ಅಂಧರ ಮಹಿಳಾ ಟಿ-20 ವಿಶ್ವಕಪ್‌ನಲ್ಲಿ ಗೆದ್ದ ಕರ್ನಾಟಕದ ಕ್ರೀಡಾಪಟುಗಳಿಗೆ ಹುಕ್ಕೇರಿ ಹಿರೇಮಠದಿಂದ ‘ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಪ್ರಶಸ್ತಿ’ಯನ್ನು 25 ಸಾವಿರ ರೂ.ನಗದಿನೊಂದಿಗೆ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಪ್ರದಾನ ಮಾಡಿದರು. ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮತ್ತಿತರರಿದ್ದರು.  
ದೇಶ

ಅಂಧರ ಮಹಿಳಾ ಟಿ20 ವಿಶ್ವಕಪ್ ವಿಜೇತರಿಗೆ "ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಪ್ರಶಸ್ತಿ"

ಬೆಂಗಳೂರು: ನಗರದಸಮರ್ಥನಂ ಸಭಾ ಭವನದಲ್ಲಿ ಶ್ರೀರಂಭಾಪುರಿ ಡಾ.ವೀರಸೋಮೇಶ್ವರಜಗದ್ಗುರುಗಳ 70ನೇಯ ಜನ್ಮದಿನೋತ್ಸವದಅಂಗವಾಗಿ ಬೆಳಗಾವಿ ಹುಕ್ಕೇರಿಶ್ರೀ ಗುರುಶಾಂತೇಶ್ವರ ಸಂಸ್ಥಾನಹಿರೇಮಠ ಕೊಡ ಮಾಡುವ "ಶ್ರೀರಂಭಾಪುರಿ ಜಗದ್ಗುರು ವೀರಸೋಮೇಶ್ವರಪ್ರಶಸ್ತಿ"ಯನ್ನುಅಂಧರ ಮಹಿಳಾ ಟೀ20ವಿಶ್ವಕಪ್ ವಿಜೇತಭಾರತ ತಂಡದ ಆಟಗಾರ್ತೀಯರಾದಕರ್ನಾಟಕದ ದೀಪಿಕಾ ಡಿ ಸಿ,ಕಾವ್ಯ ವಿ ಮತ್ತುಕಾವ್ಯ ಎನ್ ಆರ್ ಅವರನ್ನು ಹಾಗೂಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಯಅಧ್ಯಕ್ಷ ಮತ್ತು ಸಮರ್ಥನಂ ಟ್ರಸ್ಟ್ನ ಸಂಸ್ಥಾಪಕ ಡಾ.ಮಹಾಂತೇಶ ಜೆ ಕೆಅವರನ್ನು ಶ್ರೀಶೈಲ ಜಗದ್ಗುರುಡಾ. ಚನ್ನಸಿದ್ಧರಾಮಪಂಡಿತಾರಾಧ್ಯ ಶಿವಾಚಾರ್ಯಮಹಾಸ್ವಾಮಿಗಳ ಸಾನಿಧ್ಯದಲ್ಲಿಹುಕ್ಕೇರಿ ಹಿರೇಮಠದ ಶ್ರೀ ಷ ಬ್ರಚಂದ್ರಶೇಖರ ಶಿವಾಚಾರ್ಯಮಹಾಸ್ವಾಮಿಗಳವರು 25ಸಾವಿರ ನಗದುಹಣ, ಪ್ರಶಸ್ತಿಫಲಕದೊಂದಿಗೆ ಪ್ರಶಸ್ತಿಯನ್ನುನೀಡಿ ಗೌರವಿಸಿದರು.
ನಂತರಮಾತನಾಡಿದ ಶ್ರೀಶೈಲ ಜಗದ್ಗುರುಡಾ. ಚನ್ನಸಿದ್ಧರಾಮಪಂಡಿತಾರಾಧ್ಯ ಶಿವಾಚಾರ್ಯಮಹಾಸ್ವಾಮಿಗಳು ಶ್ರೀ ರಂಭಾಪುರಿಜಗದ್ಗುರು ಡಾ.ವೀರಸೋಮೇಶ್ವರಶಿವಾಚಾರ್ಯ ಮಹಾಸ್ವಾಮಿಗಳವರುಕ್ರಿಯಾಶೀಲ ಜಗದ್ಗುರುಗಳು.ಸಮಾಜಮುಖಿಕಾರ್ಯವನ್ನು ಮಾಡುವುದರೊಂದಿಗೆಎಲ್ಲರ ಮನವನ್ನು ಗೆದ್ದಿದ್ದಾರೆ.ಇವರ ಪೀಠ ಪರಂಪರೆಯಲ್ಲಿಬರುವ ಹುಕ್ಕೇರಿ ಹಿರೇಮಠದ ಶ್ರೀಗಳುಜಗದ್ಗುರುಗಳ ಜನ್ಮದಿನೋತ್ಸವದಅಂಗವಾಗಿ ಅಂಧರ ಮಹಿಳಾ ವಿಶ್ವಕಪ್ಗೆದ್ದಿರುವ ಆಟಗಾರತೀಯರಿಗೆಮತ್ತು ಇದರ ಪ್ರೇರಕರಿಗೆ ಪ್ರಶಸ್ತಿನೀಡುತ್ತಿರುವುದು ಅಭಿಮಾನದಸಂಗತಿ ಎಂದರು.
