ದೇಶ

ಅಮೆರಿಕದ ಶಾಲೆಯೊಂದರಲ್ಲಿ ಗುಂಡಿನ ದಾಳಿ: ಮೂರು ಮಕ್ಕಳು ಸೇರಿ ನಾಲ್ವರು ದುರ್ಮರಣ: ದುಷ್ಕರ್ಮಿಯೂ ಸಾವು | America

ಅಮೆರಿಕದ ವಾಯುವ್ಯ ರಾಜ್ಯ ಒರೆಗಾನ್​ಗಲ್ಲಿರುವ ಪ್ರಾಥಮಿಕ ಶಾಲೆಯೊಂದರಲ್ಲಿ ಗುರುವಾರ(ಅ. 15) ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಮೂವರು ಮಕ್ಕಳು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಬಳಿಕ ಗುಂಡು ಹಾರಿಸಿದ ದುಷ್ಕರ್ಮಿಯೂ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ವಾಷಿಂಗ್ಟನ್: ಅಮೆರಿಕದ ವಾಯುವ್ಯ ರಾಜ್ಯ ಒರೆಗಾನ್​ಗಲ್ಲಿರುವ ಪ್ರಾಥಮಿಕ ಶಾಲೆಯೊಂದರಲ್ಲಿ ಗುರುವಾರ(ಅ. 15) ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಮೂವರು ಮಕ್ಕಳು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಬಳಿಕ ಗುಂಡು ಹಾರಿಸಿದ ದುಷ್ಕರ್ಮಿಯೂ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಬೆಂಡ್ ಪೊಲೀಸ್ ಇಲಾಖೆಯ ಪೊಲೀಸ್ ಮುಖ್ಯಸ್ಥ ಮೈಕ್ ಕ್ರಾಂಟ್ಜ್, ಘಟನಾ ಸ್ಥಳದಲ್ಲಿ ಒಟ್ಟು ಐವರು ಮೃತಪಟ್ಟಿದ್ದಾರೆ. ಅದರಲ್ಲಿ ಐದು, ಎಂಟು ಮತ್ತು 11 ವರ್ಷ ವಯಸ್ಸಿನ ಮೂವರು ಮಕ್ಕಳು ಮತ್ತು ಒಬ್ಬ ಶಿಕ್ಷಕ ಸೇರಿದ್ದಾರೆ ಎಂದು ತಿಳಿಸಿದ್ದಾರೆ.

ಮಧ್ಯಾಹ್ನ 1:00 ಗಂಟೆಗೆ (2000 ಜಿಎಂಟಿ) ಘಟನೆ ನಡೆದಿದೆ. ತಕ್ಷಣವೇ ಕರೆ ಬಂದ ಕೆಲವೇ ನಿಮಿಷಗಳಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗುಂಡು ಹಾರಿಸಿದ ದುಷ್ಕರ್ಮಿಗೂ ಗುಂಡು ತಗುಲಿದ್ದು, ಆತ ಮೃತಪಟ್ಟಿದ್ದಾನೆ. ನಾವು ಶಂಕಿತನನ್ನು 16 ವರ್ಷದ ಬೆಂಡ್ ನಿವಾಸಿ ಎಂದು ಗುರುತಿಸಿದ್ದೇವೆ.

ಆರೋಪಿ ಶಾಲೆಗೆ ಪ್ರವೇಶಿಸುವುದನ್ನು ನೋಡಿದ ಸ್ಥಳೀಯ ವ್ಯಕ್ತಿಯೊಬ್ಬ ಅವನನ್ನು ಹಿಂಬಾಲಿಸಿ ಗುಂಡು ಹಾರಿಸುವುದನ್ನು ತಡೆದಿದ್ದಾನೆ. ಮತ್ತು ಅವನ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಹೇಳಿದ್ದಾರೆ.

ಸಿಲ್ವರ್ ರೈಲ್ ಎಲಿಮೆಂಟರಿಯಲ್ಲಿ ಈ ಘಟನೆ ನಡೆದಿದೆ. ಅಲ್ಲಿ 400 ರಿಂದ 450 ಮಕ್ಕಳು ಕಲಿಯುತ್ತಿದ್ದು, 40ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಾರೆ ಎನ್ನಲಾಗಿದೆ. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ದಾಳಿಯ ಉದ್ದೇಶ ಏನೆಂಬುದನ್ನು ಕಂಡುಕೊಳ್ಳಲು ತನಿಖೆ ಆರಂಭಿಸಿದ್ದಾರೆ (ಏಜೆನ್ಸೀಸ್).