ವಾಟ್ಸಾಪ್ ಖಾತೆಗಳು ದಿಢೀರ್ ಲಾಕ್ !( WhatsApp Blocked ಚಿತ್ರ X)
ನವದೆಹಲಿ: ಭಾರತವೂ ಸೇರಿದಂತೆ ಜಾಗತಿಕವಾಗಿ ಹಲವು ವಾಟ್ಸಾಪ್ ಬಳಕೆದಾರರಿಗೆ ಇತ್ತೀಚೆಗೆ ದೊಡ್ಡ ಆಘಾತ ಎದುರಾಗಿದೆ. ಯಾವುದೇ ಮುನ್ಸೂಚನೆ ನೀಡದೆ ವಾಟ್ಸಾಪ್
ಸಂಸ್ಥೆಯು ನೂರಾರು ಬಳಕೆದಾರರ ಖಾತೆಗಳನ್ನು 24 ಗಂಟೆಗಳ ಕಾಲ ತಾತ್ಕಾಲಿಕವಾಗಿ ಪರಿಶೀಲನೆಗೆ ಒಳಪಡಿಸಿದ್ದು, ಈ ಅವಧಿಯಲ್ಲಿ ಆ್ಯಪ್‌ನ ಯಾವುದೇ ವೈಶಿಷ್ಟ್ಯಗಳನ್ನು ಬಳಸದಂತೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ಸೋಮವಾರ ಸಂಜೆ ಸುಮಾರು 8 ಗಂಟೆಯ ವೇಳೆಗೆ ಬಳಕೆದಾರರಲ್ಲಿ ಈ ಸಮಸ್ಯೆ ವ್ಯಾಪಕವಾಗಿ ಕಾಣಿಸಿಕೊಂಡಿತು. ಬಳಕೆದಾರರು ಆ್ಯಪ್ ತೆರೆದಾಗ, "ನಿಮ್ಮ ಖಾತೆಯ ಚಟುವಟಿಕೆ ಮತ್ತು ಸಾಧನದ (Device) ಮಾಹಿತಿಯನ್ನು ವಾಟ್ಸಾಪ್ ಸೇವಾ ನಿಯಮಗಳಿಗೆ ಅನುಗುಣವಾಗಿದೆಯೇ ಎಂದು ಪರಿಶೀಲಿಸಲಾಗುತ್ತಿದೆ" ಎಂಬ ಸಂದೇಶ ಪರದೆಯ ಮೇಲೆ ಗೋಚರಿಸಿತು. ಇದರ ಜೊತೆಗೆ ಮುಂದಿನ 24 ಗಂಟೆಗಳಲ್ಲಿ ಈ ಪರಿಶೀಲನೆಯ ಅಂತಿಮ ನಿರ್ಧಾರ ತಿಳಿಸಲಾಗುವುದು ಎಂದು ಸಂಸ್ಥೆಯು ಬಳಕೆದಾರರಿಗೆ ಸೂಚಿಸಿತ್ತು.
ವಾಟ್ಸಾಪ್ ನೀಡಿದ ಅಧಿಕೃತ ಸ್ಪಷ್ಟನೆ ಏನು?
ಆದರೆ, ಕೆಲವು ಸಂದರ್ಭಗಳಲ್ಲಿ ನಮ್ಮ ತಾಂತ್ರಿಕ ವ್ಯವಸ್ಥೆಯಲ್ಲಿ ತಪ್ಪುಗಳು ಸಂಭವಿಸುವ ಸಾಧ್ಯತೆಯೂ ಇರುತ್ತದೆ. ಅಂತಹ ಸಂದರ್ಭಗಳಲ್ಲಿ, ತಪ್ಪುಗಳನ್ನು ಶೀಘ್ರವಾಗಿ ಸರಿಪಡಿಸಿ ಬಳಕೆದಾರರ ಖಾತೆಗಳನ್ನು ಮರಳಿ ಸಕ್ರಿಯಗೊಳಿಸಲು ನಾವು ತಕ್ಷಣದ ಕ್ರಮ ಕೈಗೊಳ್ಳುತ್ತೇವೆ," ಎಂದು ವಿವರಣೆ ನೀಡಿದ್ದಾರೆ.
ಹಠಾತ್ ನಿರ್ಬಂಧ: ಬಳಕೆದಾರರ ಆಕ್ರೋಶ
ಹಠಾತ್ ನಿರ್ಬಂಧಗಳ ಬಗ್ಗೆ ಹಲವಾರು ಬಾಧಿತ ಬಳಕೆದಾರರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ದೂರುಗಳನ್ನು ಸಲ್ಲಿಸಿದ್ದರು ಯಾವುದೇ ವಿವರಣೆಯಿಲ್ಲದೇ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಒಬ್ಬ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದರೆ, ಅಧಿಕೃತ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಮಾತ್ರ ಬಳಸುತ್ತಿದ್ದರೂ ಎಚ್ಚರಿಕೆ ಇಲ್ಲದೆ ಅಮಾನತುಗೊಳಿಸಲಾಗಿದೆ ಎಂದು ಮತ್ತೊಬ್ಬರು ಹೇಳಿಕೊಂಡಿದ್ದಾರೆ.
