ರಾಮ ಮಂದಿರ ಪ್ರಸಾದ’ ಹೆಸರಿನಲ್ಲಿ ಲಡ್ಡು ಮಾರಾಟ 
ದೇಶ

‘ರಾಮ ಮಂದಿರ ಪ್ರಸಾದ’ ಹೆಸರಿನಲ್ಲಿ ಲಡ್ಡು ಮಾರಾಟ: Amazonಗೆ 1 ಲಕ್ಷ ರೂ. ದಂಡ | Ram Mandir Prasad

ಪ್ರಮುಖ ಮುಖ್ಯಾಂಶಗಳು

  • ಅಮೆಜಾನ್​ಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದಿಂದ 1 ಲಕ್ಷ ದಂಡ
  • ಶ್ರೀ ರಾಮ ಮಂದಿರ ಅಯೋಧ್ಯಾ ಪ್ರಸಾದ ಹೆಸರಿನಲ್ಲಿ ಮೋಸ?
  • ಗ್ರಾಹಕರನ್ನು ತಪ್ಪುದಾರಿಗೆಳೆಯುವ ವ್ಯಾಪಾರ ತಂತ್ರ ಎಂದ CCPA
ನವದೆಹಲಿ: ‘ಶ್ರೀ ರಾಮ ಮಂದಿರ ಅಯೋಧ್ಯಾ ಪ್ರಸಾದ‘ ಹೆಸರಿನಲ್ಲಿ ಮಾಮೂಲಿ ಸಿಹಿತಿಂಡಿಗಳನ್ನು ಆನ್‌ಲೈನ್‌ ಮಾರಾಟಕ್ಕೆ ಅವಕಾಶ ನೀಡಿದ್ದಕ್ಕೆ ಇ-ಕಾಮರ್ಸ್ ಅಮೆಜಾನ್​​ಗೆ, ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) 1 ಲಕ್ಷ ರೂ.ದಂಡ ವಿಧಿಸಿದೆ.
ಇನ್ನು, ಅಮೆಜಾನ್​​ನಲ್ಲಿ ಬಿಹಾರ್ ಬ್ರದರ್ಸ್ ಬ್ರ್ಯಾಂಡ್ ಹೆಸರಿನಲ್ಲಿ ಚಂದು ಟ್ರೇಡಿಂಗ್ ಕಂಪನಿ ಮಾರಾಟ ಮಾಡುತ್ತಿದ್ದ ಗೀ ಲಡ್ಡು, ಖೋವಾ ಲಡ್ಡು, ಬೂಂದಿ ಲಡ್ಡು ಹಾಗೂ ಹಸುವಿನ ಹಾಲಿನ ಪೇಡಾಗಳನ್ನು ಶ್ರೀ ರಾಮ ಮಂದಿರ ಅಯೋಧ್ಯಾ ಪ್ರಸಾದ ಎಂದು ಮಾರಾಟಾ ಮಾಡಲಾಗುತ್ತಿತ್ತು.

ರಾಮ ಮಂದಿರದ ಹೆಸರಲ್ಲಿ ಸಿಹಿತಿಂಡಿ ಮಾರಾಟ

ಈ ಉತ್ಪನ್ನಗಳ ಮಾರಾಟಕ್ಕೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ಯಾವುದೇ ಅನುಮತಿ ಪಡೆದಿರರಲಿಲ್ಲ ಎಂದು ಸಿಸಿಪಿಎ ಹೇಳಿದೆ. ಹೀಗಾಗಿ ಭಕ್ತರು ಈ ಸಿಹಿತಿಂಡಿಗಳನ್ನು ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಸಾದ ಎಂದು ತಪ್ಪಾಗಿ ಭಾವಿಸಬಹುದು ಎಂದು ಪ್ರಾಧಿಕಾರ ಹೇಳಿದೆ.

ಅಮೆಜಾನ್​ನಲ್ಲಿ ಮಾರಾಟಕ್ಕೆ ಅವಕಾಶ

ಅಮೆಜಾನ್​ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಉತ್ಪನ್ನಗಳನ್ನು ಹೋಸ್ಟ್, ಡಿಸ್‌ಪ್ಲೇ ಮತ್ತು ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಅಮೆಜಾನ್ ಕೂಡ ಜನರ ದಿಕ್ಕು ತಪ್ಪಿಸುವ ಜಾಹೀರಾತಲ್ಲಿ ಭಾಗಿಯಾಗಿದೆ ಎಂದು ಸಿಸಿಪಿಎ ಹೇಳಿದೆ. ಜನವರಿ 2024ರಲ್ಲಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAIT) ನೀಡಿದ ದೂರಿನ ಮೇಲೆ ಈ ವಿಚಾರಣೆ ನಡೆದಿತ್ತು. ಸಿಸಿಪಿಎ ಮುಖ್ಯ ಆಯುಕ್ತೆ ನಿಧಿ ಖರೆ ಮತ್ತು ಆಯುಕ್ತ ಅನುಪಮ್ ಮಿಶ್ರಾ ಅವರು ಆಗಸ್ಟ್ ಈ ಆದೇಶ ಹೊರಡಿಸಿದ್ದಾರೆ.

ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ

ಸಾಮಾನ್ಯ ಸಿಹಿತಿಂಡಿಗಳಿಗೆ ಧಾರ್ಮಿಕ ಹೆಸರನ್ನು ಬಳಸಿಕೊಂಡು ವ್ಯಾಪಾರ ನಡೆಸುವುದು ಗ್ರಾಹಕರನ್ನು ತಪ್ಪುದಾರಿಗೆಳೆಯುವುದಷ್ಟೇ ಅಲ್ಲ, ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ಉಂಟುಮಾಡಬಹುದು ಎಂದು ಸಿಸಿಪಿಎ ತನ್ನ ಆದೇಶದಲ್ಲಿ ತಿಳಿಸಿದೆ,(ಏಜೆನ್ಸೀಸ್​).