15 ತಿಂಗಳ ನನ್ನ ಮೊಮ್ಮಗಳು ಪ್ರತಿದಿನ ಪ್ರಧಾನಿ ಮೋದಿ ಜಪ ಮಾಡ್ತಾಳೆ: ಸುನೀಲ್ ಶೆಟ್ಟಿ
- 15 ತಿಂಗಳ ನನ್ನ ಮೊಮ್ಮಗಳು ಪ್ರತಿದಿನ ಪ್ರಧಾನಿ ಮೋದಿ ಜಪ ಮಾಡ್ತಾಳೆ: ಸುನೀಲ್ ಶೆಟ್ಟಿ
- ಕೆ.ಎಲ್. ರಾಹುಲ್ ಮತ್ತು ಆಥಿಯಾ ಶೆಟ್ಟಿ ಮಗಳಾದ ಎವಾರಾ
- ಮೊಮ್ಮಗಳ ಬಗ್ಗೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಬಿಚ್ಚಿಟ್ಟ ವಿಸ್ಮಯಕಾರಿ ಸಂಗತಿ ಇಲ್ಲಿದೆ
ಮುಂಬೈ: ಕರ್ನಾಟಕ ಮೂಲದ, ಬಾಲಿವುಡ್ನ ಖ್ಯಾತ ನಟ ಸುನೀಲ್ ಶೆಟ್ಟಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಮೊಮ್ಮಗಳ (Suniel Shetty on his Granddaughter) ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ ಆಗುತ್ತಿದೆ.
ನಮ್ಮ ಮೊಮ್ಮಗಳು ಮೋದಿ ಜಪ ಮಾಡುತ್ತಾಳೆ!
ಸುನೀಲ್ ಶೆಟ್ಟಿ ಮಗಳಾದ ಆಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್. ರಾಹುಲ್ರ ಮಗಳಾದ ಎವಾರಾ (Evaarah) ಪ್ರತಿದಿನ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ಕೈ ಮುಗಿದು ಸಿಹಿಯನ್ನು ಅರ್ಪಿಸುತ್ತಳೆ. ಈಗ ಅವಳಿಗೆ ಕೇವಲ 15 ತಿಂಗಳು, ಆದರೆ ಅವಳು ಯಾವಾಗಲೂ ಪ್ರಧಾನಿಗಳ ಜಪ ಮಾಡುತ್ತಾಳೆ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ.
ನಾನು ಯಾವುದೇ ರಾಜಕೀಯ ಪಕ್ಷದ ಬಗ್ಗೆ ಮಾತನಾಡುತ್ತಿಲ್ಲ. ಆದರೆ ನನಗೆ ವೈಯಕ್ತಿಕವಾಗಿ ನರೇಂದ್ರ ಮೋದಿ ಬಹಳ ಇಷ್ಟವಾಗುವ ವ್ಯಕ್ತಿ, ಅವರ ನಾಯಕತ್ವ ನನಗೆ ಇಷ್ಟವಾಗುತ್ತದೆ. ನಾನು ನನ್ನ ದೇಶವನ್ನು ಎಷ್ಟು ಇಷ್ಟಪಡುತ್ತೆನೋ ಅಷ್ಟೇ ನನ್ನ ನಾಯಕನನ್ನು ಇಷ್ಟಪಡುತ್ತೆನೆ ಎಂದು ಅವರು ಹೇಳಿದ್ದಾರೆ.
ನನ್ನ ಮೊಮ್ಮಗಳಿಗೆ ಈಗ 15 ತಿಂಗಳು ಅವಳು ಪ್ರತಿದಿನ, ಸಾಯಿ ಬಾಬಾ ಅವರ ಪುಸ್ತಕವನ್ನು ಓದುತ್ತಾಳೆ, ಅದರಲ್ಲಿ ಪ್ರಧಾನಿ ಮೋದಿ ಅವರ ಭಾವಚಿತ್ರವನ್ನು ಇಟ್ಟಿದ್ದಾಳೆ ಎಂದಿದ್ದಾರೆ. ಅವಳಿಗೆ ಇದನ್ನು ಮಾಡಲು ನಾನಾಗಲೀ, ನಮ್ಮ ಮನೆಯವರಾಗಲೀ ಯಾರು ಹೇಳಿಕೊಟ್ಟಿಲ್ಲ, ಇದು ಏನೋ ಒಂದು ವಿಸ್ಮಯದಂತೆ ನನಗೆ ಕಾಣಿಸುತ್ತದೆ ಎಂದು ಹೇಳಿದ್ದಾರೆ, (ಏಜನ್ಸೀಸ್).