Railway Food Controversy ಚಿತ್ರ Instagram
- ಭಾರತೀಯ ರೈಲ್ವೆಯಲ್ಲಿ ತಿದಿನ ಕೋಟ್ಯಾಂತರ ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುತ್ತಾರೆ
- ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಬಡಿಸುವ ಆಹಾರದ ಸ್ವಚ್ಛತೆ ಮತ್ತು ನೈರ್ಮಲ್ಯ ಗಂಭೀರ ಕಳವಳಕಾರಿ ವಿಷಯ
- ರೈಲ್ವೆ ಸಮೋಸಾ ಮಾರಾಟಗಾರರ ಹೊಸ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ
- ಇದು ಅನಧೀಕೃತ ಮಾರಾಟವಾದ ಪ್ರಕರಣವೆಂದು ಕಂಡುಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದೆ
ನವದೆಹಲಿ: ಭಾರತೀಯ ರೈಲ್ವೆ ಜಾಲವು ದೇಶದ ಜೀವನಾಡಿಯಾಗಿದೆ. ಪ್ರತಿದಿನ ಕೋಟ್ಯಾಂತರ ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಲು ರೈಲುಗಳನ್ನು ಅವಲಂಬಿಸಿರುತ್ತಾರೆ. ಆದರೆ, ವರ್ಷಗಳಿಂದಲೂ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಬಡಿಸುವ ಆಹಾರದ ಸ್ವಚ್ಛತೆ (Railway Food Controversy) ಮತ್ತು ನೈರ್ಮಲ್ಯ ಗಂಭೀರ ಕಳವಳಕಾರಿ ವಿಷಯವಾಗಿಯೇ ಉಳಿದಿದೆ.
ಕಳಪೆ ನೈರ್ಮಲ್ಯ ಮಾನದಂಡಗಳು, ಅಶುಚಿತ್ವದ ವಾತಾವರಣ ಮತ್ತು ಪ್ರಶ್ನಾರ್ಹ ಬೆಲೆಗಳನ್ನು ತೋರಿಸುವ ಹಲವಾರು ಪ್ರಕರಣಗಳು ಮತ್ತು ವೀಡಿಯೊಗಳು ನಿಯಮಿತವಾಗಿ ಹೊರಹೊಮ್ಮುತ್ತಲೇ ಇವೆ. ಈ ತೊಂದರೆದಾಯಕ ಮಾದರಿಗೆ ಮತ್ತೊಂದು ಆಘಾತಕಾರಿ ಸೇರ್ಪಡೆ ಎಂಬಂತೆ, ಇತ್ತೀಚೆಗೆ ರೈಲ್ವೆ ಸಮೋಸಾ ಮಾರಾಟಗಾರರ ಹೊಸ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದ್ದು, ಪ್ರಯಾಣಿಕರಲ್ಲಿ ಆಕ್ರೋಶ ಮೂಡಿಸಿದೆ.
ಘಟನೆ ಏನು?
ವೈರಲ್ ಆದ ವಿಡಿಯೋದಲ್ಲಿ, ರೈಲಿನ ಶೌಚಾಲಯದ ಸಮೀಪದಲ್ಲಿ ಕುಳಿತ ಆಹಾರ ಮಾರಾಟಗಾರನೊಬ್ಬ ತನ್ನ ಕಾಲುಗಳನ್ನು ಸಮೋಸ ಹೊಂದಿರುವ ತೆರೆದ ಕ್ರೇಟ್ ಮೇಲೆ ಇಟ್ಟುಕೊಂಡು ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿರುವುದನ್ನು ಸೆರೆಹಿಡಿಯಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಐಆರ್ಸಿಟಿಸಿ, ಈ ವಿಷಯವನ್ನು ಕೂಲಂಕುಷವಾಗಿ ತನಿಖೆ ನಡೆಸಲಾಗಿದೆ. ಇದು ಅನಧೀಕೃತ ಮಾರಾಟವಾದ ಪ್ರಕರಣವೆಂದು ಕಂಡುಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಕ್ಷಣ ವರದಿ ಮಾಡಲು ಆನ್‌ಬೋರ್ಡ್ ಸೇವಾ ಪೂರೈಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ಆದಾಗ್ಯೂ, ಆಹಾರ ಸುರಕ್ಷತೆ ಮತ್ತು ಸೇವಾ ಮಾನದಂಡಗಳ ಅನುಸರಣೆ ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರತಿಕ್ರಿಯಿಸಿದೆ.
ಈ ರೀತಿಯಂತಹ ಸನ್ನಿವೇಶಗಳು ಗಣನೀಯ ಅಪಾಯವನ್ನುಂಟು ಮಾಡುತ್ತದೆ. ಆದಾಗ್ಯೂ, ದೃಶ್ಯಾವಳಿಯಲ್ಲಿ ತೋರಿಸಿರುವ ಅನೈರ್ಮಲ್ಯ ಪರಿಸ್ಥಿತಿಗಳು ಆಹಾರವನ್ನು ಸುಲಭವಾಗಿ ಕಲುಷಿತಗೊಳಿಸಬಹುದು. ಜೊತೆಗೆ ಅತಿಸಾರ, ಜಠರಗರುಳಿನ ಕಾಯಿಲೆಗಳು ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಗ್ರಾಹಕರನ್ನು ಒಡ್ಡಬಹುದಾಗಿದೆ.
ಈ ಘಟನೆಯು ರೈಲ್ವೆ ಅಧಿಕಾರಿಗಳು ತಮ್ಮ ಅಡುಗೆ ಸೇವೆಗಳಲ್ಲಿ ಆಹಾರ ಸುರಕ್ಷತಾ ಮಾನದಂಡಗಳನ್ನು ಕಾಯ್ದುಕೊಳ್ಳುವಲ್ಲಿ ಎದುರಿಸುತ್ತಿರುವ ನಿರಂತರ ಸವಾಲುಗಳನ್ನು ಎತ್ತಿ ತೋರಿಸುತ್ತದೆ. ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಆಹಾರವನ್ನು ಖರೀದಿಸುವಾಗ ಮೂಲಭೂತ ನೈರ್ಮಲ್ಯವನ್ನು ನಿರೀಕ್ಷಿಸುತ್ತಾರೆ. ಆದರೂ ಈ ರೀತಿಯಂತಹ ಘಟನೆಗಳು ಆಹಾರ ಸುರಕ್ಷತಾ ನಿಯಮಗಳ ಮೇಲ್ವಿಚಾರಣೆ ಮತ್ತು ಜಾರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ (ಏಜೆನ್ಸೀಸ್).