ಕರ್ನಾಟಕ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಕೆ.ಎನ್​.ರಾಜಣ್ಣ 
ದೇಶ

‘ಸಿದ್ದರಾಮಯ್ಯ ಮುನಿಸಿಕೊಂಡಿಲ್ಲ, ಆ ಚಾಪ್ಟರ್ ಕ್ಲೋಸ್’: ‘ರಾಜಣ್ಣನಿಗೆ ಹೇಳಿಯೇ ರವಿಯನ್ನು ಆಯ್ಕೆ ಮಾಡಿದ್ದೇವೆ’; ಡಿಸಿಎಂ ಪರಮೇಶ್ವರ ಸ್ಪಷ್ಟನೆ! DCM G Parameshwara

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಲಿದ್ದು, ಪ್ರಸ್ತುತ ಸರ್ಕಾರ ಹಾಗೂ ಸಿಎಂ ಮೇಲೆ ಮುನಿಸಿಕೊಂಡು ಮಾಜಿ ಸಿಎಂ ದೆಹಲಿ ಪ್ರವಾಸ ಕೈಗೊಂಡಿದ್ದಾರೆಂಬ ವದಂತಿ ಕೇಳಿಬರುತ್ತಿದ್ದು, ಇದಕ್ಕೆ ಡಿಸಿಎಂ ಡಾ. ಪರಮೇಶ್ವರ (DCM G Parameshwara) ಸ್ಪಷ್ಟನೆ ನೀಡಿದ್ದಾರೆ.
ಸಿದ್ದರಾಮಯ್ಯನವರಿಗೆ ಪ್ರಸ್ತುತ ಸರ್ಕಾರದ ಮೇಲಾಗಲೀ, ಈಗೀನ ಮುಂಖ್ಯಮಂತ್ರಿಗಳ ಮೇಲಾಗಲೀ ಕೋಪವಿದ್ದರೆ ಅಥವಾ ಅಧಿಕಾರದ ಮೇಲೆ ಆಸೆಯಿದ್ದರೆ ಅವರು ಸಿಎಂ ಸ್ಥಾನವನ್ನು ಬಿಟ್ಟುಕೊಡುತ್ತಿರಲಿಲ್ಲ. ಸಿದ್ದರಾಮಯ್ಯನವರಿಗೆ ಯಾವುದೇ ಅಸಮಾಧಾನ ಇಲ್ಲ, ಅವರು ಹೈಕಮಾಂಡ್​ ಮಾತಿಗೆ ಬದ್ಧನೆಂದು ಹೇಳಿದ್ದರು, ಹಾಗೂ ಅದೇ ರೀತಿ ನಡೆದುಕೊಂಡಿದ್ದಾರೆ. ಈಗ ಈ ಸಮಾಧಾನ, ಅಸಮಾಧಾನ ಎನ್ನುವುದೆಲ್ಲ ಮುಗಿದ ಅಧ್ಯಾಯವಾಗಿದೆ ಎಂದು ಹೇಳಿದ್ದಾರೆ.

ಅವರು ವರ್ಕಿಂಗ್​ ಕಮಿಟಿ ಮೆಂಬರ್​!

