ಶಕುನ್ ಗ್ರೂಪ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಲ್ಲಭ್ ಮಹೇಶ್ವರಿ
- ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಕಾರು ಪಲ್ಟಿ
- ಕಾರಿನಲ್ಲಿದ್ದ ಜೈಪುರದ ಉದ್ಯಮಿ ವಲ್ಲಭ್ ಮಹೇಶ್ವರಿ ಸ್ಥಳದಲ್ಲೇ ಮೃತ
- ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜು
ನವದೆಹಲಿ: ನಿನ್ನೆ (ಮಾ.08) ರಾಜಸ್ಥಾನದ ಅಲ್ವಾರ್ ಬಳಿ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ತಮ್ಮ ಬಿಎಂಡಬ್ಲ್ಯೂ ಕಾರು ಕಂಟ್ರೋಲ್ ತಪ್ಪಿ ಪಲ್ಟಿಯಾದ ಪರಿಣಾಮ ಶಕುನ್ ಗ್ರೂಪ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ (MD) ವಲ್ಲಭ್ ಮಹೇಶ್ವರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವರದಿಗಳ ಪ್ರಕಾರ, ಮಹೇಶ್ವರಿ ಜೈಪುರದಿಂದ ಮಥುರಾಗೆ ತಮ್ಮ ಐಷಾರಾಮಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಹೆದ್ದಾರಿಯಲ್ಲಿ ಕಾರು ಚಲಾಯಿಸುತ್ತಿದ್ದ ಮಹೇಶ್ವರಿ ಅವರ ಡ್ರೈವರ್, ಅಪಘಾತದಲ್ಲಿ ಕಾರಿನ ಹಿಂಬದಿ ಚಕ್ರದಡಿಯಲ್ಲಿ ಸಿಲುಕಿದ್ದರು ಎನ್ನಲಾಗಿದೆ. ರಸ್ತೆಬದಿಯ ಬ್ಯಾರಿಕೇಡ್‌ಗಳನ್ನು ತಪ್ಪಿಸಿದ ಚಾಲಕ, ಕಲ್ವರ್ಟ್‌ನ ಗೋಡೆಗೆ ಡಿಕ್ಕಿ ಹೊಡೆದ ತಕ್ಷಣವೇ ರಭಸವಾಗಿ ಪಲ್ಟಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಅಪಘಾತ ಸಂಭವಿಸಿದ ತಕ್ಷಣವೇ ಜೈಪುರ ಮೂಲದ ಉದ್ಯಮಿ ಮಹೇಶ್ವರಿ ಮತ್ತು ಅವರ ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಇಬ್ಬರನ್ನು ಪರಿಶೀಲಿಸಿದ ವೈದ್ಯರು, ಮಹೇಶ್ವರಿ ಅದಾಗಲೇ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದರು. ಪವಾಡದಂತೆ ಚಾಲಕ ಮಾತ್ರ ಯಾವುದೇ ಗಾಯಗಳಿಲ್ಲದೆ ಸಾವಿನಿಂದ ಪಾರಾಗಿದ್ದಾನೆ. ಪ್ರಸ್ತುತ, ಉದ್ಯಮಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಕಾರಿನ ವೇಗ ಅಥವಾ ತಾಂತ್ರಿಕ ದೋಷ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆ ಸೂಚಿಸಿದ್ದೇ ಆದರೂ, ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ,(ಏಜೆನ್ಸೀಸ್).