Shilpa Shetty 
ದೇಶ

ಶಿಲ್ಪಾ ಶೆಟ್ಟಿ ರೆಸ್ಟೋರೆಂಟ್‌ನಲ್ಲಿ ಉಚಿತ ಟಿಫಿನ್! ಅರ್ಧ ಕಿಲೋಮೀಟರ್​​ವರೆಗೆ ಸರತಿ ಸಾಲಿನಲ್ಲಿ ನಿಂತ ಜನ..Shilpa Shetty

ಮುಂಬೈ: ( Shilpa Shetty ) ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ 'ಅಮ್ಮಕೈ' ( ammakai) ರೆಸ್ಟೋರೆಂಟ್ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಉಚಿತ ಉಪಹಾರ ನೀಡುವುದಾಗಿ ಘೋಷಿಸಿತು. ಇದರಿಂದಾಗಿ ರೆಸ್ಟೋರೆಂಟ್‌ನಲ್ಲಿ ದೊಡ್ಡ ಜನಸಂದಣಿ ಸೃಷ್ಟಿಯಾಗಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಬಂಪರ್​ ಆಫರ್​​ ನೀಡಿದ ಶಿಲ್ಪಾ ಶೆಟ್ಟಿ

ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ 'ಅಮ್ಮಕೈ' ರೆಸ್ಟೋರೆಂಟ್ ಬಂಪರ್ ಆಫರ್ ನೀಡಿದೆ. ಬೆಳಿಗ್ಗೆ 9.30 ರಿಂದ 11.30 ರವರೆಗೆ ಎಷ್ಟೇ ಜನರು ಬಂದರೂ ಅವರಿಗೆ ಉಚಿತ ಉಪಹಾರ ನೀಡಲಾಗುವುದು ಎಂದು ಘೋಷಿಸಿದೆ.
ಈ ಸುದ್ದಿ ಬೆನ್ನಲ್ಲೇ ಬೆಳಿಗ್ಗೆ 7 ಗಂಟೆಯಿಂದಲೇ ಜನರು ರೆಸ್ಟೋರೆಂಟ್‌ ಮುಂದೆ ಬಂದು ಸಾಲಿನಲ್ಲಿ ನಿಂತಿದ್ದಾರೆ. ಬೆಳಿಗ್ಗೆ 9.30 ರಿಂದ 11.30 ರ ನಡುವೆ ಕೆಲವೇ ಜನರಿಗೆ ಉಚಿತ ಉಪಹಾರ ಸಿಕ್ಕಿತು. ಬೆಳಿಗ್ಗೆ 11.30 ರ ನಂತರ ಬಂದವರನ್ನು ಹೋಟೆಲ್ ಸಿಬ್ಬಂದಿ ವಾಪಸ್ ಕಳುಹಿಸಿದ್ದಾರೆ.
ಪ್ರಸ್ತುತ, ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ, ಉಚಿತ ಉಪಹಾರಕ್ಕಾಗಿ ಸರದಿಯಲ್ಲಿ ನಿಂತಿರುವ ಜನರು ಬಡವರಿಗಿಂತ ಹೆಚ್ಚು ಶ್ರೀಮಂತರೆ ಇದ್ದರು ಎನ್ನಲಾಗಿದೆ.
ಈ ವೀಡಿಯೊಗೆ ಪ್ರತಿಕ್ರಿಯಿಸುತ್ತಿರುವ ನೆಟಿಜನ್‌ಗಳು, ಉಚಿತ ಟಿಫಿನ್‌ಗಾಗಿ ಅವರು ಏಕೆ ಸರತಿ ಸಾಲಿನಲ್ಲಿ ನಿಲ್ಲಬೇಕು?" "ಸರದಿಯಲ್ಲಿ ನಿಂತಿರುವವರಲ್ಲಿ ಒಬ್ಬರೂ ಬಡವರಂತೆ ಕಾಣುವುದಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.