ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು  
ದೇಶ

ಲೈಟ್​ ಕಂಬಕ್ಕೆ ಕಾರು ಡಿಕ್ಕಿ! ಕೂದಲೆಳೆ ಅಂತರದಲ್ಲಿ ಪಾರಾದ ಸೆಕ್ಯೂರಿಟಿ ಗಾರ್ಡ್ | Car hits light pole

ಪ್ರಮುಖ ಮುಖ್ಯಾಂಶಗಳು

  • ಚಾಲಕನ ನಿಯಂತ್ರಣ ತಪ್ಪಿ ಲೈಟ್​ ಕಂಬಕ್ಕೆ ಕಾರು ಡಿಕ್ಕಿ
  • ಕರೆಂಟ್​​ ಕಂಬದ ಪಕ್ಕದಲ್ಲೇ ಕುಳಿತಿದ್ದ ಸೆಕ್ಯೂರಿಟಿ ಗಾರ್ಡ್
  • ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ
Kerala car accident: ರಸ್ತೆ ಬದಿಯಲ್ಲಿ ಕೂತಿದ್ದ ಸೆಕ್ಯೂರಿಟಿ ಗಾರ್ಡ್‌ವೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಜೋರಾಗಿ ಡಿಕ್ಕಿ ಹೊಡೆದಿದ್ದು, ಈ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಕಡಿಯಂಗಾಡ್‌ನ ‘ಕ್ಯಾಫ್ ರೆಸ್ಟೋ’ ಹೋಟೆಲ್‌ ಎದುರು ಈ ಘಟನೆ ನಡೆದಿದೆ. ವೇಗವಾಗಿ ಬಂದ ಕಾರು ಏಕಾಏಕಿ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ನುಗ್ಗಿದೆ. ಅದೇ ವೇಳೆ ಹೋಟೆಲ್‌ನ ಸೆಕ್ಯೂರಿಟಿ ಗಾರ್ಡ್‌ವೊಬ್ಬರು ವಿದ್ಯುತ್ ಕಂಬದ ಪಕ್ಕದಲ್ಲೇ ಕುಳಿತಿದ್ದರು. ಕಾರು ತಮ್ಮತ್ತ ಬರುತ್ತಿರುವುದನ್ನು ಗಮನಿಸಿದ ಗಾಬರಿಯಿಂದ ಕ್ಷಣಾರ್ಧದಲ್ಲಿ ಎದ್ದು ಪಕ್ಕಕ್ಕೆ ಬಿದ್ದಿದ್ದಾರೆ.

ಕಂಬ ಇಲ್ಲದಿದ್ದರೆ ಸೆಕ್ಯೂರಿಟಿ ಗಾರ್ಡ್‌ಗೆ ಆಪತ್ತು


ಇದಾದ ಕೆಲವೇ ಕ್ಷಣಗಳಲ್ಲಿ ಕಾರು ವಿದ್ಯುತ್ ಕಂಬಕ್ಕೆ ಜೋರಾಗಿ ಡಿಕ್ಕಿ ಹೊಡೆದು ನಿಂತಿದೆ. ಕಂಬ ಇಲ್ಲದಿದ್ದರೆ ಕಾರು ನೇರವಾಗಿ ಸೆಕ್ಯೂರಿಟಿ ಗಾರ್ಡ್‌ಗೆ ಡಿಕ್ಕಿ ಹೊಡೆಯುವ ಸಾಧ್ಯತೆಯಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರು ಎದ್ದು ಸರಿದಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ.

ಅಮಾಯಕರಿಗೆ ಹಠಾತ್ ಎದುರಾಗುವ ಅಪಾಯ

ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಯಾವುದೇ ಪ್ರಾಣಹಾನಿಯೂ ಸಂಭವಿಸಿಲ್ಲ. ಆದರೆ ಏನೂ ಮಾಡದೇ ತಮ್ಮ ಪಾಡಿಗೆ ತಾವು ರಸ್ತೆ ಬದಿಯಲ್ಲಿ ನಿಂತಿದ್ದ ಅಥವಾ ಕುಳಿತಿದ್ದ ಅಮಾಯಕರಿಗೆ ಕ್ಷಣಾರ್ಧದಲ್ಲಿ ಎಂತಹ ಅಪಾಯ ಎದುರಾಗಬಹುದು ಎಂಬುದನ್ನು ಈ ಭೀಕರ ಸಿಸಿಟಿವಿ ದೃಶ್ಯ ಸಾಕ್ಷಿ. ಕೆಲವೇ ಸೆಕೆಂಡ್‌ಗಳಲ್ಲಿ ನಡೆದ ಈ ಘಟನೆ ರಸ್ತೆ ಸಾಮಾನ್ಯರ ಸುರಕ್ಷತೆಯ ಬಗ್ಗೆಯೂ ಪ್ರಶ್ನೆ ಮೂಡಿಸಿದೆ.