Shashi Tharoor | ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಸಂಸದ ಶಶಿ ತರೂರ್
ದೆಹಲಿ: ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಕಾರ್ಯವೈಖರಿಯನ್ನು ಸಂಸದ ಶಶಿ ತರೂರ್ ಶ್ಲಾಘಿಸಿದ್ದು, ಭಾರತದಲ್ಲಿ ಕ್ರಿಕೆಟ್ ಕೋಚ್ ಹುದ್ದೆಯು ಎಷ್ಟು ಸವಾಲಿನದ್ದು ಎಂಬುದನ್ನು ಎತ್ತಿ ತೋರಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಂಸದ ಶಶಿ ತರೂರ್, ನಾಗ್ಪುರದಲ್ಲಿ, ನನ್ನ ಹಳೆಯ ಸ್ನೇಹಿತ ಗೌತಮ್ ಗಂಭೀರ್ ಅವರೊಂದಿಗೆ ಒಳ್ಳೆಯ ಮತ್ತು ಮುಕ್ತ ಚರ್ಚೆಯನ್ನು ಆನಂದಿಸಿದೆ, ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಪಾತ್ರವನ್ನು ದೇಶದ ಪ್ರಧಾನ ಮಂತ್ರಿಯ ನಂತರದ ಅತ್ಯಂತ ಕಠಿಣ ಕೆಲಸ ಎಂದು ಕರೆದಿದ್ದಾರೆ. ಈ ಹೋಲಿಕೆಯ ಹಿಂದೆ ಗಾಢವಾದ ಅರ್ಥವಿದೆ.
ಭಾರತದಲ್ಲಿ ಕ್ರಿಕೆಟ್ ಕೇವಲ ಒಂದು ಕ್ರೀಡೆ ಮಾತ್ರವಲ್ಲ, ಅದೊಂದು ಭಾವನೆ. ಕೋಟ್ಯಂತರ ಜನರು ಈ ಆಟವನ್ನು ಆರಾಧಿಸುತ್ತಾರೆ. ಪ್ರತಿಯೊಂದು ಸೋಲು-ಗೆಲುವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ. ತಂಡವು ಗೆದ್ದಾಗ ಕೋಚ್‌ಗೆ ಸಿಗುವ ಪ್ರಶಂಸೆಗಿಂತ, ಸೋತಾಗ ಎದುರಿಸಬೇಕಾದ ಟೀಕೆಗಳು ಮತ್ತು ವಿಶ್ಲೇಷಣೆಗಳು ವಿಪರೀತವಾಗಿರುತ್ತದೆ. ಗಂಭೀರ್ ಅಂತಹ ಕೆಲಸವನ್ನು ಅತ್ಯಂತ ಧೈರ್ಯದಿಂದ ನಿರ್ವಹಿಸುತ್ತಿದ್ದಾರೆ ಎಂದು ತರೂರ್ ಬರೆದುಕೊಂಡಿದ್ದಾರೆ.
ಗೌತಮ್ ಗಂಭೀರ್ ರಿಯಾಕ್ಷನ್
ಸಂಸದ ತರೂರ್ ಮೆಚ್ಚುಗೆಯ ಮಾತುಗಳಿಗೆ ಗೌತಮ್ ಗಂಭೀರ್ ಅತ್ಯಂತ ವಿನಮ್ರವಾಗಿ ಕೃತಜ್ಞತೆ ಸಲ್ಲಿಸಿದ್ದು, ತರೂರ್ ಮಾತುಗಳು ತಮಗೆ ಸ್ಫೂರ್ತಿ ನೀಡಿವೆ ಎಂದು ಹೇಳಿದ್ದಾರೆ. ತಂಡದ ಮುಖ್ಯಸ್ಥರಾಗಿ ತಮ್ಮ ಮೇಲಿರುವ ಒತ್ತಡವನ್ನು ಅರಿತುಕೊಂಡಿರುವುದಾಗಿ ತಿಳಿಸಿದ್ದು, ಅದನ್ನು ಸವಾಲಾಗಿ ಸ್ವೀಕರಿಸಿದ್ದಾರೆ.
ಧೂಳು ಇಳಿದಾಗ, ತರಬೇತುದಾರರ ಅಪರಿಮಿತ ಅಧಿಕಾರದ ಬಗೆಗಿನ ಸತ್ಯ ಮತ್ತು ತರ್ಕ ಸ್ಪಷ್ಟವಾಗುತ್ತದೆ. ಅಲ್ಲಿಯವರೆಗೆ ನನ್ನದೇ ಆದ ಅತ್ಯುತ್ತಮ ಆಟಗಾರರ ವಿರುದ್ಧ ಸ್ಪರ್ಧಿಸುವುದನ್ನು ನಾನು ಆನಂದಿಸುತ್ತೇನೆ!" ಎಂದು ಗಂಭೀರ್ ಟ್ವಿಟರ್‌ನಲ್ಲಿ ಬರೆದಿದ್ದಾರೆ(ಏಜೆನ್ಸೀಸ್).