ಸಾಂದರ್ಭಿಕ ಚಿತ್ರ (AI) 
ದೇಶ

ಚಿನ್ನ, ಹಾಲು, ಸೈಕಲ್​... 1947ರಲ್ಲಿದ್ದ ದಿನಬಳಕೆಯ ವಸ್ತುಗಳ ಬೆಲೆ ಇಂದು ಎಷ್ಟಾಗಿದೆ? ಈ ಹೋಲಿಕೆ ನೋಡಿದ್ರೆ ನಿಜಕ್ಕೂ ಬೆರಗಾಗ್ತೀರಾ | 1947 vs 2026

ಪ್ರಮುಖ ಮುಖ್ಯಾಂಶಗಳು

  • ಆ.15 ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 80 ವರ್ಷಗಳು ಕಳೆಯಲಿವೆ
  • 1947ರಲ್ಲಿ ಬಳಕೆಯಲ್ಲಿದ್ದ ಬಹುಮುಖ್ಯ ವಸ್ತುಗಳ ಬೆಲೆಗಳು, ಪ್ರಸಕ್ತ ವರ್ಷದಲ್ಲಿ ಎಷ್ಟಾಗಿದೆ?
  • ದೇಶದ ಆರ್ಥಿಕತೆಯ ಬದಲಾವಣೆ ಹೇಗಿದೆ ಎಂಬುದರ ಸಂಪೂರ್ಣ ಚಿತ್ರಣ ಇಲ್ಲಿದೆ ನೋಡಿ
1947 vs 2026: ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 80 ವರ್ಷಗಳು ಕಳೆಯಲಿವೆ. ಇಡೀ ದೇಶವೇ ಈ ಸಂಭ್ರಮಕ್ಕೆ ಕಾದು ಕುಳಿತಿದ್ದು, ಕೆಂಪುಕೋಟೆಯಿಂದ ಹಿಡಿದು ರಾಷ್ಟ್ರ ರಾಜಧಾನಿಯ ನಗರಗಳು ಅದ್ಧೂರಿಯಾಗಿ ಅಲಂಕಾರಗೊಳ್ಳುತ್ತಿದೆ. ಇದೇ ಸಮಯದಲ್ಲಿ, 1947ರಲ್ಲಿ ಬಳಕೆಯಲ್ಲಿದ್ದ ಬಹುಮುಖ್ಯ ವಸ್ತುಗಳ ಬೆಲೆಗಳು, ಪ್ರಸಕ್ತ ವರ್ಷದಲ್ಲಿ ಎಷ್ಟಾಗಿದೆ? ಅಂದಿಗೂ ಇಂದಿಗೂ ವಸ್ತುಗಳ ದರದಲ್ಲಿ ಎಷ್ಟು ವ್ಯತ್ಯಾಸವಿದೆ? ದೇಶದ ಆರ್ಥಿಕತೆಯ ಬದಲಾವಣೆ ಹೇಗಿದೆ ಎಂಬುದರ ಸಂಪೂರ್ಣ ಚಿತ್ರಣವನ್ನು ಒಂದು ನಿಮಿಷ ನಿಮ್ಮ ಕಣ್ಣ ಮುಂದೆ ತರುವ ಪ್ರಯತ್ನ ಇಲ್ಲಿದೆ ನೋಡಿ.
ಅಂದು ಚಲಾವಣೆಯಲ್ಲಿದುದು ರೂಪಾಯಿ ಮಾತ್ರವಲ್ಲ. ಆಣೆ, ಪೈಸೆಗಳ ಯುಗ. ಜನರ ತಿಂಗಳ ಸಂಬಳ ಹತ್ತಾರು ರೂಪಾಯಿಗಳಿಗಷ್ಟೇ ಸೀಮಿತವಾಗಿತ್ತು. ದಿನ ಬಳಕೆಯ ವಸ್ತುಗಳ ಬೆಲೆಗಳಂತು ಕೇವಲ ಕೆಲವೇ ಆಣೆ ಅಥವಾ ಪೈಸೆಗಳಲ್ಲಿರುತ್ತಿತ್ತು. ಸ್ವಾತಂತ್ರ್ಯ ಸಿಕ್ಕ 1947ರ ಆ ದಿನಗಳಲ್ಲಿ ನಿತ್ಯದ ಅಗತ್ಯ ವಸ್ತುಗಳ ಬೆಲೆ ಎಷ್ಟಿತ್ತು? ಮತ್ತು ಇಂದು ಆ ದರಗಳು ಎಲ್ಲಿಗೆ ಬಂದು ನಿಂತಿವೆ? 1947 ಮತ್ತು 2026ರ ಬೆಲೆಗಳ ಒಂದು ರೋಚಕ ಹೋಲಿಕೆ ಹೀಗಿದೆ ಗಮನಿಸಿ.

