ಹಸುವಿನ ಚರ್ಮದ ಬ್ಯಾಗ್ ಹಿಡಿದು ಆಕಳಿಗೆ ಆಹಾರ ನೀಡಿದ ಗಾಯಕಿ
- ಭಾರತಕ್ಕೆ ಬಂದ ಅಂತರಾಷ್ಟ್ರೀಯ ಗಾಯಕಿ ರಿಹಾನ್ನಾ
- ಮುಖೇಶ್ ಅಂಬಾನಿ ಮನೆಯಲ್ಲಿ ಅತಿಥಿ ಸತ್ಕಾರ
- ಹಸುವಿನ ಚರ್ಮದ ಬ್ಯಾಗ್ ಹಿಡಿದು ಆಕಳಿಗೆ ಆಹಾರ ನೀಡಿದ ಗಾಯಕಿ
- ಸೋಷಿಯಲ್ ಮೀಡಿಯಾನಲ್ಲಿ ಭಾರಿ ವಿವಾದಕ್ಕೆ ಕಾರಣವಾದ ಪೋಸ್ಟ್
ಮುಂಬೈ: ಅಂತರಾಷ್ಟ್ರೀಯ ಗಾಯಕಿ ರಿಹಾನ್ನಾ ಭಾರತಕ್ಕೆ ಬಂದಿರುವ ಸುದ್ದಿ ಎಲ್ಲರಿಗೂ ತಿಳಿದಿದೆ. ಮುಂಬೈಗೆ ತಮ್ಮ ನೂತನ ಮಳಿಗೆಯ ಉದ್ಘಾಘನೆಗೆ ಬಂದಿದ್ದ ರಿಹಾನ್ನಾ ಮುಖೇಶ್ ಅಂಬಾನಿ ಮನೆಗೆ ಬೇಟಿ ನೀಡಿದ್ದರು.
ದನದ ಚರ್ಮದ ಬ್ಯಾಗ್ ಹಿಡಿದು ಹಸುವಿನೊಂದಿಗೆ ಫೋಸ್!
ಮುಖೇಶ್ ಅಂಬಾನಿ ಅವರ ಅಟೆಂಲಿನಾಗೆ ತೆರಳಿದ್ದಾಗ, ಅಲಿದ್ದ ಹಸುವಿನ ಮರಿ (ಕರು) ಗೆ ಹುಲ್ಲು ತಿನ್ನಿಸುತ್ತಾ, ರಿಹಾನ್ನಾ ಫೋಟೊಗೆ ಫೋಸ್ ನೀಡಿದ್ದಾರೆ. ಆದರೆ ಈ ಫೋಟೊಗೆ ಫೋಸ್ ನೀಡುವಾಗ ರಿಹಾನ್ನಾ (Rihanna Cow Skin Bag) ಳ ಕೈಲಿದ್ದ ದುಬಾರಿ ಬ್ಯಾಗೊಂದು ಎಲ್ಲರ ಕಣ್ಣಿಗೆ ಬಿದ್ದಿದ್ದು, ಈ ಬ್ಯಾಗ್ನ್ನು ಸಹ ದನದ ಚರ್ಮದಿಂದ ತಯಾರಿಸಲಾಗಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿ ದಾಡುತ್ತಿದೆ.
ದೇವರಿಗೆ ಆರತಿ ಬೆಳಗಿದ ಗಾಯಕಿ!
ಮನೆಗೆ ಆಗಮಿಸಿದ ಅಂತರಾಷ್ಟ್ರೀಯ ಗಾಯಕಿ ರಿಹಾನ್ನಾರನ್ನು ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ, ಸೊಸೆಯಂದಿರಾದ ಶ್ಲೋಕಾ ಮೆಹ್ತಾ, ರಾಧಿಕಾ ಮರ್ಚೆಂಟ್ ಹಾಗೂ ಮಗ ಅನಂತ್ ಅಂಬಾನಿ ಸ್ವಾಗತಿಸಿದರು.
ಮನೆಗೆ ಅತಿಥಿಯಾಗಿ ಆಗಮಿಸಿದ ರಿಹಾನ್ನಾಗಾಗಿ ವಿಶೇಷ ಪೂಜೆಯನ್ನು ಏರ್ಪಡಿಸಿದ್ದ ಅಂಬಾನಿ ಪರಿವಾರದ ಜೊತೆಗೆ ಎಲ್ಲಾ ರೀತಿಯ ಕಾರ್ಯಕ್ರಮದಲ್ಲಿ ರಿಹಾನ್ನಾ ಸಕ್ರೀಯವಾಗಿ ಪಾಲ್ಗೊಂಡಿದ್ದಾರೆ.
