ಮುಂಬೈ: ಜಾಗತಿಕ ರಾಜಕೀಯ ಬಿಕ್ಕಟ್ಟು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ಆರ್ಥಿಕ ನಿಲುವುಗಳು ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಸುನಾಮಿಯಂತೆ ಅಪ್ಪಳಿಸಿವೆ. ಮಂಗಳವಾರದ ವಹಿವಾಟಿನಲ್ಲಿ ಮುಂಬೈ ಷೇರು ಪೇಟೆಯಲ್ಲಿನ(Stock market) ಸೂಚ್ಯಂಕ ಸೆನ್ಸೆಕ್ಸ್ 1,000ಕ್ಕೂ ಹೆಚ್ಚು ಅಂಕಗಳ ಭಾರಿ ಕುಸಿತ ಕಾಣುವ ಮೂಲಕ ಹೂಡಿಕೆದಾರರನ್ನು ಕಂಗಾಲಾಗಿಸಿದೆ.
ಮಾರುಕಟ್ಟೆಯ ಇಂದಿನ ಸ್ಥಿತಿಗತಿ
ಇಂದಿನ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 82,180.47 ಅಂಕಗಳಿಗೆ ಕುಸಿದರೆ, ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 350 ಅಂಕಗಳಿಗಿಂತಲೂ ಅಧಿಕ ಕುಸಿತ ಕಂಡು 25,232.50 ಅಂಕಗಳಲ್ಲಿ ಸ್ಥಿರವಾಯಿತು. ಅಲ್ಲದೆ, ಮಾರುಕಟ್ಟೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಹೂಡಿಕೆದಾರರು ಭಾರಿ ಪ್ರಮಾಣದ ಷೇರುಗಳನ್ನು ಮಾರಾಟ ಮಾಡಿದ್ದರಿಂದ ಸೂಚ್ಯಂಕಗಳು ಪಾತಾಳಕ್ಕೆ ಇಳಿದವು.
ಕುಸಿತಕ್ಕೆ ಪ್ರಮುಖ ಕಾರಣಗಳೇನು..?
ಷೇರು ಮಾರುಕಟ್ಟೆಯ ಈ ದಿಢೀರ್ ಕುಸಿತಕ್ಕೆ ಪ್ರಮುಖವಾಗಿ ಎರಡು ಕಾರಣಗಳು
ಟ್ರಂಪ್ ಸುಂಕದ ಎಚ್ಚರಿಕೆ
ಗ್ರೀನ್‌ಲ್ಯಾಂಡ್ ಸ್ವಾಧೀನದ ವಿಷಯದಲ್ಲಿ ಅಮೆರಿಕಕ್ಕೆ ಬೆಂಬಲ ನೀಡದ ಯುರೋಪಿಯನ್ ರಾಷ್ಟ್ರಗಳ ವಿರುದ್ಧ ಟ್ರಂಪ್ ಭಾರಿ ಆಮದು ಸುಂಕ ಹೇರುವ ಬೆದರಿಕೆ ಹಾಕಿದ್ದಾರೆ. ಈ ಜಾಗತಿಕ ವ್ಯಾಪಾರ ಸಮರದ ಭೀತಿಯು ಹೂಡಿಕೆದಾರರಲ್ಲಿ ಅಸ್ಥಿರತೆ ಸೃಷ್ಟಿಸಿದೆ.
ವಿದೇಶಿ ಹೂಡಿಕೆದಾರರ ಪಲಾಯನ
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಭಾರತೀಯ ಮಾರುಕಟ್ಟೆಯಿಂದ ಸತತವಾಗಿ ಹಣವನ್ನು ಹಿಂತೆಗೆದುಕೊಳ್ಳುತ್ತಿರುವುದು ಮಾರುಕಟ್ಟೆಯ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.
ಯಾವೆಲ್ಲಾ ಷೇರುಗಳು ನೆಲಕಚ್ಚಿವೆ..?
ಇಂದಿನ ವಹಿವಾಟಿನಲ್ಲಿ ಪ್ರಮುಖ ಕಂಪನಿಗಳು ಭಾರಿ ನಷ್ಟ ಅನುಭವಿಸಿವೆ. ಬಿಎಸ್‌ಇ (BSE) ಪಟ್ಟಿಯಲ್ಲಿ ಅತಿ ಹೆಚ್ಚು ನಷ್ಟ ಕಂಡ ಕಂಪನಿಗಳೆಂದರೆ:
2. ಬಜಾಜ್ ಫೈನಾನ್ಸ್ (Bajaj Finance)
3. ಸನ್ ಫಾರ್ಮಾ (Sun Pharma)
ವಿಶೇಷವಾಗಿ ಬ್ಯಾಂಕಿಂಗ್, ಫಾರ್ಮಾ ಮತ್ತು ಏವಿಯೇಷನ್ ವಲಯದ ಷೇರುಗಳಲ್ಲಿ ಭಾರಿ ಮಾರಾಟದ ಒತ್ತಡ ಕಂಡುಬಂದಿದೆ.
ಹೂಡಿಕೆದಾರರಿಗೆ ಆತಂಕ
ಜಾಗತಿಕ ಮಟ್ಟದಲ್ಲಿ ಅಸ್ಥಿರತೆ ಮುಂದುವರಿಯುತ್ತಿರುವುದರಿಂದ, ಮುಂಬರುವ ದಿನಗಳಲ್ಲಿ ಮಾರುಕಟ್ಟೆ ಮತ್ತಷ್ಟು ಏರಿಳಿತಗಳನ್ನು ಕಾಣುವ ಸಾಧ್ಯತೆಯಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಟ್ರಂಪ್ ಅವರ ಮುಂದಿನ ನಡೆಗಳು ಜಾಗತಿಕ ಆರ್ಥಿಕತೆಯ ದಿಕ್ಕನ್ನು ನಿರ್ಧರಿಸಲಿವೆ,(ಏಜೆನ್ಸೀಸ್).