ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್​ ಪವಾರ್​ 
ದೇಶ

ಶರದ್​ ಪವಾರ್​ ಆರೋಗ್ಯದಲ್ಲಿ ವ್ಯತ್ಯಯ: ಪುಣೆಯ ರುಬಿ ಹಾಲ್​ ಆಸ್ಪತ್ರೆಗೆ ದಾಖಲಾದ ಮಾಜಿ ಸಿಎಂ | Sharad Pawar

ಪ್ರಮುಖ ಮುಖ್ಯಾಂಶಗಳು

  • ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್​ ಪವಾರ್​ ಆರೋಗ್ಯದಲ್ಲಿ ವ್ಯತ್ಯಯ
  • ಪುಣೆಯ ರುಬಿ ಹಾಲ್​ ಆಸ್ಪತ್ರೆಗೆ ದಾಖಲು
  • ಕೆಮ್ಮು, ಶೀತ ಮತ್ತು ಉಸಿರಾಟದಲ್ಲಿ ತೊಂದರೆಯಾದ ಹಿನ್ನಲೆ ಆಸ್ಪತ್ರೆಗೆ ದಾಖಲಾದ ಶರದ್​ ಪವಾರ್​
ಮಹಾರಾಷ್ಟ್ರ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್​ ಪವಾರ್​ (Sharad Pawar) ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
85 ವರ್ಷದ ಶರದ್​ ಪವಾರ್​ ಕೆಮ್ಮು, ಶೀತ ಮತ್ತು ಉಸಿರಾಟದಲ್ಲಿ ವೈಪರಿತ್ಯವಾದ ಹಿನ್ನಲೆ ಭಾರಾಮತಿಯಿಂದ ಪುಣೆಯ ರುಬಿ ಹಾಲ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶರದ್​ ಪವಾರ್​ ಜೊತೆ ಹೆಂಡತಿ ಪ್ರತಿಭಾ ಪವಾರ್​ ಮತ್ತು ಮಗಳು ಸುಪ್ರೀಯಾ ಸುಳೆ ಇದ್ದಾರೆ ಎಂದು ಹೇಳಲಾಗುತ್ತಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ರುಬಿ ಹಾಲ್​ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪರ್ವೇಜ್ ಗ್ರಾಂಟ್, ಆಸ್ಪತ್ರೆಗೆ ಆಗಮಿಸಿದ ಶರದ್​ ಪವಾರ್​ ಅವರನ್ನು ನಮ್ಮ ವೈದ್ಯರ ತಂಡ ಪರೀಕ್ಷಿಸುತ್ತಿದ್ದು, ಅವರ ಆರೋಗ್ಯಸ ಸ್ಥಿತಿಯ ಅನುಗುಣವಾಗಿ ಚಿಕಿತ್ಸೆಯನ್ನು ಮುಂದುವರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಶರದ್​ ಪವಾರ್​ ಅವರು 1990 ರ ಸಮಯದಲ್ಲಿ ಬಾಯಿಯ ಕ್ಯಾನ್ಸರ್​ಗೆ ತುತ್ತಾಗಿ, ಅಮೆರಿಕ ಮತ್ತು ಭಾರತದ ಆಸ್ಪತ್ರೆಗಳಲ್ಲಿ ಹಲವಾರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೂ ಶರದ್​ ಪವಾರ್​ ಇತ್ತೀಚಿನ ತನಕ ಸಾರ್ವಜನಿಕ ಸಭೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದರು.

ಶರದ್​ ಪವಾರ್​ ರಾಜಕೀಯ ಇತಿಹಾಸ

ಡಿಸೆಂಬರ್​ 12, 2026 ರಂದು ಜನಿಸಿದ ಶರದ್​ ಪವಾರ್​ ಮಹಾರಾಷ್ಟ್ರದ ರಾಜಕೀಯದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಇವರು ಸದ್ಯ ರಾಜ್ಯಸಭೆಯ ಸಂಸದರಾಗಿ ಕಾರ್ಯನಿರ್ವಗಿಸುತ್ತಿದ್ದು, 1967 ರಿಂದ 1991 ರ ವರೆಗೆ ಇವರು ರಾಜ್ಯ ರಾಜಕೀಯದಲ್ಲಿ ಮೇಲ್ಪಂತಿಯ ನಾಯಕರಾಗಿದ್ದರು.
ಶರದ್​ ಪವಾರ್​ 1978-80, 1988-90, 1990-91 ಮತ್ತು  1993-95 ರಲ್ಲಿ ಅಂದರೆ ನಾಲ್ಕು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ್ದಾರೆ.  ಮಹಾರಾಷ್ಟ್ರ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಮತ್ತು ಭಾರತ ಸರ್ಕಾರದ ರಕ್ಷಣಾ ಸಚಿವರಾಗಿ ಸಹ ಶರದ್​ ಪವಾರ್​ ಕಾರ್ಯನಿರ್ವಹಿಸಿದ್ದಾರೆ,(ಏಜನ್ಸೀಸ್).