ನಂತರ ದೇವರಿಗೆ ಆತರಿ ಬೆಳಗಿದ ರಿಹಾನ್ನಾ, ನಂತರ ಹೂನಿನ ಹೋಳಿ (ಫೂಲ್ ಕಿ ಹೋಲಿ) ಯಲ್ಲಿ ಭಾಗವಹಿಸಿ, ಅಂಬಾನಿ ಮನೆಯವರೊಂದಿಗೆ ಹೂವುಗಳನ್ನು ಪರಸ್ಪರ ಎರಚಿಕೊಳ್ಳುತ್ತಾ ನೃತ್ಯ ಮಾಡಿದ್ದಾರೆ. ಈ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ನೆಟ್ಟಿಗರು ಏನಂತಾರೆ?
ರಿಹಾನ್ನಾಳ ಈ ಫೋಟೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರೊಚ್ಚಿಗೆದ್ದಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣೆಗೆ ಸುಣ್ಣ ಎಂಬ ನಮ್ಮ ಹಿರಿಯರ ಮಾತು ಸತ್ಯ ಎಂದು ಒಬ್ಬರು ಹೇಳಿದ್ದಾರೆ. ಇವೆಲ್ಲಾ ಬರೀ ಪಬ್ಲಿಸಿಟಿ ಸ್ಟಂಟ್ ಎಂದು ಇನ್ನೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಪವಿತ್ರ ಪ್ರಾಣಿ ಹಸುವಿನ ಚರ್ಮದ ಬ್ಯಾಗ್ ಹಿಡಿದಿರುವ ಈ ಗಾಯಕಿಯ ಯಾವ ಹಾಡನ್ನು ಇನ್ಮುಂದೆ ಕೇಳುವುದಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ.
ಯಾರು ಈ ರಿಹಾನ್ನಾ?
ರಿಹಾನ್ನಾ ಪೂರ್ಣ ಹೆಸರು ರಾಬಿನ್ ರಿಹಾನ್ನಾ ಫೆಂಟಿ, ಇವರು 1988ರಲ್ಲಿ ಕೆರಿಬಿಯನ್ ದ್ವೀಪ ರಾಷ್ಟ್ರವಾದ ಬಾರ್ಬಡೋಸ್ನಲ್ಲಿ ಜನಿಸಿದರು.ಇವರು ವಿಶ್ವದ ಅತ್ಯಂತ ಪ್ರಸಿದ್ಧ ಗಾಯಕಿ, ಗೀತರಚನೆಗಾರ್ತಿ, ನಟಿ ಮತ್ತು ಯಶಸ್ವಿ ಉದ್ಯಮಿಯಾಗಿ ಗುರುತಿಸಿ ಕೊಂಡಿದ್ದಾರೆ. ಇವರು ಫೆಂಟಿ ಬ್ಯೂಟಿ (Fenty Beauty) ಎಂಬ ಪ್ರಸಿದ್ಧ ಸೌಂದರ್ಯವರ್ಧಕ ಬ್ರ್ಯಾಂಡ್ ಮತ್ತು ಸ್ಯಾವೇಜ್ ಎಕ್ಸ್ ಫೆಂಟಿ (Savage X Fenty) ಎಂಬ ಒಳ ಉಡುಪುಗಳ ಬ್ರ್ಯಾಂಡ್‌ನ ಮಾಲಕಿಯಾಗಿದ್ದಾರೆ.
ಇವರು ವಿಶ್ವದ ಅತ್ಯಂತ ಶ್ರೀಮಂತ ಮಹಿಳಾ ಸಂಗೀತಗಾರ್ತಿಯರಲ್ಲಿ ಒಬ್ಬರಾಗಿದ್ದು, ಇಲ್ಲಿಯವರೆಗೆ 9 ಗ್ರಾಮಿ ಪ್ರಶಸ್ತಿಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಬಾರ್ಬಡೋಸ್ ಸರ್ಕಾರವು ಇವರನ್ನು ರಾಷ್ಟ್ರೀಯ ನಾಯಕಿ ಎಂದು ಗೌರವಿಸಿದೆ,(ಏಜನ್ಸೀಸ್).