ಭಕ್ತರಿಂದ 10 ರೂಪಾಯಿ ಪಡೆದು ಶಿವನ ಆರ್ಶೀವಾದ ನೀಡುತ್ತಿರುವ ಬಾಲಕ 
ದೇಶ

ಶಿವರಾತ್ರಿ ಸ್ಪೆಷಲ್: 10 ರೂಪಾಯಿ ದಕ್ಷಿಣೆ ಪಡೆದು ಭೋಲೆನಾಥನ ದರ್ಶನ ಮಾಡಿಸುತ್ತಿರುವ ಬಾಲ ಪುರೋಹಿತ! ವಿಡಿಯೋ ವೈರಲ್​ | Shivaratri

ಪ್ರಮುಖ ಮುಖ್ಯಾಂಶಗಳು

  • ಇವತ್ತು ಭಾರತದಾದ್ಯಂತ ಶಿವರಾತ್ರಿ ಸಂಭ್ರಮ
  • ಶಿವಲಿಂಗ ಪೂಜೆ ಮಾಡುತ್ತಿರುಬವ ವಾರಾಣಾಸಿಯ ಬಾಲ ಪುರೋಹಿತನ ವಿಡಿಯೋ ವೈರಲ್​
  • ಭಕ್ತರಿಂದ 10 ರೂಪಾಯಿ ಪಡೆದು ಶಿವನ ಆರ್ಶೀವಾದ ನೀಡುತ್ತಿರುವ ಬಾಲಕ
ವಾರಣಾಸಿ: ಇವತ್ತು ಭಾರತದಾದ್ಯಂತ ಶಿವರಾತ್ರಿ (Shivaratri) ಯನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ಶಂಕರನ ಕೃಪೆಗೆ ಪಾತ್ರರಾಗಲು ಭಕ್ತರು ಉಪವಾಸ, ಜಾಗರಣೆ, ಪೂಜೆ, ಹೋಮ-ಹವನ ಮೊದಲಾದವುಗಳ ಹಮ್ಮಿಕೊಳ್ಳುತ್ತಿದ್ದಾರೆ.
ಆದರೆ ವಾರಾಣಾಸಿಯ ಈ ಒಬ್ಬ ಬಾಲ ಭಕ್ತ ಶಿವಲಿಂಗವೊಂದನ್ನು ಪ್ರತಿಷ್ಠಾಪಿಸಿ ಭಕ್ತರ ಮತ್ತು ಪರಮಾತ್ಮನ ನಡುವಿನ ಸೇತುವೆಯಂತೆ ಕೆಲಸ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ. ದೇವಾಲಯದ ಆವರಣದ ಹೊರಗೆ ಕುಳಿತಿರುವ ಈ ಸುಮಾರು 6-7 ವರ್ಷದ ಬಾಲಕ, ಭಕ್ತರಿಗೆ ಶಿವನ ಆಶೀರ್ವಾದವನ್ನು ತಲುಪಿಸುವ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದಾನೆ.

ವಿಡಿಯೋಲೇನಿದೆ?

ವೈರಲ್ ಆಗಿರುವ ವಿಡಿಯೋದಲ್ಲಿ, ಈ ಮುದ್ದಾದ ಹುಡುಗ ಪಕ್ಕದಲ್ಲೇ ಇರುವ ಶಿವಲಿಂಗವನ್ನು ಮೊದಲು ಕೈಯಿಂದ ಮುಟ್ಟಿ, ನಂತರ ಭಕ್ತರು ನೀಡುವ 10 ರೂಪಾಯಿ ನೋಟನ್ನು ಪಡೆದು, ಅವರ ತಲೆಯ ಮೇಲೆ ಕೈಯಿಟ್ಟು ಆಶೀರ್ವಾದ ಮಾಡುತ್ತಾನೆ. ಅಲ್ಲಿಗೆ ಮಗುವಿನ ಮೂಲಕ ಶಿವನ ಆರ್ಶೀವಾದ ದೊರೆಯಿತೆಂಬ ತೃಪ್ತಭಾವವನ್ನು ನಾವು ಭಕ್ತರ ಮುಖದಲ್ಲಿ ನೋಡಬಹುದಾಗಿದೆ.
ವಿಶೇಷವೆಂದರೆ, ಶಿವನ ದರ್ಶನಕ್ಕೆ ಬರುತ್ತಿರುವ ಮಹಿಳೆಯರು ಕೂಡ ಬಹಳ ಭಕ್ತಿಯಿಂದ ಈ ಪುಟ್ಟ ಮಗುವಿನ ಮುಂದೆ ತಲೆಬಾಗುತ್ತಿದ್ದರು. ಮಗು ಕೂಡ ದೊಡ್ಡ ಪುರೋಹಿತನಂತೆ ಗಂಭೀರವಾಗಿ ಆಶೀರ್ವಾದ ನೀಡುತ್ತಿದ್ದುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಪ್ರಾಮಾಣಿಕತೆಗೆ ಫುಲ್ ಮಾರ್ಕ್ಸ್!

ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯು ಒಂದು ವಿಶೇಷ ವಿಷಯವನ್ನು ಗಮನಿಸಿದ್ದಾರೆ. ಒಬ್ಬ ಮಹಿಳೆ ಮಗುವಿಗೆ 20 ರೂಪಾಯಿ ನೋಟನ್ನು ನೀಡಿದಾಗ, ಆ ಹುಡುಗ ತಕ್ಷಣವೇ ಅವರಿಗೆ 10 ರೂಪಾಯಿ ವಾಪಸ್ ನೀಡಿದ್ದಾನೆ! ಅಂದರೆ ಆತನ ಫಿಕ್ಸ್ಡ್ ರೇಟ್​ ಆಗಿ 10 ರೂಪಾಯಿಯನ್ನು ನಿಗದಿ ಪಡಿಸಿದ್ದಾನೆ.
ನೋಡಿ, ಇವನು 20 ರೂಪಾಯಿ ತಗೊಂಡು 10 ರೂಪಾಯಿ ವಾಪಸ್ ಕೊಟ್ಟಿದ್ದಾನೆ. ಇವನ ಆಶೀರ್ವಾದಕ್ಕೆ ಕೇವಲ 10 ರೂಪಾಯಿ ಮಾತ್ರ ಫೀಸ್! ಎಂದು ವಿಡಿಯೋ ಮಾಡುವ ವ್ಯಕ್ತಿ ತಮಾಷೆಯಾಗಿ ಹೇಳಿದ್ದಾರೆ. ಮಗುವಿನ ಈ ಪ್ರಾಮಾಣಿಕತೆ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ನೆಟ್ಟಿಗರ ಕಮೆಂಟ್ಸ್ ಹಾವಳಿ

ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಎಷ್ಟೋ ವಂಚಕ ಪುರೋಹಿತರಿಗಿಂತ ಈ ಮಗುವೇ ವಾಸಿ, ಇವನೇ ನಿಜವಾದ ಪುರೋಹಿತ ಎಂದು ಒಬ್ಬರು ಬರೆದಿದ್ದರೆ, ದೇವರು ಹಸಿದವರಿಗೆ ಯಾವುದಾದರೊಂದು ದಾರಿ ತೋರಿಸೇ ತೋರಿಸುತ್ತಾನೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಇನ್ನೊಬ್ಬರು ಕಮೆಂಟ್​ ಮಾಡಿದ್ದಾರೆ.
ಬಡತನ ಮತ್ತು ಕಷ್ಟದ ನಡುವೆಯೂ ಹಣ ಸಂಪಾದಿಸಲು ಈ ಮಗು ಕಂಡುಕೊಂಡ ದಾರಿ ಆಧ್ಯಾತ್ಮಿಕ ಮತ್ತು ಹಾಸ್ಯದ ಸಮ್ಮಿಶ್ರಣದಂತಿದೆ. ಆ ಪುಟ್ಟ ಕೈಗಳ ಆಶೀರ್ವಾದ ಪಡೆಯಲು ಭಕ್ತರಿಗಾಗಲಿ ಅಥವಾ 10 ರೂಪಾಯಿ ನೀಡಲು ಮಹಿಳೆಯರಿಗಾಗಲಿ ಯಾವುದೇ ಸಂಕೋಚವಿರಲಿಲ್ಲ. ಬದಲಿಗೆ ಎಲ್ಲರ ಮುಖದಲ್ಲೂ ಒಂದು ರೀತಿಯ ಸಂತೋಷವಿರುವುದನ್ನು ನಾವು ನೋಡಬಹುದಾಗಿದೆ,(ಏಜನ್ಸೀಸ್​).