ShashiTharoor rescued from a stuck lift
- ಕೇರಳದ ಖಾಸಗಿ ಹೋಟೆಲ್ನ ಲಿಫ್ಟ್‌ನಲ್ಲಿ ಅರ್ಧಗಂಟೆ ಸಿಕ್ಕಿ ಹಾಕಿಕೊಂಡಿದ್ದ ಸಂಸದ ಶಶಿ ತರೂರ್
- ಲಿಫ್ಟ್ನಿಂದ ತಮ್ಮನ್ನು ಹೊರತಂದ ರಕ್ಷಣಾ ಸಿಬ್ಬಂದಿಯನ್ನು ಶ್ಲಾಘಿಸಿದ ಸಂಸದ ಶಶಿ ತರೂರ್
- ಅರ್ಧಗಂಟೆ ಲಿಫ್ಟ್‌ನಲ್ಲಿ ಸಿಕ್ಕಿ ಹಾಕಿಕೊಳ್ಳೋದು ದೊಡ್ಡ ಸಮಸ್ಯೆಯೇನಲ್ಲ ಎಂದು ಎಕ್ಸ್ನಲ್ಲಿ ಸಂಸದ ಪೋಸ್ಟ್
ShashiTharoor rescued from a stuck lift : ಈ ತಂತ್ರಜ್ಞಾನದ ಯುಗದಲ್ಲಿ ಯಾವಾಗ ಏನಾಗುತ್ತೋ ಎನ್ನುವ ಅರಿವೇ ಇರೋದಿಲ್ಲ. ದಿಢೀರನೇ ಲೈಟ್ ಕಂಬಗಳು ಬ್ಲಾಸ್ ಆದರೆ, ಮತ್ತೊಂದ ಕಡೆ ವಿದ್ಯುತ್ ಕಡಿತಗೊಂಡು ಲಿಫ್ಟ್ಗಳು ನಿಂತು ಹೋಗಿ ಜನಸಾಮಾನ್ಯರು ಸಮಸ್ಯೆಯನ್ನು ಎದುರಿಸೋದು ಇದ್ದೇ ಇದೆ. ಇದೇ ತೊಡಕಿಗೆ ಸಂಸದರೊಬ್ಬರು ಸಿಲುಕಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ
ಹೌದು, ಕೇರಳದ ತಿರುವನಂತಪುರಂನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರ ಸಲುವಾಗಿ ಸಂಸದ ಶಶಿ ತರೂರ್ ಅವರು ಖಾಸಗಿ ಹೋಟೆಲ್ವೊಂದಕ್ಕೆ ತೆರಳಿದ್ದರು. ನಿನ್ನೆ ಸಂಜೆ 7:30ರಿಂದ ಅರ್ಧಗಂಟೆ ಲಿಫ್ಟ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಅಗ್ನಿ ಶಾಮಕ ಸಿಬ್ಬಂದಿ ಅವರನ್ನು ಅಲ್ಲಿಂದ ಹೊರ ತಂದಿರುವ ದೃಶ್ಯಾವಳಿಗಳು ಶುಕ್ರವಾರ ಸಂಜೆಯಿಂದ ಭಾರಿ ಸದ್ದು ಮಾಡುತ್ತಿವೆ.
ಏನಾಗಿತ್ತು?
ತಿರುವನಂತಪುರಂ ಖಾಸಗಿ ಹೋಟೆಲ್ನಲ್ಲಿ ರೋಟರಿ ಕ್ಲಬ್ನ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವಿತ್ತು.ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಶಶಿ ತರೂರ್ ಅವರು ಖಾಸಗಿ ಹೋಟೆಲ್ನ ಲಿಫ್ಟ್ ಏರಿದ್ದರು. ತಾಂತ್ರಿಕ ಸಮಸ್ಯೆ ಕಾರಣದಿಂದಾಗಿ ಲಿಫ್ಟ್ ಅರ್ಧಕ್ಕೆ ನಿಂತಿತ್ತು. ಅವರು ಒಳಗೆ ಸಿಲುಕಿಕೊಂಡರು. ಈ ವಿಡಿಯೋಗಳು ಹಾಗೂ ಹೊರಗೆ ಬಂದ ನಂತರ ಸಂಸದರ ಮುಗುಳ್ನಕ್ಕ ರೀತಿಯನ್ನು ತಮ್ಮದೇ ವಾಕ್ಯಕ್ಕೆ ರೂಪಕಗಳನ್ನು ಕೊಟ್ಟು ನೆಟ್ಟಿಗರು ಬಣ್ಣಿಸುತ್ತಿದ್ದಾರೆ.
ಈ ಅವಘಡವನ್ನು ಅರಿತ ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ಸೇವೆಯ ತಂಡವು ತರೂರ್ ಸೇರಿದಂತೆ ಲಿಫ್ಟ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಜನರನ್ನು ರಕ್ಷಿಸಿದರು. ಲಿಫ್ಟ್ನಿಂದ ಹೊರ ಬರುತ್ತಲೇ ಮುಗುಳ್ನಕ್ಕ ಶಶಿ ತರೂರ್ ಅವರು ಅಗ್ನಿ ಶಾಮಕ ತಂಡಕ್ಕೆ ಧನ್ಯವಾದ ಹೇಳಿದರು. ಜೊತೆಗೆ ಅವರು ಹೊರ ಬರಲು ಸಹಕರಿಸಿದ ಎಲ್ಲರಿಗೂ ಶ್ಲಾಘಿಸಿರುವುದು ವಿಡಿಯೋದಲ್ಲಿ ಇದೆ.
ಎಕ್ಸ್ನಲ್ಲಿ ಪೋಸ್ಟ್
ಶುಕ್ರವಾರ ಸಂಜೆ ನಡೆದ ಘಟನೆ ಬಗ್ಗೆ ಶಶಿ ತರೂರ್ ಅವರು ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವುದು ಹೀಗೆ, ಲಿಫ್ಟ್‌ನಲ್ಲಿ ಅರ್ಧ ಗಂಟೆ ಇರುವುದು ದೊಡ್ಡ ಸಮಸ್ಯೆಯಾಗಿರಲಿಲ್ಲ. ನನ್ನ ಮುಂದಿನ ಎರಡು ಅಪಾಯಿಂಟ್‌ಮೆಂಟ್‌ಗಳಿಗೆ ಸಮಸ್ಯೆಯಾಯ್ತು. ನಾವು ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡ ಬಗ್ಗೆ ಕರೆ ಮಾಡಿ ತಿಳಿಸುತ್ತಲೇ ರಕ್ಷಣಾ ತಂಡ ಬಂದು ತಮ್ಮ ಕೆಲಸ ಆರಂಭಿಸಿತು. ಕೇರಳ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಯ ವೇಗ, ದಕ್ಷತೆ ಮತ್ತು ಸಾಮರ್ಥ್ಯಕ್ಕಾಗಿ ನಾನು ನಿಮಗೆ ಅಪಾರ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ, (ಏಜೆನ್ಸೀಸ್).