Trainee IPS Officer Suicide Attempt
- ಸಹ ತರಬೇತಿ ನಿರತ ಮಹಿಳಾ ಐಪಿಎಸ್ ಅಧಿಕಾರಿಗೆ ಲೈಗಿಕ ಕಿರುಕುಳ ಆರೋಪ, ಉದಯ್ ಕೃಷ್ಣಾತಾತ್ಕಾಲಿಕ ಅಮಾನತು
- ಸುಳ್ಳು ಆರೋಪ ಎಂದು ಆತ್ಮಹತ್ಯೆಗೆ ಯತ್ನಿಸಿದ ತರಬೇತಿ ನಿರತ IPS ಅಧಿಕಾರಿಉದಯ್ ಕೃಷ್ಣಾರೆಡ್ಡಿ
- ಆಕೆಗೆ ಮದುವೆಯಾದ ನಂತರವೂ ನನ್ನ ಕೋಣೆಗೆ ಪದೇ ಪದೆ ಬರುತ್ತಿದ್ದಳು ಎಂದು ಮಾಹಿತಿ ಬಿಚ್ಚಿಟ್ಟ ಉದಯ್ ಕೃಷ್ಣಾ
ಹೈದರಾಬಾದ್: ಇಲ್ಲಿನ ಸರ್ದಾರ್ ವಲ್ಲಭಬಾಯಿ ಪಟೇಲ್ ರಾಷ್ಟ್ರೀಯ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ಸಹ ತರಬೇತಿ ನಿರತ ಮಹಿಳಾ ಅಧಿಕಾರಿಯೊಬ್ಬರಿಗೆ ಕಿರುಕುಳ ಕೊಟ್ಟ ಆರೋಪ ಹೊತ್ತಿರುವ ಐಪಿಎಸ್ ಅಧಿಕಾರಿ ಉದಯ್ ಕೃಷ್ಣಾ ರೆಡ್ಡಿಯವರು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊತ್ತಲ್ಲೇ ಮಹಿಳಾ ದೂರುದಾರರ ವಿರುದ್ಧ ಶಾಕಿಂಗ್ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
ಆತ್ಮಹತ್ಯೆಗೆ ಯತ್ನ
ಕರ್ನಾಟಕ ಮೂಲದ ತರಬೇತಿ ನಿರತ ಮಹಿಳಾ ಐಪಿಎಸ್ ಅಧಿಕಾರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದ ನಂತರ ಅವರನ್ನು ಅಮಾನತುಗೊಳಿಸಲಾಗಿತ್ತು. ಇದರಿಂದ ನೊಂದ ಅವರು, ಹೈದರಾಬಾದ್ನಲ್ಲಿ ಭಾನುವಾರ ಸಂಜೆ ಹೈದರಾಬಾದ್‌ನಲ್ಲಿರುವ ಸ್ನೇಹಿತನ ಮನೆಯಲ್ಲಿ ವಿಷ ಸೇವಿಸಿದ್ದಾರೆ. ಕೂಡಲೇ ಅವರನ್ನು ಎಸ್ಆರ್ ನಗರದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಹೇಳಲಾಗಿದೆ.
ಉದಯ್ ಡೆತ್ನೋಟ್ನಲ್ಲಿ ಏನಿತ್ತು?
ಆತ್ಮಹತ್ಯೆಗೆ ಯತ್ನಿಸುವ ಮುನ್ನ ಬರೆದಿಟ್ಟಿದ್ದಾರೆನ್ನಲಾದ ಪತ್ರದಲ್ಲಿ, ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಉದಯ ಕೃಷ್ಣ ನಿರಾಕರಿಸಿದ್ದಾರೆ. ಆಕೆಯೇ ಸ್ವತಃ ನನ್ನನ್ನು ಚುಂಬಿಸಿದ್ದಳು. ಆದರೆ ಈಗ ನನ್ನ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳ ದೂರು ನೀಡಿ ನನ್ನ ವೃತ್ತಿಜೀವನ ಮತ್ತು ಗೌರವವನ್ನು ಹಾಳುಮಾಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ
ಪ್ರಕರಣ ತನಿಖೆಯ ನಡೆಸಿದ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಆತಂರಿಕಾ ತನಿಖಾ ಸಮಿತಿ ಸಿಟಿಟಿವಿ ಹಾಗೂ ಸಾಕ್ಷ್ಯಗಳನ್ನು ಪರಿಶೀಲನೆ ನಡೆಸಿದೆ. ಮಹಿಳೆ ಮಾಡಿದ್ದ ಆರೋಪದಲ್ಲಿ ಸತ್ಯಾಂಶವಿರುವುದು ಸ್ಪಷ್ಟವಾಗಿರುವ ಹಿನ್ನೆಲೆ ತಾತ್ಕಾಲಿಕವಾಗಿ ಉದಯ್ ಕೃಷ್ಣಾ ಅವರನ್ನು ಅಮಾನತುಗೊಳಿಸಿತ್ತು.
ಉದಯ್ ಕೃಷ್ಣ ಹೇಳಿದ್ದೇನು?
