Shashi Tharoor On Cockroach Janta Party  
ದೇಶ

Cockroach Janta Party 'ಎಕ್ಸ್' ಖಾತೆ ಬ್ಯಾನ್; 'ಇದು ಪ್ರಜಾಪ್ರಭುತ್ವ ವಿರೋಧಿ, ಮೂರ್ಖತನದ ಕೆಲಸ' ಎಂದ ಶಶಿ ತರೂರ್

ಪ್ರಮುಖ ಮುಖ್ಯಾಂಶಗಳು

  • ಯುವಜನರ ಕೋಪ, ಹತಾಶೆ ಹೊರ ಹಾಕಲು ವೇದಿಕೆ ಮಾಡಿಕೊಡಿ
  • ಕಾಕ್ರೋಚ್​ ಜನತಾ ಪಾರ್ಟಿ ಎಕ್ಸ್​ ಅಕೌಂಟ್​ ಡಿಲೀಟ್​ ಬೆನ್ನಲ್ಲೇ ಶಶಿ ತರೂರ್​ ಅಸಮಾಧಾನ
  • ವಿರೋಧ ಪಕ್ಷಗಳು ಬಳಸಿಕೊಳ್ಳಬೇಕಾದ ಒಂದು ದೊಡ್ಡ ಅವಕಾಶ ಎಂದ ಶಶಿ ತರೂರ್​
Shashi Tharoor On Cockroach Janta Party: ಸೋಶಿಯಲ್​​ ಮೀಡಿಯಾದಲ್ಲಿ ಇತ್ತೀಚೆಗೆ ಸದ್ದು ಮಾಡುತ್ತಿರುವ ಕಾಕ್ರೋಚ್​ ಜನತಾ ಪಕ್ಷ ಕೇವಲ ತಮಾಷೆಯಲ್ಲ, ಬದಲಿಗೆ ಇದು ಸರ್ಕಾರದ ವಿರುದ್ಧ ಯುವಜನತೆಯಲ್ಲಿ ಹೊಗೆಯಾಡುತ್ತಿರುವ ಅಸಮಾಧಾನ ಹಾಗೂ ನಿರಾಶೆಯ ಸಂಕೇತ. ವಿರೋಧ ಪಕ್ಷಗಳು ಈ ಪರಿಸ್ಥಿತಿಯನ್ನು ಒಂದು ದೊಡ್ಡ ಅವಕಾಶವಾಗಿ ಬಳಸಿಕೊಳ್ಳಬೇಕು. ಬದಲಾಗಿ ನಿರ್ಬಂಧಿಸುವುದಲ್ಲ ಎಂದು ಸಂಸದ ಶಶಿ ತರೂರ್​ ಕೇಂದ್ರ ಸರ್ಕಾರಕ್ಕೆ ಸಲಹೆಯನ್ನು ಕೊಟ್ಟರು.
ಭಾರತದಲ್ಲಿ ಯುವ ಸಮೂಹ ಸೋಶಿಯಲ್​​ ಮೀಡಿಯಾವನ್ನು ಬಳಕೆ ಮಾಡಿಕೊಂಡು, ಜಾತ್ಯತೀಯ, ಸಮಾಜವಾದಿ ಹಾಗೂ ಪ್ರಜಾಪ್ರಭುತ್ವ, ಸೋಮಾರಿ, ಭಷ್ಟಾಚಾರ ಎನ್ನುವ ಧ್ಯೇಯವಾಕ್ಯದೊಂದಿಗೆ Cockroach Janta Party ಐದು ದಿನದ ಹಿಂದೆ ಆರಂಭವಾಯ್ತು. ಈ ಪಕ್ಷ ಸೋಶಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಸೃಷ್ಟಿಸುತ್ತಿದ್ದಂತೆ
ಭಾರತದಲ್ಲಿ ಅದರ ಎಕ್ಸ್​ ಖಾತೆಯನ್ನು ನಿಷೇಧಿಸಲಾಗಿತ್ತು. ಈ ಬಗ್ಗೆ ಕಾಂಗ್ರೆಸ್​ ನಾಯಕ, ಸಂಸದ ಶಶಿ ತರೂರ್​​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Cockroach Janta Party (CJP) ಯ ಯಶಸ್ಸು ಕೇವಲತಮಾಷೆಯಲ್ಲ, ಸರ್ಕಾರದ ವಿರುದ್ಧ ಯುವಜನತೆಯಲ್ಲಿ ಹೊಗೆಯಾಡುತ್ತಿರುವ ಅಸಮಾಧಾನ ಮತ್ತು ತೀವ್ರ ನಿರಾಶೆಯ ಸಂಕೇತವಾಗಿದೆ. ಅಷ್ಟೇ ಅಲ್ಲದೆ, ವಿರೋಧ ಪಕ್ಷಗಳು ಈ ಪರಿಸ್ಥಿತಿಯನ್ನು ಒಂದು ದೊಡ್ಡ ಅವಕಾಶವಾಗಿ ಬಳಸಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ಹಾಗೂ ಸಂಸದ ಶಶಿ ತರೂರ್ ಕಿವಿಮಾತು ಹೇಳಿದ್ದಾರೆ.

