ಪ್ರಧಾನಿ ಮೋದಿ ಮತ್ತು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಫೋಸಾ 
ದೇಶ

ಜಿ20 ಆಯೋಜನೆ ಕಷ್ಟ ಅಂತ ನೀವು ಹೇಳಬೇಕಿತ್ತು; ಪ್ರಧಾನಿ ಮೋದಿಗೆ ಅಧ್ಯಕ್ಷ ಸಿರಿಲ್ ರಾಮಾಫೋಸಾ ತಮಾಷೆ | PM Modi

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಜೋಹಾನ್ಸ್​ಬರ್ಗ್​ನಲ್ಲಿ ಇದೇ ಮೊದಲ ಬಾರಿಗೆ ಜಿ20 ಶೃಂಗಸಭೆ ನಡೆಯುತ್ತಿದ್ದು, ಭಾನುವಾರ(ನ. 23) ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಫೋಸಾ ಪ್ರಧಾನಿ ಮೋದಿಯವರಿಗೆ(PM Modi) ತಮಾಷೆ ಮಾಡಿದ್ದು, ನೀವು ಜಿ20 ಶೃಂಗಸಭೆಯನ್ನು ಆಯೋಜಿಸುವುದು ಬಹಳ ಕಷ್ಟ ನೀವು ಹೇಳಬೇಕಿತ್ತು. ಬಹುಶಃ ನಾವು ಆಯೋಜಿಸುವ ಬದಲು ಓಡಿಹೋಗುತ್ತಿದ್ದೇವು ಎಂದು ಹಾಸ್ಯಮಯವಾಗಿ ಹೇಳಿದ್ದಾರೆ.
ಭಾರತ-ದಕ್ಷಿಣ ಆಫ್ರಿಕಾ ನಿಯೋಗ ಮಟ್ಟದ ಮಾತುಕತೆಯಲ್ಲಿ ತಮ್ಮ ಆರಂಭಿಕವಾಗಿ ಮಾತನಾಡಿದ ಸಿರಿಲ್ ರಾಮಾಫೋಸಾ, ಜಿ20 ನಾಯಕರ ಶೃಂಗಸಭೆಯನ್ನು ಆಯೋಜಿಸುವಲ್ಲಿ ಭಾರತ ನೀಡಿದ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದರು. ಇದು ತುಂಬಾ ಕಷ್ಟಕರವಾದ ಕೆಲಸ ಎಂದು ನೀವು ನಮಗೆ ಹೇಳಬೇಕಿತ್ತು, ಬಹುಶಃ ನಾವು ಓಡಿಹೋಗುತ್ತಿದ್ದೆವು ಎಂದು ನಗುತ್ತಾ ಹೇಳಿದಾಗ ಪ್ರಧಾನಿ ಮೋದಿ ಸೇರಿ ಸಭೆಯಲ್ಲಿದ್ದವರು ಎಲ್ಲರೂ ನಕ್ಕಿದ್ದಾರೆ ಎನ್ನಲಾಗಿದೆ.
ಜಿ20 ಶೃಂಗಸಭೆಯ ಭಾರತದ ಆತಿಥ್ಯದಿಂದ ನಾವು ಬಹಳಷ್ಟು ಕಲಿತಿದ್ದೇವೆ. ಮತ್ತು ನಿಮ್ಮದು ಅದ್ಭುತವಾಗಿತ್ತು. ನಮ್ಮ ಕಟ್ಟಡ ಚಿಕ್ಕದಾಗಿದೆ ಎಂದು ಹೇಳಿದಾಗ, ಪ್ರಧಾನಿ ಸಣ್ಣದು ಯಾವಾಗಲೂ ಸುಂದರವಾಗಿರುತ್ತದೆ ಎಂದು ಹೇಳಿದ್ದಾರೆ. 
2023 ಸೆಪ್ಟೆಂಬರ್​​ನಲ್ಲಿ ಭಾರತವು 18ನೇ ಜಿ20 ಶೃಂಗಸಭೆಯನ್ನು ಅದ್ಭುತವಾಗಿ ಭಾರತ್ ಮಂಟಪದಲ್ಲಿ ಆಯೋಜಿಸಿತ್ತು. ಶೃಂಗಸಭೆಗಾಗಿಯೇ ಮುಂಚಿತವಾಗಿ ಭಾರತ್ ಮಂಟಪವನ್ನು ಅನಾವರಣಗೊಳಿಸಲಾಯಿತು. ಭಾರತ ಅಧ್ಯಕ್ಷತೆಯ ಸಮಯದಲ್ಲೇ ಆಫ್ರಿಕನ್ ಒಕ್ಕೂಟವು ಜಿ 20ಸದಸ್ಯ ರಾಷ್ಟ್ರವಾಯಿತು (ಏಜೆನ್ಸೀಸ್).