ಜೂನ್ 2025 ರಿಂದ ತಾನು ಮತ್ತು ದೂರುದಾರರಾದ ತರಬೇತಿ ನಿರತ ಮಹಿಳಾ ಐಪಿಎಸ್ ಅಧಿಕಾರಿ ಸಮ್ಮತಿ ಮೇರೆಗೆ ಪ್ರೇಮ ಸಂಬಂಧದಲ್ಲಿ ಇದ್ದೆವು. ಮದುವೆಯ ನಂತರವೂ ಈ ಬಾಂಧವ್ಯ ಶಾರೀರಿಕವಾಗಿ ಮತ್ತು ಭಾವನಾತ್ಮಕವಾಗಿ ಮುಂದುವರಿದಿತ್ತು
ಮದುವೆಯ ನಂತರವೂ ಪದೇ ಪದೇ ಆಕೆ ತನ್ನ ಕೊಠಡಿಗೆ ಬರುತ್ತಿದ್ದರು. ಶಾರೀರಿಕವಾಗಿ ಹತ್ತಿರವಾಗಲು ತಾನೇ ಮುಂದಾಗುತ್ತಿದ್ದಳು ಮಹಿಳೆಯು ಜುಲೈ 9, 2026 ರಂದು ತನ್ನ ಕೊಠಡಿಗೆ ಬಂದು ತನಗೆ "ತೀವ್ರವಾದ ಲೈಂಗಿಕ ಆಸೆ ಉಂಟಾಗಿದೆ" ಎಂದು ಹೇಳಿದ್ದಳು. ಮುಂದುವರಿದು, "ಆಕೆ ನನ್ನ ಯಾವುದೇ ಸಮ್ಮತಿಯಿಲ್ಲದೆ ನನ್ನನ್ನು ಚುಂಬಿಸಿದಳು ಮತ್ತು ಅಪ್ಪಿಕೊಂಡಳು. ಈಗ ಎಲ್ಲ ವಿಚಾರವನ್ನು ಮ್ಯಾನಿಪುಲೇಟ್ ಮಾಡುತ್ತಿದ್ದಾರೆ. ತಾವು ಜೊತೆಗಿದ್ದ ಕೆಲವು ಕ್ಷಣಗಳನ್ನು ರೆಕಾರ್ಡ್ ಮಾಡಿಕೊಂಡಿರುವುದಾಗಿ ಹೇಳಿಕೊಂಡ ಆತ, ಸಾಕ್ಷ್ಯಕ್ಕಾಗಿ ಆ ಪೈಕಿ ಒಂದು ವೀಡಿಯೊವನ್ನು ಮಹಿಳೆಯ ಪತಿಗೆ ಕಳುಹಿಸಿರುವುದಾಗಿ ತಿಳಿಸಿದ್ದಾನೆ.
ದೂರುದಾರೆ ಆರೋಪವೇನು?
ಉದಯ್ ಅವರು ನನಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಅಶ್ಲೀಲವಾಗಿ ಮೆಸೇಜ್ ಮಾಡುತ್ತಾರೆ. ಅಲ್ಲದೇ ನನ್ನನ್ನು ಕೋಣೆಯಲ್ಲಿ ಬಂಧಿಯಾಗಿಸಿದ್ದರು. ಕೂದಲಿಡಿದು ಎಳೆದಾಡಿದ್ದರು. ನನಗೆ ತಿಳಿಯದೆ ನನ್ನ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡು ಪತಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಅವರ ದೂರಿನ ಮೇರೆಗೆ ಆಟ್ಟಾಪುರ ಪೊಲೀಸರು ಇತ್ತೀಚೆಗಷ್ಟೇ ಉದಯ ಕೃಷ್ಣ ರೆಡ್ಡಿ ವಿರುದ್ಧ ಲೈಂಗಿಕ ಕಿರುಕುಳ, ಹಲ್ಲೆ ಮತ್ತು ಬೆದರಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಮಾದರಿಯಾಗಿದ್ದ ಉದಯ್ ಕೃಷ್ಣ
ಆಂಧ್ರಪ್ರದೇಶದ ಅನೇಕ ಯುವಕರಿಗೆ ಉದಯ್ ಕೃಷ್ಣಾ ರೆಡ್ಡಿ ಅವರ ಜೀವನ ಪ್ರೇರಣೆಯಾಗಿತ್ತು. ಅನಾಥರಾಗಿದ್ದ ಅರವನ್ನು ಸಾಕಿದ್ದು ಅವರ ಅಜ್ಜಿ. ಕೂಲಿ ಹಣದಲ್ಲಿ ಅವರನ್ನು ವಿದ್ಯಾವಂತರನ್ನಾಗಿ ಮಾಡಿದ್ದರು. 2013ರಲ್ಲಿ ಕಾನ್ಸ್ಟೇಬಲ್ ಆಗಿದ್ದ ಅವರು ರಾಜೀನಾಮೆ ನೀಡಿ UPSCಗೆ ಸಿದ್ಧರಾದರು.
4 ಬಾರಿ ಪರೀಕ್ಷೆಯಲ್ಲಿ ಸೋತರು ಐದನೇ ಬಾರಿ ದೇಶಕ್ಕೆ 360ನೇ ರ್ಯಾಂಕ್ ಬಂದು ಐಪಿಎಸ್ ಅಧಿಕಾರಿಯಾದರು. ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆ ಭಾನುವಾರ ಅವರ ವಾಟ್ಸಾಪ್ನಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಬರೆದುಕೊಂಡು ಪೋಸ್ಟ್ ಹಂಚಿಕೊಂಡಿದ್ದರು, (ಏಜೆನ್ಸೀಸ್).