ಆದಾಗ್ಯೂ, ವಾಟ್ಸಾಪ್ ಹಲವಾರು ಖಾತೆಗಳನ್ನು 24 ಗಂಟೆಗಳ ಕಾಲ ತನಿಖೆಗೆ ಒಳಪಡಿಸಿದೆ. ಸೋಮವಾರ ಸಂಜೆ ವಾಟ್ಸಾಪ್ ಇದ್ದಕ್ಕಿದ್ದಂತೆ ಹಲವಾರು ಬಳಕೆದಾರರ ಖಾತೆಗಳನ್ನು ತನಿಖೆಗೆ ಒಳಪಡಿಸಿದೆ. ಪರಿಣಾಮವಾಗಿ, ಅವರು ಅಪ್ಲಿಕೇಶನ್‌ನ ವೈಶಿಷ್ಟ್ಯಗಳನ್ನು 24 ಗಂಟೆಗಳ ಕಾಲ ಬಳಸಲು ಸಾಧ್ಯವಾಗಲಿಲ್ಲ ಎಂದು ಎಕ್ಸ್ನಲ್ಲಿ ಬಳಕೆದಾರರೊಬ್ಬರು ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ಕ್ರಮವು ಭಾರತ ಮತ್ತು ಇತರ ಹಲವಾರು ಸ್ಥಳಗಳಲ್ಲಿ ಜನರನ್ನು ನಿರಾಶೆಗೊಳಿಸಿದೆ ಮತ್ತು ಅವರು ಸಾಮಾಜಿಕ ಮಾಧ್ಯಮಗಳಲ್ಲಿಯೂ ತಮ್ಮ ದೂರುಗಳನ್ನು ದಾಖಲಿಸಿದ್ದಾರೆ ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಪೋಸ್ಟ್ ನಿರ್ಬಂಧ: ಕ್ಷಮೆಗೆ ಮೆಟಾ ಮುಂದು
ಸಾಮಾಜಿಕ ಜಾಲತಾಣ ದೈತ್ಯ 'ಮೆಟಾ' ಸಂಸ್ಥೆಗೆ ಭಾರತ ಸರ್ಕಾರದ ಸಂಸದೀಯ ಸಮಿತಿಯು ಗಂಭೀರ ಎಚ್ಚರಿಕೆ ನೀಡಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್‌ಬುಕ್ ಖಾತೆಯ ಪೋಸ್ಟ್ ಒಂದಕ್ಕೆ ಅನಗತ್ಯವಾಗಿ ತಾತ್ಕಾಲಿಕ ತಡೆ ಹೇರಿದ್ದಕ್ಕೆ ಮೆಟಾ ತನ್ನ ತಪ್ಪೊಪ್ಪಿಕೊಂಡು ಕ್ಷಮೆ ಯಾಚಿಸಲು ಮುಂದಾಗಿದೆ.
ಮಾಹಿತಿ ತಂತ್ರಜ್ಞಾನ ವಿಷಯಕ್ಕೆ ಸಂಬಂಧಿಸಿದ ಸ್ಥಾಯಿ ಸಮಿತಿಯ ಮುಖಾಮುಖಿ ಸಭೆಯಲ್ಲಿ ಈ ವಿಷಯ ತೀವ್ರ ಚರ್ಚೆಗೆ ಗ್ರಾಸವಾಯಿತು. ಭಾರತದ ಕೋಟ್ಯಂತರ ಬಳಕೆದಾರರಿಂದ ಕೋಟಿಗಟ್ಟಲೆ ಲಾಭ ಗಳಿಸುವ ಸಂಸ್ಥೆಯು, ಇಲ್ಲಿನ ನಿಯಮಗಳನ್ನು ಗಾಳಿಗೆ ತೂರುತ್ತಿರುವುದಕ್ಕೆ ಸಂಸದರು ಆಕ್ಷೇಪ ವ್ಯಕ್ತಪಡಿಸಿದರು. ಬರಿ ಬಾಯಲ್ಲಿ ಕ್ಷಮೆ ಕೇಳಿದರೆ ಸಾಲದು, ಈ ಎಡವಟ್ಟಿಗೆ ಕಾರಣರಾದವರನ್ನು ಗುರುತಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲೇಬೇಕು ಎಂದು ಜನಪ್ರತಿನಿಧಿಗಳು ಪಟ್ಟು ಹಿಡಿದಿದ್ದಾರೆ (ಏಜೆನ್ಸೀಸ್).