ಸಾಂದರ್ಭಿಕ ಚಿತ್ರ 
ದೇಶ

ಮುಖ್ಯೋಪಾದ್ಯಯನಿಂದ ಲೈಂಗಿಕ ಕಿರುಕುಳ; ಶಾಲೆಯ ಆವರಣದಲ್ಲೇ ಆತ್ಮಹತ್ಯೆ ಮಾಡಿಕೊಂಡ 9ನೇ ತರಗತಿ ಬಾಲಕಿ | Suicide

ಜಶ್ಪುರ: ಛತ್ತೀಸ್​ಗಢದ ಜಶ್ಪುರಾ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಬೇಕಾದ ಮುಖ್ಯೋಪಾದ್ಯಯನೊಬ್ಬ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಅವನ ಕಿರುಕುಳ ಸಹಿಸಲಾಗದೇ ಬಾಲಕಿ ಶಾಲೆಯ ಆವರಣದಲ್ಲೇ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾಳೆ ಎಂದು ಮಂಗಳವಾರ(ನ. 25) ವರದಿಯಾಗಿದೆ.
ಜಶ್ಪುರ ಜಿಲ್ಲೆಯ ಬಗಿಚಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲೆಯ ಒಂಬತ್ತನೇ ತರಗತಿಯ 15 ವರ್ಷ ಬಾಲಕಿ ಭಾನುವಾರ(ನ. 23) ಸಂಜೆ ಡೆತ್​ನೋಟ್ ಬರೆದಿಟ್ಟು, ಶಾಲೆಯ ಕೊಠಡಿಯ ಛಾವಣಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.
ಡೆತ್​ನೋಟ್​ನಲ್ಲಿ ಮುಖ್ಯೋಪಾದ್ಯಯ ಕುಲದೀಪನ್ ಟೋಪ್ನೋ ಅವರ ಕಿರುಕುಳವೇ ತನ್ನ ಸಾವಿಗೆ ಕಾರಣ ಎಂದು ಬರೆದಿದ್ದಾಳೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಮುಖ್ಯೋಪಾದ್ಯಯನನ್ನು ಬಂಧಿಸಿದ್ದಾರೆ.
ಈ ಕುರಿತು ಮಾತನಾಡಿರುವ ಜಶ್ಪುರ ಎಸ್​ಪಿ ಮೋಹನ್ ಸಿಂಗ್, ಸಂತ್ರಸ್ತ ಬಾಲಕಿ ಸುರ್ಗುಜಾ ಜಿಲ್ಲೆಯ ಸೀತಾಪುರ ಪ್ರದೇಶದವಳು. ಡಕಟ್ಟು ಮತ್ತು ಪೊಲೀಸ್ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡವು ಶಾಲೆಯಲ್ಲಿ ನಡೆದ ಘಟನೆಯ ಬಗ್ಗೆ ತನಿಖೆ ನಡೆಸಿದೆ. 6-12 ನೇ ತರಗತಿಯ 124 ವಿದ್ಯಾರ್ಥಿಗಳು ಶಾಲೆಯಲ್ಲಿ ಓದುತ್ತಿದ್ದಾರೆ, ಅದರಲ್ಲಿ 22 ಹುಡುಗರು ಮತ್ತು 11 ಹುಡುಗಿಯರು ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಹಾಸ್ಟೆಲ್ ಅಗತ್ಯ ಪರವಾನಗಿಗಳನ್ನು ಹೊಂದಿಲ್ಲ ಎಂದು ಕಂಡುಬಂದಿದೆ. ಶಾಲೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಯ ಬಗ್ಗೆ ತನಿಖೆಗೆ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದಾರೆ. ತನಿಖೆಯಲ್ಲಿ ಎಲ್ಲಾ ಸತ್ಯಗಳು ಹೊರಬರುತ್ತವೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).