ಸಿನಿಮಾ ಡಿಎಂಕೆ ಇತಿಹಾಸದಲ್ಲಿ ಕೆತ್ತಿದ ವಿಜಯೋತ್ಸವದ ತಿಲಕವಾಗಿದೆ. ನನ್ನ ಮೊದಲ ಅಭಿನಂದನೆ ಜೀವನಚರಿತ್ರೆಯ ಪ್ರಭಾವಶಾಲಿ ಕಥೆಯನ್ನು ಆಯ್ಕೆ ಮಾಡಿಕೊಂಡ ನಿರ್ದೇಶಕಿ ಸುಧಾ ಕೊಂಗರ ಮತ್ತು ಅದಕ್ಕಾಗಿ ಶ್ರಮಿಸಿದ ನನ್ನ ಕಿರಿಯ ಸಹೋದರ ಶಿವಕಾರ್ತಿಕೇಯನ್ ಅವರಿಗೆ, ಉಳಿದ ಎಲ್ಲರೂ ಈ ಸಿನಿಮಾದ ಇತಿಹಾಸದ ಭಾಗ ಎಂದು ಕರೆದಿದ್ದಾರೆ (ಏಜೆನ್ಸೀಸ್).