Silver 
ದೇಶ

ಬೆಳ್ಳಿ ಬೆಲೆ 5,000 ರೂ. ಏರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಬೆಳ್ಳಿಯ ಬೆಲೆ 5,000 ರೂ. ಏರಿಕೆಯಾಗಿ, ಪ್ರತಿ ಕೆಜಿಗೆ 2,56,000 ರೂ.ಗೆ ತಲುಪುವ ಮೂಲಕ ಹೊಸ ದಾಖಲೆ ನಿರ್ವಿುಸಿದೆ. 
ಮಂಗಳವಾರ ಇದು 2,51,000 ರೂ. ಇತ್ತು. ಅಮೆರಿಕ ಮತ್ತು ವೆನೆಜುವೆಲಾ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆ ಹೂಡಿಕೆದಾರರನ್ನು ಸುರಕ್ಷಿತ ಹೂಡಿಕೆಯತ್ತ ಸೆಳೆದಿದೆ. ಇದರೊಂದಿಗೆ, ಪೂರೈಕೆಯ ಕೊರತೆ ಮತ್ತು ಚೀನಾದಿಂದ ಜ. 1 ರಿಂದ ಜಾರಿಗೆ ಬಂದಿರುವ ಬೆಳ್ಳಿ ರಫ್ತು ನಿರ್ಬಂಧಗಳು ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ. ಮತ್ತೊಂದೆಡೆ, ಬಂಗಾರದ ಬೆಲೆಯಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ. ಶೇ. 99.9 ಶುದ್ಧತೆಯ ಚಿನ್ನದ ಬೆಲೆ 100 ರೂ. ಇಳಿಕೆಯಾಗಿ, ಪ್ರತಿ 10 ಗ್ರಾಂಗೆ 1,41,400 ರೂ.ಗೆ ತಲುಪಿದೆ.