ಮುಂಬೈ: ಬೀದಿ ನಾಯಿಯೊಂದರ(Animal Cruelty) ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 40 ವರ್ಷದ ವ್ಯಕ್ತಿಯನ್ನು ಸಮತಾ ನಗರ ಪೊಲೀಸರು ಬಂಧಿಸಿದ ಘಟನೆಯೊಂದು ಮುಂಬೈನ ಕಾಂದಿವಲಿ ಪೂರ್ವದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಫೆ.1 ರಂದು ಸ್ಥಳೀಯ ಸಮಾಜ ಸೇವಕಿಯೊಬ್ಬರು ಲೋಖಂಡ್‌ವಾಲಾ ಕಾಂಪ್ಲೆಕ್ಸ್ ಸಮೀಪದ ಚರಂಡಿಯ ಬಳಿ ಗುಂಪು ಸೇರಿರುವುದನ್ನು ಗಮನಿಸಿದರು. ಅಲ್ಲಿ ಹೋಗಿ ನೋಡಿದಾಗ, ಆರೋಪಿ ಸಂಜಯ್ ಗೌಡ್(40) ಎಂಬಾತ ಚರಂಡಿಯೊಳಗೆ ನಾಯಿಯೊಂದರ ಮೇಲೆ ಅತ್ಯಾಚಾರ ಎಸಗುತ್ತಿರುವುದು ಬೆಳಕಿಗೆ ಬಂದಿದೆ. ಆ ಸಮಯದಲ್ಲಿ ಮೂಕಪ್ರಾಣಿಯು ನೋವಿನಿಂದ ಕಿರುಚುತ್ತಿತ್ತು.
ಸಮಾಜ ಸೇವಕಿ ತಕ್ಷಣವೇ ಮಧ್ಯಪ್ರವೇಶಿಸಿ ನಾಯಿಯನ್ನು ರಕ್ಷಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಶ್ವಾನವನ್ನು ಪರೆಲ್ ಪ್ರಾಣಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ತಪಾಸಣೆಯ ನಂತರ, ನಾಯಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ.
ಈ ಕುರಿತು ಸಮಾಜ ಸೇವಕಿ ನೀಡಿದ ದೂರಿನ ಮೇರೆಗೆ ಸಮತಾ ನಗರ ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಆರೋಪಿ ಸಂಜಯ್ ಗೌಡ್ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆ ,ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿ ಆತನನ್ನು ಜೈಲಿಗಟ್ಟಲಾಗಿದೆ.ಪ್ರಾಣಿಗಳ ಮೇಲಿನ ಇಂತಹ ಕ್ರೌರ್ಯವು ಸಮಾಜದಲ್ಲಿನ ವಿಕೃತ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ,(ಏಜೆನ್ಸೀಸ್).