ಸಿಎಂ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ಪಿ.ಟಿ.ಸೆಲ್ವಕುಮಾರ್ ಡಿಎಂಕೆ ಸೇರ್ಪಡೆಯಾಗಿರುವುದು 
ದೇಶ

ದಳಪತಿ ವಿಜಯ್​ಗೆ ಶಾಕ್; ಆಡಳಿತರೂಢ ಡಿಎಂಕೆ ಸೇರಿದ ಮಾಜಿ ಮ್ಯಾನೇಜರ್ ಪಿ.ಟಿ ಸೆಲ್ವಕುಮಾರ್ | Thalapathy Vijay

ಚೆನ್ನೈ: ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಕಟ್ಟಿ, ಮುಂದಿನ ಚುನಾವಣೆಗೆ ಸಜ್ಜಾಗಿರುವ ಜನಪ್ರಿಯ ಸಿನಿಮಾ ನಟ ದಳಪತಿ ವಿಜಯ್​​​ಗೆ(Thalapathy Vijay) ಆಡಳಿರೂಢ ಡಿಎಂಕೆ ಶಾಕ್ ನೀಡಿದ್ದು, ಅವರಿಗೆ ಸುಮಾರು 20 ವರ್ಷಗಳ ಕಾಲ ಮ್ಯಾನೇಜರ್ ಆಗಿದ್ದ ಮತ್ತು 'ಕಲಪ್ಪೈ ಮಕ್ಕಳ್ ಇಯಕ್ಕಂ' ಅಧ್ಯಕ್ಷ ಪಿ.ಟಿ. ಸೆಲ್ವಕುಮಾರ್ ಡಿಎಂಕೆ ಪಕ್ಷ ಸೇರಿದ್ದಾರೆ.
ಸ್ಥಳೀಯ ತೇನಂಪೇಟೆಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಗುರುವಾರ(ಡಿ. 11) ಪಕ್ಷದ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಸಮ್ಮುಖದಲ್ಲಿ ಪಿ.ಟಿ.ಸೆಲ್ವಕುಮಾರ್ ಡಿಎಂಕೆ ಸೇರಿದ್ದಾರೆ. ಇದೇ ವೇಳೆ ಪಕ್ಷದ ಪ್ರಧಾನ ಕಾರ್ಯದರ್ಶಿ ದುರೈಮುರುಗನ್, ಅಧಿಕೃತ ವಕ್ತಾರ ಆರ್.ಎಸ್. ಭಾರತಿ, ಸಚಿವ ಪಿ.ಕೆ. ಶೇಖರ್‌ಬಾಬು, ಆಲಂಕುಳಂ ಶಾಸಕ ಮನೋಜ್ ಪಾಂಡಿನ್ ಮತ್ತು ಇತರಿದ್ದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಪಿ.ಟಿ.ಸೆಲ್ವಕುಮಾರ್, ವಿಜಯ್ ಮಕ್ಕಳ್ ಮಂದ್ರಂನಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಈಗ ಪಕ್ಷಕ್ಕೆ ಹೊಸ ನಾಯಕರು ಸೇರ್ಪಡೆಯಾಗುತ್ತಿರುವುದರಿಂದ, ಆರಂಭದಿಂದಲೂ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ಸರಿಯಾದ ಮನ್ನಣೆ ಸಿಕ್ಕಿಲ್ಲ. ವಿಜಯ್ ಬಹಳ ಜನಪ್ರಿಯರಾಗಿದ್ದಾರೆ, ಆದರೆ ಅವರ ಸುತ್ತಲಿನವರೊಂದಿಗೆ ಪಕ್ಷವು ಬೇರೆ ದಿಕ್ಕಿನತ್ತ ಸಾಗುವ ಸಾಧ್ಯತೆಗಳಿವೆ. ಚಂದ್ರ ಕೆಲವು ಸಮಯದರೆಗೆ ಮಾತ್ರ ಬೆಳಗುತ್ತಾನೆ. ಆದರೆ ಸೂರ್ಯ ನಿರಂತರವಾಗಿ ಬೆಳಗುತ್ತಾನೆ. ಅದಕ್ಕಾಗಿ ನಾನು ಸೂರ್ಯನ ಸಾಲಿಗೆ ಸೇರಿದ್ದೇನೆ ಎಂದು ಹೇಳಿದ್ದಾರೆ (ಏಜೆನ್ಸೀಸ್).