6ನೇ ಮಗುವಿಗೆ ಜನ್ಮ ನೀಡಿದ ಪಾಕ್​ ಮೂಲದ ಸೀಮಾ ಹೈದರ್​ (Seema Haider ) 
ದೇಶ

6ನೇ ಮಗುವಿಗೆ ಜನ್ಮ ನೀಡಿದ ಪಾಕ್​ ಮೂಲದ ಸೀಮಾ: ಗಂಡು ಮಗು ಜನನ, ಸಚಿನ್​ ಮನೆಯಲ್ಲಿ ಸಂಭ್ರಮ! Seema Haider

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದು ಮದುವೆಯಾಗಿ ಜೀವನ ನಡೆಸುತ್ತಿರುವ ಸೀಮಾ ಹೈದರ್
  • ಗ್ರೇಟರ್ ನೋಯ್ಡಾದ ಆಸ್ಪತ್ರೆಯಲ್ಲಿ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ ಸೀಮಾ
  • ಗಂಡು ಮಗು ಜನನದ ಬಳಿಕ ಸಚಿನ್​ ಮೀನ ಮನೆಯಲ್ಲಿ ಮನೆ ಮಾಡಿದ ಸಂತಸ
Seema Haider : ತನ್ನ ಪ್ರಿಯಕರನನ್ನು ಹುಡುಕಿಕೊಂಡು ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದು ಮದುವೆಯಾಗಿ ಜೀವನ ನಡೆಸುತ್ತಿರುವ ಸೀಮಾ ಹೈದರ್, ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಗ್ರೇಟರ್ ನೋಯ್ಡಾದ ಆಸ್ಪತ್ರೆಯಲ್ಲಿ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಆರನೇ ಮಗುವಿನ ತಾಯಿಯಾಗಿದ್ದಾರೆ.
ತಾಯಿ ಮತ್ತು ನವಜಾತ ಶಿಶು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ, ಸೀಮಾ ತಮ್ಮ ಪತಿ ಸಚಿನ್ ಮೀನ ಅವರೊಂದಿಗೆ ರಬುಪುರದಲ್ಲಿರುವ ತಮ್ಮ ಮನೆಗೆ ತಲುಪಿದರು. ಇದೀಗ ಮಗನ ಜನನವು ಇಡೀ ಕುಟುಂಬಕ್ಕೆ ಸಂತೋಷ ತಂದಿದೆ.
ಅಂದಹಾಗೆ, ಸೀಮಾ 2023 ರಿಂದಲೂ ಗ್ರೇಟರ್ ನೋಯ್ಡಾದ ರಬುಪುರದಲ್ಲಿ ಸಚಿನ್ ಮೀನಾ ಅವರೊಂದಿಗೆ ವಾಸಿಸುತ್ತಿದ್ದಾರೆ. ಸೀಮಾ 11 ತಿಂಗಳ ಹಿಂದಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಪಾಕಿಸ್ತಾನದ ಮಾಜಿ ಪತಿ ಗುಲಾಮ್ ಹೈದರ್​ ಜತೆ ನಾಲ್ವರು ಮಕ್ಕಳಿಗೆ ಜನ್ಮ ನೀಡಿರುವ ಸೀಮಾ ಹೈದರ್​, ಸಚಿನ್ ಮೀನ ಅವರೊಂದಿಗೆ ಇದು ಎರಡನೇ ಮಗುವಾಗಿದೆ. ಒಟ್ಟು ಆರು ಮಕ್ಕಳು ಸೀಮಾ ಜತೆಯಲ್ಲೇ ಇವೆ.
ಸೀಮಾ ಮತ್ತು ಗುಲಾಮ್ ಹೈದರ್ 2014 ರಲ್ಲಿ ವಿವಾಹವಾದರು. 2019 ರಲ್ಲಿ, ಗುಲಾಮ್ ಹೈದರ್ ತನ್ನ ಪತ್ನಿ ಸೀಮಾ ಮತ್ತು ನಾಲ್ವರು ಮಕ್ಕಳನ್ನು ಕರಾಚಿಯಲ್ಲೇ ಬಿಟ್ಟು ದುಬೈಗೆ ತೆರಳಿದರು. ಈ ಸಮಯದಲ್ಲಿ, ಸೀಮಾ PUBG ಆಡುವಾಗ ನೋಯ್ಡಾದ ಸಚಿನ್ ಮೀನಾರನ್ನು ಆನ್‌ಲೈನ್‌ನಲ್ಲಿ ಭೇಟಿಯಾದರು. ಈ ಭೇಟಿ, ಪರಿಚಯವಾಗಿ ನಂತರ, ಪ್ರೇಮಕ್ಕೆ ತಿರುಗಿತು.
ಪ್ರೀತಿಯಲ್ಲಿ ಬಿದ್ದ ಬಳಿಕ, ಉಳಿದ ಜೀವನವನ್ನು ಸಚಿನ್ ಜತೆ ಕಳೆಯಲು ತಮ್ಮ ಮಕ್ಕಳೊಂದಿಗೆ ಸೀಮಾ ಭಾರತಕ್ಕೆ ಬಂದರು. 2023, ಜುಲೈ 3ರಂದು, ಪೊಲೀಸರು ಸೀಮಾ ಮತ್ತು ಸಚಿನ್ ಅವರನ್ನು ಹರಿಯಾಣದ ಬಲ್ಲಭಗಢದಲ್ಲಿ ವಶಕ್ಕೆ ಪಡೆದರು. ನಂತರ, ನ್ಯಾಯಾಲಯವು ಅವರಿಗೆ ಜಾಮೀನು ನೀಡಿತು. ಸೀಮಾ ಭಾರತೀಯ ಪೌರತ್ವಕ್ಕಾಗಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಹಾಗೂ ತನಿಖೆಯಲ್ಲಿ ಇದೆ. ಹೀಗಾಗಿ ಇನ್ನೂ ಆಕೆಗೆ ಪೌರತ್ವ ನೀಡಲಾಗಿಲ್ಲ, (ಏಜೆನ್ಸೀಸ್​).