ರಾಜ್ಯ ರಾಜಕಾರಣದಲ್ಲಿ ಯಾವುದೇ ಹೊಸ ಬೆಳವಣಿಗೆಯಿಲ್ಲ. ಆ ಚಾಪ್ಟರ್​ ಕ್ಲೋಸ್​ ಆಗಿದೆ. ಸಿದ್ದರಾಮಯ್ಯನವರು ರಾಜಕೀಯದಲ್ಲಿ ಸಕ್ರೀಯವಾಗಿದ್ದಾರೆ. ಅವರು ಕಾಂಗ್ರೆಸ್​ನ ವರ್ಕಿಂಗ್ ಕಮಿಟಿ ಸದಸ್ಯರಿದ್ದಾರೆ. ಹೀಗಾಗಿ ಅವರು ದೆಹಲಿಗೆ ಹೋಗೊದು-ಬರೊದು ಇದ್ದೇ ಇರುತ್ತದೆ. ವರ್ಕಿಂಗ್​ ಕಮಿಟಿ ಮೀಟಿಂಗ್​ ಇದ್ದಾಗ ಎಲ್ಲಾ ಕಮಿಟಿ ಮೆಂಬರ್​ಗಳನ್ನು ಒಂದೇ ಸಲ ಕರೆಯಲ್ಲ, ವೈಯಕ್ತಿಕವಾಗಿ ಒಬೊಬ್ಬರನ್ನೇ ಕರೆಯುತ್ತಾರೆ. ಅಲ್ಲಿ ಅವರು ರಾಷ್ಟ್ರಮಟ್ಟದ ಪಾಲಿಸಿ ಬಗ್ಗೆ ಮಾತುಕತೆ ನಡೆಸುತ್ತಾರೆ ಎಂದಿದ್ದಾರೆ.
ನನ್ನ ಪ್ರಕಾರ ಅವರು ಇದೇ ಕಾರಣದಿಂದ ದೆಹಲಿಗೆ ಹೋಗಿರಬಹುದು. ಆ ಸಂದರ್ಭದಲ್ಲಿ ರಾಜ್ಯದ ಬಗ್ಗೆ ಕೂಡ ಚರ್ಚೆಯಾಗಬಹುದು. ಈಗ ವಿಧಾನ ಪರಿಷತ್​ಗೆ ಎಂಎಲ್​ಸಿಗಳ ಆಯ್ಕೆ ನಡೆಯಬೇಕಿದೆ, ಇದರ ಬಗ್ಗೆ ಕೂಡ ಅವರು ಚರ್ಚಿಸಬಹುದೆಂದು ಡಿಸಿಎಂ ತಿಳಿಸಿದ್ದಾರೆ.

ರಾಜಣ್ಣನಿಗೆ ಹೇಳಿಯೇ ಮಾಡಿದ್ದೇವೆ!

ಇನ್ನು ಅಪೆಕ್ಸ್‌ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆ ಹಾಗೂ ಮಾಜಿ ಸಚಿವ ಕೆ.ಎನ್​. ರಾಜಣ್ಣ ಅವರ ಅಸಮಾಧಾನದ ಬಗ್ಗೆಯೂ ಮಾತನಾಡಿರುವ ಡಿಸಿಎಂ ಪರಮೇಶ್ವರ, ಈ ವಿಚಾರವಾಗಿ ನಾನು, ಸಿಎಂ ಡಿ.ಕೆ. ಶಿವಕುಮಾರ್​ ಹಾಗೂ ಲಕ್ಷ್ಮಣ್​ ಸವದಿ ಮಾತನಾಡಿದ್ದೇವೆ.
ಹಾಗೂ ಎಲ್ಲಾ ಸದಸ್ಯರನ್ನು ಕರೆದು ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದೇವೆ. ರಾಜ್ಯದಲ್ಲಿ ಸರ್ಕಾರ ನಮ್ಮದೇ ಇರುವಾಗ, ಚುನಾವಣೆ ನಡೆಸುವುದು ಸರಿಯಲ್ಲ, ಹೀಗಾಗಿ ಯೋಗ್ಯ ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದೇವೆ ಎಂದಿದ್ದಾರೆ.
ಕೋ ಅಪರೇಟೀವ್ ಚುನಾವಣೆಯಲ್ಲಿ ರಾಜಿ ಬರೊಲ್ಲ, ಎಲ್ಲರ ಅಭಿಪ್ರಾಯ ಪಡೆದು ಹಾಗೂ ಕೆ.ಎನ್​. ರಾಜಣ್ಣನಿಗೆ ಹೇಳಿಯೇ ಎಸ್​. ರವಿಯನ್ನು ಅಪೆಕ್ಸ್‌ ಬ್ಯಾಂಕ್ ನೂತನ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದೇವೆಂದು ಡಾ. ಪರಮೇಶ್ವರ ತಿಳಿಸಿದ್ದಾರೆ.