ಕಾಕ್ರೋಚ್​ ಜನತಾ ಪಾರ್ಟಿಯ ಬೆಳವಣಿಗೆ ನನಗೆ ನಂಬಲಾಗುತ್ತಿಲ್ಲ. ನಿಜಕ್ಕೂ ಇದೊಂದು ಕುತೂಹಲಕಾರಿ ವಿಚಾರ. ಐದು ದಿನಗಳ ಹಿಂದೆಯಿಂದ ಶುರುವಾದ ಇದು. ಈ 15 ಮಿಲಿಯನ್​ನಷ್ಟು ಅನುಯಾಯಿಗಳನ್ನು ಪಡೆದುಕೊಂಡಿದೆ.ಎಕ್ಸ್​ನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಅನುಯಾಯಿ ಹೊಂದಿತ್ತು. ಆದರೆ, ಈ ಮಧ್ಯೆ ಅವರ ಖಾತೆ ನಿರ್ಬಂಧಿಸಿರುವುದು ಅತ್ಯಂತ ಮೂರ್ಖತನದ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕವಾದ ನಿರ್ಧಾರ.

ಹತಾಶೆ ಹೊರಹಾಕಲು ಬಿಡಿ

ಯುವಕರು ತಮ್ಮ ನಿರಾಶೆ, ಕೋಪ ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ಒಂದು ವೇದಿಕೆಯ ಅಗತ್ಯವಿರುತ್ತದೆ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ, ಹಾಸ್ಯ, ವ್ಯಂಗ್ಯ ಮತ್ತು ಆಕ್ರೋಶವನ್ನು ಹೊರಹಾಕಲು ಮುಕ್ತ ಅವಕಾಶವಿರಬೇಕು. ಅದನ್ನು ಮುಚ್ಚಿಹಾಕುವ ಬದಲು ಮುಕ್ತವಾಗಿ ಕಾರ್ಯನಿರ್ವಹಿಸಲು ಬಿಡಬೇಕು ಎಂದು ಹೇಳಿದರು.

ಆಂದೋಲನವನ್ನು ಬಳಕೆ ಮಾಡಿಕೊಳ್ಳಿ

ಈ ಆಂದೋಲನದ ಭವಿಷ್ಯ ಏನಾಗಬಹುದು ಎಂದು ನನಗೆ ಗೊತ್ತಿಲ್ಲ. ಆದರೆ, ಯುವಜನರು ಈ ಶಕ್ತಿಯನ್ನು ಮುಖ್ಯವಾಹಿನಿಯ ರಾಜಕೀಯಕ್ಕೆ ತರಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಮುಂಬರುವ ಬದಲಾವಣೆಯ ಧ್ವನಿಯಾಗಲು ತಮ್ಮ ಮತದ ಮೂಲಕ ಇದನ್ನು ವ್ಯಕ್ತಪಡಿಸುತ್ತಾರೆ. ಇದು ವಿರೋಧ ಪಕ್ಷಗಳು ತಕ್ಷಣವೇ ಬಳಸಿಕೊಳ್ಳಬೇಕಾದ ಒಂದು ದೊಡ್ಡ ಅವಕಾಶವಾಗಿದೆ ಎಂದು ಸಂಸದ ಶಶಿ ತರೂರ್​ ಅವರು ಕೇಂದ್ರ ಸರ್ಕಾರಕ್ಕೆ ಸಲಹೆ ಕೊಟ್ಟರು.

ಏನಿದು ಕಾಕ್ರೋಚ್​ ಜನತಾ ಪಕ್ಷ?

ಮೇ.18ರಂದು ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್​ ಅವರು, ನಿರುದ್ಯೋಗಿ ಯುವಕರು ಜಿರಳೆಗಳಿದ್ದಂತೆ ಎಂದರು.

ಪದಾಂಕಿತ ಹಿರಿಯ ವಕೀಲ ಸ್ಥಾನ ಪಡೆದುಕೊಳ್ಳಲು ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸಿಜೆಐ, ಸ್ಥಾನಕ್ಕಾಗಿ ಆ ವಕೀಲ ಅನುಸರಿದ್ದ ಮಾರ್ಗದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆ ನಂತರ ಹೇಳಿದ್ದು ಹೀಗೆ, ಕೆಲವರಿಗೆ ಯಾವುದೇ ಉದ್ಯೋಗ ಸಿಗೋದಿಲ್ಲ. ವೃತ್ತಿಯಲ್ಲಿ ಯಾವ ಸ್ಥಾನ ದೊರಕುವುದಿಲ್ಲ. ಅಂಥವರು ತಾವೇ ಸೋಶಿಯಲ್​ ಮೀಡಿಯಾ, ಮಾಹಿತಿ ಹಕ್ಕು ಕಾಯ್ದೆ, ಇತರೆ ಪಕ್ಷದ ಕಾರ್ಯಕರ್ತರಾಗಿ ಸಮಾಜದಲ್ಲಿರುವವರ ಮೇಲೆ ದಾಳಿ ಮಾಡುತ್ತಾರೆ.

ಸಿಜೆಐ ಅವರ ಈ ಮಾತಿಗೆ ವಿರೋಧವಾಗಿ ನಾವು ನಿರುದ್ಯೋಗಿಗಳು, ಮೊಬೈಲ್ ಬಳಕೆಯಲ್ಲಿ ತೊಡಗಿರುತ್ತೇವೆ, ಸೋಮಾರಿಗಳು ಎಂದು ಕಾಕ್ರೋಚ್​ ಜನತಾ ಪಾರ್ಟಿ ಮತ್ತು ವೆಬ್​ಸೈಟ್​ ಅನ್ನು ತೆರೆದು ಸಂಚಲನ ಸೃಷ್ಟಿಸಿದೆ. ವರದಿಗಳ ಪ್ರಕಾರ ಇದನ್ನು ಅಭಿಜೀತ್​ ದಿಪ್ಕೆ ಎಂಬುವರು ಆರಂಭಿಸಿದರು ಎನ್ನಲಾಗುತ್ತಿದೆ, (ಏಜೆನ್ಸೀಸ್).