ಇದೇ ಸಂದರ್ಭದಲ್ಲಿಶ್ರೀ ಚಂದ್ರಶೇಖರ ಶಿವಾಚಾರ್ಯಸ್ವಾಮಿಗಳು ಮಾತನಾಡಿ,ಕಣ್ಣಿಲ್ಲದವರುಏನೆಲ್ಲವನ್ನು ಸಾಧಿಸಬಹುದುಎನ್ನುವುದಕ್ಕೆ ಉದಾಹರಣೆಆಟಗಾರ್ತೀಯರು ಇವತ್ತು ವಿಶ್ವಕಪ್ಗೆದ್ದಿರುವುದು ಹೆಮ್ಮೆಯ ಸಂಗತಿ.ಇದಕ್ಕೆ ಪ್ರೇರಕವಾಗಿನಿಂತು ಸಮರ್ಥನಂ ಟ್ರಸ್ಟ್ ನಸಂಸ್ಥಾಪಿಸಿ ಹಾಗೆಯೇ ಭಾರತೀಯಅಂಧರ ಕ್ರಿಕೆಟ್ ಸoಸ್ಥೆಯಅಧ್ಯಕ್ಷರಾದ ಡಾ.ಮಹಾಂತೇಶ್ ಅವರುಬೆಳಗಾವಿ ಜಿಲ್ಲೆಯವರು ಎಂದುಹೇಳಲು ನಮಗೆ ಹೆಮ್ಮೆ ಎನಿಸುತ್ತದೆ.ಇವರಿಂದ ಕರುನಾಡಿನಕೀರ್ತಿ ಎಲ್ಲೆಡೆಗೂ ಬೆಳಗುತ್ತಿರುವುದುಅಭಿಮಾನದ ಸಂಗತಿ ಎಂದರು.
ಪ್ರಶಸ್ತಿಯನ್ನುಪಡೆದ ಭಾರತೀಯ ಅಂಧರ ಕ್ರಿಕೆಟ್ಸಂಸ್ಥೆಯ ಅಧ್ಯಕ್ಷ ಡಾ.ಮಹಾಂತೇಶ್ ಮಾತನಾಡಿ ಇವತ್ತು ನಮ್ಮನ್ನೆಲ್ಲಅನೇಕ ದಿಗ್ಗಜರು ಕರೆಸಿ ಗೌರವಿಸಿಸನ್ಮಾನಿಸಿದ್ದಾರೆ.ಆದರೆ ಇಂದುಗುರುಗಳೇ ನಮ್ಮ ಹತ್ತಿರ ಬಂದುರಂಭಾಪುರಿ ಜಗದ್ಗುರುಗಳ ಹೆಸರಿನಿಂದಪ್ರಶಸ್ತಿ ನೀಡಿ ನಮ್ಮನ್ನುಪ್ರೋತ್ಸಾಹಿಸುತ್ತಿರುವುದುನಿಜಕ್ಕೂ ನಮ್ಮ ಭಾಗ್ಯ ಎಂದರು.
ವಿಶ್ವಕಪ್ವಿಜೇತ ಭಾರತ ತಂಡದ ನಾಯಕಿ ದೀಪಿಕಾಡಿ ಸಿ ಮಾತನಾಡಿ ವಿಶ್ವಕಪ್ ಗೆದ್ದಾಗಎಷ್ಟು ಸಂತೋಷ ವಾಗಿತ್ತೋ ಇವತ್ತುರಂಭಾಪುರಿ ಜಗದ್ಗುರುಗಳ ಹೆಸರಿನಪ್ರಶಸ್ತಿಯನ್ನು ಹುಕ್ಕೇರಿಶ್ರೀಗಳು ನೀಡುತ್ತಿರುವಾಗ ನಮಗೆಅಷ್ಟೇ ಸಂತೋಷ ವಾಗಿದೆ ಎಂದರು.
ನವದೆಹಲಿಯಅಖಿಲ ಭಾರತ ಹಿರಿಯ ನಾಗರೀಕರಮಹಾಸಂಘದ ರಾಷ್ಟ್ರೀಯ ಉಪಾಧ್ಯಕ್ಷಮಹಾಂತೇಶ್ ಹಿರೇಮಠ,ದಾವಣಗೆರೆಯಪ್ರಶಾಂತ್, ಖ್ಯಾತಅಂಕಣಕಾರ ರವಿ ಹಂಜ್,ಡಾ.ಕೆ.ಭೀಮ,ದಕ್ಷಿಣ ಆಫ್ರಿಕದಡಾ. ಜಾರ್ಜ್ಯಾಕೂಬ್, ನ್ಯಾಯಾಧೀಶಅನುರಾಧ ಯಾಕೂಬ್,ಪ್ರಾಚಾರ್ಯ ಡಾ.ಸಂಜಯ್ ಜೈನ್ಸೇರಿದಂತೆ ಇನ್ನೂ ಅನೇಕ ಗಣ್ಯರುಉಪಸ್ಥಿತರಿದ್ದರು.