ಸಾಂದರ್ಭಿಕ ಚಿತ್ರ 
ದೇಶ

ಶೋಪಿಯಾನ್​ನಲ್ಲಿ ಲಷ್ಕರ್-ಎ-ತೈಬಾದ ಉಗ್ರನೊಬ್ಬನನ್ನು ಎನ್​ಕೌಂಟರ್​ನಲ್ಲಿ ಹತ್ಯೆಗೈದ ಭದ್ರತಾ ಪಡೆಗಳು | LeT terrorist

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಬುಧವಾರ(ಜು. 08) ಭದ್ರತಾ ಪಡೆಗಳು ನಡೆಸಿದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೈಬಾದ ಉಗ್ರನೊಬ್ಬ(LeT terrorist) ಹತ್ಯೆಯಾಗಿದ್ದಾನೆ ಎಂದು ವರದಿಯಾಗಿದೆ.
ಜುಲೈ 3ರಂದು ದಕ್ಷಿಣ ಕಾಶ್ಮೀರದ ಏಳು ಹಳ್ಳಿಗಳನ್ನು ಒಳಗೊಂಡಿರುವ ಮೀಮಂದರ್‌ನ ದಟ್ಟವಾದ ಹಣ್ಣಿನ ತೋಟ ಪ್ರದೇಶದಲ್ಲಿ ಉಗ್ರರಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಚರಣೆ ಆರಂಭಿಸಿದ್ದವು.
ಸೇನೆಯ 55 ರಾಷ್ಟ್ರೀಯ ರೈಫಲ್ಸ್, 44 ರಾಷ್ಟ್ರೀಯ ರೈಫಲ್ಸ್ ಹಾಗೂ ಸಿಆರ್‌ಪಿಎಫ್‌ನ ಜಂಟಿ ತಂಡವು ಕಳೆದ ಐದು ದಿನಗಳಿಂದ ಈ ಪ್ರದೇಶದ ಸುತ್ತಲೂ ಬಿಗಿಯಾದ ಸುತ್ತುವರಿದಿದ್ದವು. ಮತ್ತು ಭದ್ರತಾ ಪಡೆಗಳು ಮತ್ತು ಅಡಗಿದ್ದ ಉಗ್ರರ ನಡುವೆ ಆಗಾಗ್ಗೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಒಬ್ಬ ಉಗ್ರನನ್ನು ಹೊಡೆದುರುಳಿಸಲಾಗಿದೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಮಾಹಿತಿ ನೀಡಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ನೀವು ಓಡಬಹುದು ಆದರೆ ನೀವು ಅಡಗಿಕೊಳ್ಳಲು ಸಾಧ್ಯವಿಲ್ಲ! ಒಬ್ಬ ಲಷ್ಕರ್ ಭಯೋತ್ಪಾದಕನನ್ನು ಶೋಪಿಯಾನ್ ಪ್ರದೇಶದಲ್ಲಿ, RR ಮತ್ತು CRPF ಜೊತೆಗೆ ಜೆಟಿ ಆಪ್‌ನಲ್ಲಿ ತಟಸ್ಥಗೊಳಿಸಲಾಗಿದೆ ಎಂದು ಹೇಳಿದೆ (ಏಜೆನ್ಸೀಸ್).