ನಿತ್ಯಬಳಕೆಯ ವಸ್ತುಗಳ ಬೆಲೆಗಳ ಹೋಲಿಕೆ

1. ಚಿನ್ನ (10 ಗ್ರಾಂ 24 ಕ್ಯಾರೆಟ್)

1947: 88.62 ರೂ.
2026: 1,55,300* ರೂ.

2. ಹಾಲು (ಲೀಟರ್‌ಗೆ)

1947: 0.12 ಪೈಸೆ
2026: 66ರಿಂದ 68 ರೂ. (ವಿವಿಧ ಬಗೆಯ ಪ್ಯಾಕೆಟ್ ಮೇಲೆ ಆಧಾರಿತ​)

3. ಅಕ್ಕಿ (ಕೆಜಿ)

1947: 0.12ರಿಂದ 0.16 ಪೈಸೆ
2026: 50ರಿಂದ 60 ರೂ. (ಸಾಮಾನ್ಯ ವಿಧ)

4. ಗೋಧಿ (ಕ್ವಿಂಟಾಲ್)

1947: 20ರಿಂದ 24 ರೂ.
2026: 2,800ರಿಂದ 3,200 ರೂ.

5. ಸಕ್ಕರೆ (ಕೆಜಿಗೆ)

1947: 0.40ರಿಂದ 0.45 ಪೈಸೆ
2026: 44ರಿಂದ 48 ರೂ.

6. ಪೆಟ್ರೋಲ್ (ಲೀಟರ್‌ಗೆ)

1947: 0.27 ಪೈಸೆ
2026: 94ರಿಂದ 102 ರೂ. (ಆಯಾ ರಾಜ್ಯ ತೆರಿಗೆಗಳ ಪ್ರಕಾರ ಬದಲಾವಣೆ)

7. ರೈಲು ದರ (ಪ್ರಥಮ ದರ್ಜೆ: ದೆಹಲಿ-ಕಲ್ಕತ್ತಾ )

1947: 123 ರೂ.
2026: 4,800ರಿಂದ 5,200 ರೂ. (ಎಸಿ ಫಸ್ಟ್​ ಕ್ಲಾಸ್​)

8. ವಿಮಾನ ದರ (ಏಕ ಪ್ರಯಾಣಿಕ ಟಿಕೆಟ್: ದೆಹಲಿ-ಮುಂಬೈ)

1947: 140 ರೂ.
2026: 5,500ರಿಂದ 8,000 ರೂ.

9.ಸೈಕಲ್​

1947: 20ರಿಂದ 25 ರೂ.
2026: 4,500ರಿಂದ 6,000 ರೂ.
ಕೇಂದ್ರ ಸಾಂಖ್ಯಿಕ ಸಂಸ್ಥೆಯ (CSO) ಆರಂಭಿಕ ವರದಿಗಳ ಪ್ರಕಾರ, 1947ರಲ್ಲಿ ಸರ್ಕಾರಿ ನೌಕರ ಅಥವಾ ಸಾಮಾನ್ಯ ಗುಮಾಸ್ತನ ಸರಾಸರಿ ತಿಂಗಳ ಸಂಬಳವೇ 30ರಿಂದ 50 ರೂ. ಮಾತ್ರ ಎಂದು ಹೇಳಲಾಗಿದೆ. ಅಲ್ಲಿಗೆ, ಅಂದು 20 ರೂ. ಕೊಟ್ಟು ಒಂದು ಸೈಕಲ್ ಖರೀದಿಸಬೇಕೆಂದರೆ ಒಬ್ಬ ಸಾಮಾನ್ಯ ಉದ್ಯೋಗಿ, ತನ್ನ ಅರ್ಧ ತಿಂಗಳ ಶ್ರಮದ ಆದಾಯವನ್ನು ಮೀಸಲಿಡಬೇಕಿತ್ತು. ಅದೇ, ಪ್ರಸಕ್ತ ಕಾಲಘಟ್ಟದಲ್ಲಿ ಒಂದು ಸೈಕಲ್ ಅಥವಾ ಇತರ ವಸ್ತುಗಳ ಬೆಲೆ ಕೋಟಿಯನ್ನೇ ಮೀರಿ ಹೋಗಿದೆ. ಜನರ ಆದಾಯಕ್ಕೆ ತಕ್ಕಂತೆ, ಖರೀದಿ ಸಾಮರ್ಥ್ಯದಲ್ಲೂ ಭಾರಿ ಬದಲಾವಣೆಗಳಾಗಿವೆ. ನಿಜಕ್ಕೂ ಅಂದಿನ ಬೆಲೆಯನ್ನು ಮತ್ತು ಇಂದಿನ ಬೆಲೆಯನ್ನು ಹೋಲಿಕೆ ಮಾಡಿ ನೋಡಿದಾಗ ನಿಜಕ್ಕೂ ಮೈಜುಮ್​ ಎನ್ನುವುದರಲ್ಲಿ ಯಾವುದೇ ಅಚ್ಚರಿಯಿಲ್ಲ,(ಏಜೆನ್ಸೀಸ್).