ನವದೆಹಲಿ: ( Shreyas Iyer) ಟೀಮ್ ಇಂಡಿಯಾದ ಪ್ರಮುಖ ಬ್ಯಾಟರ್ ಮತ್ತು ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಅವರು ಅನಾರೋಗ್ಯದ ಕಾರಣದಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಏಕದಿನ ಸರಣಿಯಿಂದ ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ.
2025 ಅಕ್ಟೋಬರ್ 25ರಂದು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಡೈವಿಂಗ್ ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಗಂಭೀರ ಗಾಯಕ್ಕೆ ಒಳಗಾದ ಶ್ರೇಯಸ್ ಅಯ್ಯರ್, ಹೊಟ್ಟೆಯ ಭಾಗಕ್ಕೆ (Spleen Laceration) ತೀವ್ರ ಪೆಟ್ಟಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಹಿಂತಿರುಗುವುದಿಲ್ಲ. ಸರಣಿ ಜನವರಿ 11 ರಂದು ಆರಂಭವಾಗುತ್ತದೆ. ಅವರಿಗೆ ಬಿಸಿಸಿಐನಿಂದ ಅನುಮತಿ ಸಿಕ್ಕಿಲ್ಲ. ಅವರು ಬ್ಯಾಟಿಂಗ್ ಮಾಡಬಹುದು ಆದರೆ ಮೈದಾನದಲ್ಲಿರಲು ಇನ್ನೂ ಅವರು ಆರೋಗ್ಯ ಬೆಂಬಲ ನೀಡುತ್ತಿಲ್ಲ. ಈ ಗಾಯದಿಂದಾಗಿ ಅಯ್ಯರ್ ವೇಗವಾಗಿ ತೂಕವನ್ನು (ಸುಮಾರು 6 ಕೆಜಿ) ಕಳೆದುಕೊಂಡಿದ್ದಾರೆ. ಹೀಗಾಗಿ ಫಿಟ್ನೆಸ್ನಲ್ಲಿ ಸಮಸ್ಯೆ ಉಂಟಾಗಿದೆ.
ಪ್ರಸ್ತುತ ಬೆಂಗಳೂರಿನ 'ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್' (CoE) ನಲ್ಲಿದ್ದಾರೆ. ಅವರು ಬ್ಯಾಟಿಂಗ್ ಅಭ್ಯಾಸವನ್ನು ಆರಂಭಿಸಿದ್ದರೂ, ಫೀಲ್ಡಿಂಗ್ ಮಾಡಲು ಅಗತ್ಯವಿರುವ ದೈಹಿಕ ಸಾಮರ್ಥ್ಯವನ್ನು (Muscle Mass) ಇನ್ನೂ ಮರಳಿ ಪಡೆದಿಲ್ಲ. ಬಿಸಿಸಿಐ ವೈದ್ಯಕೀಯ ತಂಡದಿಂದ 'ರಿಟರ್ನ್ ಟು ಪ್ಲೇ' (Return to Play) ಸರ್ಟಿಫಿಕೇಟ್ ಇನ್ನೂ ದೊರೆತಿಲ್ಲ. ಅವರ ಶಕ್ತಿಯ ಮಟ್ಟವು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಬೇಕಾದ ಮಟ್ಟದಲ್ಲಿ ಇಲ್ಲದ ಕಾರಣ, ಅವರು ಜನವರಿ 11 ರಿಂದ ಆರಂಭವಾಗುವ ನ್ಯೂಜಿಲೆಂಡ್ ಸರಣಿಯಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.