Shraddha Kapoor 
ದೇಶ

ರಾಹುಲ್ ಮೋದಿ ಕೈಹಿಡಿಯಲಿದ್ದಾರೆಯೇ ಶ್ರದ್ಧಾ ಕಪೂರ್? ಮದ್ವೆ ಸುದ್ದಿಯ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ಸಿದ್ಧಾಂತ್ ಕಪೂರ್..Shraddha Kapoor

ನವದೆಹಲಿ: ( Shraddha Kapoor ) ಶ್ರದ್ಧಾ ಕಪೂರ್ ಅವರು ಉದಯಪುರದಲ್ಲಿ ರಾಹುಲ್ ಮೋದಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಗಳು ಭಾರೀ ವೈರಲ್ ಆಗಿದ್ದವು. ಇದಕ್ಕೆ ಅವರ ಸಹೋದರ ನೀಡಿದ ಪ್ರತಿಕ್ರಿಯೆ ಈಗ ಎಲ್ಲರ ಗಮನ ಸೆಳೆದಿದೆ.
ಬಾಲಿವುಡ್ ನಟಿ ಶ್ರದ್ಧಾ ಕಪೂರ್ ತಮ್ಮ ದೀರ್ಘಕಾಲದ ಗೆಳೆಯ ರಾಹುಲ್ ಮೋದಿ ಅವರನ್ನು ಮದುವೆ ಆಗಲಿದ್ದಾರೆ. ಉದಯಪುರದಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ ಎನ್ನುವ ಸುದ್ದಿ ಇದೆ. ಶ್ರದ್ಧಾ ಅಥವಾ ಅವರ ಕುಟುಂಬದಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲವಾದರೂ, ಸೋಶಿಯಲ್​​ ಮೀಡಿಯಾದಲ್ಲಿ ಹೀಗೊಂದು ಸುದ್ದಿ ಹಬ್ಬಿದೆ. ಇದಕ್ಕೆ ಶ್ರದ್ಧಾ ಅವರ ಸಹೋದರ ನೀಡಿದ ಪ್ರತಿಕ್ರಿಯೆ ಈಗ ಎಲ್ಲರ ಗಮನ ಸೆಳೆದಿದೆ.
ಶ್ರದ್ಧಾ ಕಪೂರ್ ಅವರು ತಮ್ಮ ದೀರ್ಘಕಾಲದ ಗೆಳೆಯ ರಾಹುಲ್ ಮೋದಿ ಅವರನ್ನು ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ ಎಂದು ಇನ್‌ಸ್ಟಾಗ್ರಾಂನ ಕೆಲವು ಪುಟಗಳಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಸುದ್ದಿಯಿರುವ ಪೋಸ್ಟ್‌ವೊಂದಕ್ಕೆ ಶ್ರದ್ಧಾ ಅವರ ಸಹೋದರ ಸಿದ್ಧಾಂತ್ ಕಪೂರ್ ಕಮೆಂಟ್ ಮಾಡಿದ್ದಾರೆ. ಅವರು ನಗುವ ಮತ್ತು ಆಶ್ಚರ್ಯದ ಎಮೋಜಿಗಳನ್ನು ಬಳಸಿ, "ಇದು ನನಗೂ ಕೂಡ ಸುದ್ದಿಯೇ!" (Yeh toh mere liye bhi News hai) ಎಂದು ಬರೆದಿದ್ದಾರೆ.
ಸಿದ್ಧಾಂತ್ ಅವರ ಈ ತಮಾಷೆಯ ಪ್ರತಿಕ್ರಿಯೆಯು, ಮದುವೆಯ ಸುದ್ದಿಯಲ್ಲಿ ಸದ್ಯಕ್ಕೆ ಯಾವುದೇ ಸತ್ಯಾಂಶವಿಲ್ಲ ಎಂಬದನ್ನು ಸ್ಪಷ್ಟಪಡಿಸಿದಂತಿದೆ. ಮನೆಯವರಿಗೇ ತಿಳಿಯದೆ ಮದುವೆ ಹೇಗೆ ಸಾಧ್ಯ ಎಂದು ಅಭಿಮಾನಿಗಳು ಈ ಬಗ್ಗೆ ತಮಾಷೆ ಮಾಡುತ್ತಿದ್ದಾರೆ.
ರಾಹುಲ್ ಮೋದಿ ಬಾಲಿವುಡ್‌ನ ಬರಹಗಾರರಾಗಿದ್ದು, ಶ್ರದ್ಧಾ ನಟಿಸಿದ 'ತು ಜೂಠಿ ಮೈ ಮಕ್ಕರ್' ಚಿತ್ರಕ್ಕೆ ಕೆಲಸ ಮಾಡಿದ್ದರು. ಕಳೆದ ವರ್ಷ ಶ್ರದ್ಧಾ ಕಪೂರ್ ಅವರು ರಾಹುಲ್ ಜೊತೆಗಿನ ಸೆಲ್ಫಿ ಹಂಚಿಕೊಂಡು, "ನನ್ನ ನಿದ್ರೆಯನ್ನಾದರೂ ವಾಪಸ್ ಕೊಡು" ಎಂದು ಬರೆಯುವ ಮೂಲಕ ತಮ್ಮ ಸಂಬಂಧದ ಬಗ್ಗೆ ಸುಳಿವು ನೀಡಿದ್ದರು.
ಕೆಲವು ದಿನಗಳ ಹಿಂದೆ ಅಭಿಮಾನಿಯೊಬ್ಬರು "ಯಾವಾಗ ಮದುವೆಯಾಗುತ್ತೀರಿ?" ಎಂದು ಕೇಳಿದಾಗ, ಶ್ರದ್ಧಾ ಅವರು "ನಾನು ಮದುವೆ ಆಗೇ ಆಗ್ತೀನಿ" (Main karoongi, vivah karoongi) ಎಂದು ತಮಾಷೆಯಾಗಿ ಉತ್ತರಿಸಿದ್ದರು.
ಸದ್ಯಕ್ಕೆ ಶ್ರದ್ಧಾ ಕಪೂರ್ ಮತ್ತು ರಾಹುಲ್ ಮೋದಿ ಮದುವೆಯಾಗುತ್ತಿದ್ದಾರೆ ಎಂಬುದು ಕೇವಲ ವದಂತಿ. ಅವರ ಸಹೋದರನ ಪ್ರತಿಕ್ರಿಯೆಯು ಇದನ್ನು ಅಧಿಕೃತವಾಗಿ ನಿರಾಕರಿಸಿದಂತಿದೆ.