Employee Harassment (ಸಾಂದರ್ಭಿಕ ಚಿತ್ರ)
ಮಹಾರಾಷ್ಟ್ರ: ನಾಸಿಕ್‌ನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಶಾಖೆಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಬಲವಂತದ ಮತಾಂತರದ ಪ್ರಯತ್ನಗಳ ಕುರಿತಾದ ಗಂಭೀರ ಆರೋಪಗಳು ಕೇಳಿಬರುತ್ತಿದ್ದು, ಐಟಿ ವಲಯದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಆದಾಗ್ಯೂ, ಮಹಿಳಾ ಉದ್ಯೋಗಿಗಳ ದೂರಿನ ಬೆನ್ನಲ್ಲೇ ಈಗ ಪುರುಷ ಸಹೋದ್ಯೋಗಿಯೊಬ್ಬರು (Employee Harassment) ತಮಗಾದ ಕಿರುಕುಳದ ಬಗ್ಗೆ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.
ನಮಾಜ್ ಮಾಡಲು ಒತ್ತಾಯ ಮತ್ತು ಮಾನಸಿಕ ಕಿರುಕುಳ
ಸಂತ್ರಸ್ತ ಪುರುಷ ಉದ್ಯೋಗಿಯ ಪ್ರಕಾರ, ಕಚೇರಿಯಲ್ಲಿನ ಕೆಲವು ಸಹೋದ್ಯೋಗಿಗಳು ಬಲವಂತವಾಗಿ ತಲೆಗೆ ಟೋಪಿ ಹಾಕಿ ನಮಾಜ್ ಮಾಡಲು ಒತ್ತಾಯಿಸುತ್ತಿದ್ದಾರೆ. ಜೊತೆಗೆ ನಿಮಗೆ ಮಗು ಬೇಕಾದರೆ ನಿನ್ನ ಹೆಂಡತಿಯನ್ನು ನನ್ನ ಬಳಿ ಕಳುಹಿಸು ಎಂದು ಕೀಳುಮಟ್ಟದಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.
2022 ರಿಂದಲೇ ಕಿರುಕುಳ ಆರಂಭ
ಉದ್ಯೋಗಿಯು 2022 ರಲ್ಲಿ ಕಂಪನಿಗೆ ಸೇರಿದ ಕೆಲವೇ ದಿನಗಳಲ್ಲಿ ತಂಡದ ನಾಯಕ ತೌಸಿಫ್ ಅಖ್ತರ್ ಸಹೋದ್ಯೋಗಿ ಡ್ಯಾನಿಶ್ ಶೇಖ್ರನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡಲು ಆರಂಭಿಸಿದ್ದರು. ಆದಾಗ್ಯೂ, ತನ್ನ ಕೆಲಸದ ಜೊತೆಗೆ ಇತರ ಸಹೋದ್ಯೋಗಿಗಳಿಗೆ ಸೇರಿದ ಕೆಲಸಗಳನ್ನೂ ಮಾಡುವಂತೆ ಬಲವಂತಪಡಿಸಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.
ಧಾರ್ಮಿಕ ಅವಮಾನ
ಆರೋಪಿ ತೌಸಿಫ್ ನಿರಂತರವಾಗಿ ಹಿಂದೂ ದೇವರುಗಳು ಮತ್ತು ಆಚರಣೆಗಳನ್ನು ಅಪಹಾಸ್ಯ ಮಾಡುತ್ತಿದ್ದ ಜೊತೆಗೆ ಸಸ್ಯಹಾರಿಯಾಗಿದ್ದ ನನ್ನನ್ನು ಮಾಂಸ ತಿನ್ನುವಂತೆ ಒತ್ತಾಯಿಸಲಾಯಿತು. 2023 ರ ಈದ್ ದಿನದಂದು ಮನೆಗೆ ಕರೆದೊಯ್ದು ಪ್ರಾರ್ಥನೆ ಮಾಡುವಂತೆ ಕಿರುಕುಳ ನೀಡಿದರು. ಆ ಫೋಟೋಗಳನ್ನು ಕಚೇರಿಯ ಗುಂಪುಗಳಲ್ಲಿ ಹಂಚಿಕೊಳ್ಳುವ ಮೂಲಕ ನನ್ನನ್ನು ಅವಮಾನಿಸಿದ ಎಂದು ಹೇಳಿದ್ದಾರೆ.
ಮಕ್ಕಳಿಲ್ಲ ಎಂದು ಅಪಹಾಸ್ಯ ಮಾಡುತ್ತಿದ್ದ ಆರೋಪಿ ತುಂಬಾ ಕೆಟ್ಟದಾಗಿ ಮಾತನಾಡುತ್ತಿದ್ದ. ಇದನ್ನು ಖಂಡಿಸಿದ್ದಕ್ಕೆ ಅವನ ಮೇಲೆ ಟೇಬಲ್ ಫ್ಯಾನ್ ಎಸೆದು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ನಿನ್ನ ತಂದೆಯ ಆರೋಗ್ಯ ಸರಿಹೋಗಬೇಕೆಂದರೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಬೇಕು ಆಗ ಮಾತ್ರ ಚೇತರಿಸಿಕೊಳ್ಳುತ್ತಾರೆ ಎಂದು ಹೇಳುತ್ತಿದ್ದ ಎಂದು ತಿಳಿಸಿದ್ದಾರೆ.
ಈ ಕಿರುಕುಳ 2022 ರಿಂದ ಮಾರ್ಚ್ 2026 ರ ವರೆಗೂ ನಡೆದಿದೆ. ಅವರೆ ಬೇಡಿಕೆಗಳನ್ನು ಈಡೇರಿಸುವುದನ್ನು ನಿಲ್ಲಿಸಿದ ನಂತರ ಕಂಪನಿಯ ಮುಖ್ಯ ಕಚೇರಿಯಲ್ಲಿ ಸುಳ್ಳು ದೂರುಗಳನ್ನು ದಾಖಲಿಸಿ ಕೆಲಸದಿಂದ ವಜಾಗೊಳಿಸುವಂತೆ ಹೇಳಿದ್ದಾರೆ. ಆದಾಗ್ಯೂ, ನಾಸಿಕ್ ಘಟಕದ ವಿವಿಧ ಮಹಿಳಾ ಉದ್ಯೋಗಿಗಳು ಸಲ್ಲಿಸಿದ ದೂರುಗಳ ಆಧಾರದ ಮೇಲೆ ಪೊಲೀಸರು ಸುಮಾರು ಒಂಬತ್ತು ಪ್ರಕರಣಗಳನ್ನು ದಾಖಲಿಸಿದ್ದಾರೆ.
ಪೊಲೀಸರು ಈಗಾಗಲೇ ತೌಸಿಫ್, ಡ್ಯಾನಿಶ್ ಮತ್ತು ಸಿಇಒ ನಿದಾ ಖಾನ್ ಸೇರಿದಂತೆ ಒಂಬತ್ತು ಜನರನ್ನು ಬಂಧಿಸಿದ್ದು, ಆರೋಪಿಗಳು ಮೊದಲು ಸ್ನೇಹ ಬೆಳೆಸಿಕೊಂಡು ನಂತರ ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ (ಏಜೆನ್ಸೀಸ್).