Rajnath Singh | ರಕ್ಷಣಾ ಸಚಿವ ರಾಜನಾಥ್ ಸಿಂಗ್
ಡೆಹ್ರಾಡೂನ್: ಆಪರೇಷನ್ ಸಿಂಧೂರವು ನಾಗರಿಕ ಮತ್ತು ಮಿಲಿಟರಿ ಸಮ್ಮಿಲನದ ಅದ್ಭುತ ಉದಾಹರಣೆಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh) ಶನಿವಾರ (ನ.29) ಹೇಳಿದ್ದಾರೆ. ಅಲ್ಲದೆ, ಆಡಳಿತ ಯಂತ್ರವು ಸಶಸ್ತ್ರ ಪಡೆಗಳೊಂದಿಗೆ ಸರಾಗವಾಗಿ ಕೆಲಸ ಮಾಡಿ ಪ್ರಮುಖ ಮಾಹಿತಿಯನ್ನು ಸಂವಹನ ನಡೆಸಿತು ಮತ್ತು ಸಾರ್ವಜನಿಕ ವಿಶ್ವಾಸವನ್ನು ಹೆಚ್ಚಿಸಿತು ಎಂದಿದ್ದಾರೆ.
ಈ ಬಗ್ಗೆ ಉತ್ತರಾಖಂಡದ ಮಸ್ಸೂರಿಯಲ್ಲಿರುವ LBSNAAಯಲ್ಲಿ ನಡೆದ 100ನೇ ಕಾಮನ್ ಫೌಂಡೇಶನ್ ಕೋರ್ಸ್‌ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ತಮ್ಮ ನಿರ್ಣಾಯಕ ಪಾತ್ರವನ್ನು ಅರ್ಥಮಾಡಿಕೊಳ್ಳಲು ಮತ್ತು ಧೈರ್ಯಶಾಲಿ ಸೈನಿಕರಂತೆ, ನಿರ್ಣಾಯಕ ಸಂದರ್ಭಗಳಿಗೆ ಯಾವಾಗಲೂ ಸಿದ್ಧರಾಗಿರಲು ಯುವ ನಾಗರಿಕ ಸೇವಕರಿಗೆ ಕರೆ ನೀಡಿದರು.
ಮುಂದುವರೆದು ಮಾತನಾಡಿದ ಸಿಂಗ್, ಆಪರೇಷನ್ ಸಿಂಧೂರವು ನಾಗರಿಕ-ಮಿಲಿಟರಿ ಸಮ್ಮಿಲನದ ಒಂದು ಅದ್ಭುತ ಉದಾಹರಣೆಯಾಗಿದೆ. ಅಲ್ಲದೆ, ಅಲ್ಲಿ ಆಡಳಿತ ಯಂತ್ರವು ಸಶಸ್ತ್ರ ಪಡೆಗಳೊಂದಿಗೆ ಸರಾಗವಾಗಿ ಕೆಲಸ ಮಾಡಿ ಪ್ರಮುಖ ಮಾಹಿತಿಯನ್ನು ಸಂವಹನ ಮಾಡಲು ಮತ್ತು ಸಾರ್ವಜನಿಕ ವಿಶ್ವಾಸವನ್ನು ಬೆಳೆಸಲು ಸಹಾಯ ಮಾಡಿತು ಎಂದು ಶ್ಲಾಘಿಸಿದ್ದಾರೆ.
ಆಪರೇಷನ್ ಸಿಂಧೂರದ ಸಮಯದಲ್ಲಿ, ಸಶಸ್ತ್ರ ಪಡೆಗಳು ಸಮತೋಲಿತ ಮತ್ತು ಉಲ್ಬಣಗೊಳ್ಳದ ಪ್ರತಿಕ್ರಿಯೆಯಲ್ಲಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದವು, ಆದರೆ, ನೆರೆಯ ದೇಶದ ದುರುಪಯೋಗವೇ ಗಡಿಯಲ್ಲಿ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಲು ಅವಕಾಶ ನೀಡಲಿಲ್ಲ ಎಂದು ರಕ್ಷಣಾ ಸಚಿವರು ಪ್ರತಿಪಾದಿಸಿದ್ದಾರೆ.
2047ರ ವೇಳೆಗೆ ವಿಕಸಿತ ಭಾರತದ ಗುರಿ
ಪ್ರಧಾನಿ ನರೇಂದ್ರ ಮೋದಿಯವರ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ' ಮತ್ತು ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ ಎಂಬ ಮಂತ್ರದ ಮೇಲೆ ಬೆಳಕು ಚೆಲ್ಲುತ್ತದೆ. ಅಲ್ಲದೆ, ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ವೇಗಗೊಳಿಸುವಲ್ಲಿ ನಾಗರಿಕ ಸೇವಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ರಾಜನಾಥ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2014 ರಲ್ಲಿ ನಮ್ಮ ಸರ್ಕಾರ ರಚನೆಯಾದಾಗ, ಭಾರತವು ಆರ್ಥಿಕತೆಯಲ್ಲಿ 11 ನೇ ಸ್ಥಾನದಲ್ಲಿತ್ತು. ಅದರೆ, ಕಳೆದ 9-10 ವರ್ಷಗಳಲ್ಲಿ, ನಾವು ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದೇವೆ. ಅಲ್ಲದೆ, ಮಾರ್ಗನ್ ಸ್ಟಾನ್ಲಿಯಂತಹ ಹೆಚ್ಚು ಖ್ಯಾತಿ ಗಳಿಸಿರುವ ಹಣಕಾಸು ಸಂಸ್ಥೆಗಳು ಸಹ ಈಗ ಭಾರತವು ಮುಂದಿನ ಎರಡು-ಮೂರು ವರ್ಷಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಬಹುದು ಎಂದು ಹೇಳುತ್ತವೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ,(ಏಜೆನ್ಸೀಸ್).