Voter List Revision | ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಚಿತ್ರ 
ದೇಶ

ಮತದಾರರೇ ಎಚ್ಚರ! ಇಲ್ಲಿದೆ ವೋಟರ್ ಐಡಿಯ ಬಿಗ್ ಅಪ್‌ಡೇಟ್.. ನಿಮ್ಮ ಹೆಸರು ಚೆಕ್ ಮಾಡಿಕೊಳ್ಳೋದು ಮರೆಯಬೇಡಿ! | Voter List Revision

ನವದೆಹಲಿ: ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿದಂತೆ ಉಳಿದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು (Voter List Revision ) ಮುಂಬರುವ ಏಪ್ರಿಲ್​ನಿಂದ ಆರಂಭಿಸುವ ನಿರೀಕ್ಷೆಯಿದೆ ಎಂದು ಕೇಂದ್ರ ಚುನಾವಣಾ ಆಯೋಗ (ECI) ತಿಳಿಸಿದೆ.
ಗುರುವಾರ ಹೊರಡಿಸಿದ ಪತ್ರದಲ್ಲಿ, ಚುನಾವಣಾ ಕಾರ್ಯದರ್ಶಿ ಪವನ್ ದಿವಾನ್ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಸುಗಮ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಆದಷ್ಟು ಬೇಗ ಪೂರ್ವಸಿದ್ಧತಾ ಕಾರ್ಯಗಳನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದ್ದಾರೆ.

ಇವೇ ನೋಡಿ ಆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

ಆಂಧ್ರ ಪ್ರದೇಶ
ಅರುಣಾಚಲ ಪ್ರದೇಶ
ಚಂಡೀಗಢ
ದಾದ್ರಾ ಮತ್ತು ನಗರ್ ಹವೇಲಿ
ದಮನ್ ಮತ್ತು ದಿಯು
ಹರಿಯಾಣ
ಹಿಮಾಚಲ ಪ್ರದೇಶ
ಜಮ್ಮು ಮತ್ತು ಕಾಶ್ಮೀರ
ಜಾರ್ಖಂಡ್
ಕರ್ನಾಟಕ
ಲಡಾಖ್
ಮಹಾರಾಷ್ಟ್ರ
ಮಣಿಪುರ
ಮೇಘಾಲಯ
ಮಿಜೋರಾಂ
ನಾಗಾಲ್ಯಾಂಡ್
ದೆಹಲಿಯ NCT
ಒಡಿಶಾ
ಪಂಜಾಬ್
ಸಿಕ್ಕಿಂ
ತ್ರಿಪುರ
ತೆಲಂಗಾಣ
ಉತ್ತರಾಖಂಡ

ಎಸ್​​ಐಆರ್​ ಏಕೆ ಮುಖ್ಯ?

ಎಸ್​​ಐಆರ್​ ಹೊಸ ಮತದಾರರ ನೋಂದಣಿ, ಅಸ್ತಿತ್ವದಲ್ಲಿರುವ ನಮೂದುಗಳ ಪರಿಶೀಲನೆ ಮತ್ತು ಅನರ್ಹ ಹೆಸರುಗಳನ್ನು ತೆಗೆದುಹಾಕುವುದು ಸೇರಿದಂತೆ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆಯನ್ನು ಒಳಗೊಂಡಿರುತ್ತದೆ. ಭವಿಷ್ಯದ ಚುನಾವಣೆಗಳಿಗೆ ಮುಂಚಿತವಾಗಿ ಮತದಾರರ ಪಟ್ಟಿಗಳಲ್ಲಿ ಹೆಚ್ಚಿನ ನಿಖರತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಲಲು ಆಯೋಗ ಈ ಪ್ರಕ್ರಿಯೆಯನ್ನು ಆರಂಭಿಸಿದೆ.
ಅಕ್ರಮ ವಲಸಿಗರ ಮೂಲ ಸ್ಥಳಗಳನ್ನು ಪರಿಶೀಲಿಸುವ ಮೂಲಕ ಅವರನ್ನು ಹೊರಗಿಡುವುದು ಎಸ್‌ಐಆರ್‌ನ ಪ್ರಾಥಮಿಕ ಉದ್ದೇಶವಾಗಿದ್ದು, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಕ್ರಮ ವಲಸಿಗರ ಮೇಲೆ ಕಠಿಣ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಮಹತ್ವದ್ದಾಗಿದೆ(ಏಜೆನ್ಸೀಸ್​​).